ಉಪ್ಪಿನಂಗಡಿ: ಇಲ್ಲಿನ ವಲಯ ಅರಣ್ಯ ವ್ಯಾಪ್ತಿಯಲ್ಲಿ ಅಖಿಲ ಭಾರತ ಹುಲಿ ಗಣತಿ-2026ರ ಎರಡನೇ ಹಂತದ ಸಮೀಕ್ಷೆ ಫೆ.16ರಿಂದ ಆರಂಭಗೊಂಡಿದ್ದು, ಮೊಗ್ರು ಅರಣ್ಯ ಪ್ರದೇಶದಲ್ಲಿ ಸಮೀಕ್ಷೆ ನಡೆಸುತ್ತಿದ್ದಾಗ ಕಾಡು ಹಂದಿ ದಾಳಿ ಮಾಡಿ ದಿನಗೂಲಿ ನೌಕರ ಗಾಯಗೊಂಡಿದ್ದಾರೆ.

ಶೇಷಪ್ಪ ಗಾಯಗೊಂಡವರು. ಮೊಗ್ರು ಬ್ಲಾಕ್ ಕಲ್ಲಮಾಡು ಆಲಮಟ್ಟಿ ಪ್ಲಾಂಟೇಷನ್ನ ಬಳಿ ಗಸ್ತು ಅರಣ್ಯ ಪಾಲಕಿ ಜೊತೆ ಸಮೀಕ್ಷೆಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ಸಮೀಕ್ಷೆಯ ವೇಳೆ ಅಗತ್ಯ ರಕ್ಷಣಾ ಸಾಧನ ಮತ್ತು ಸುರಕ್ಷತಾ ಮಾರ್ಗಸೂಚಿ ಇಲ್ಲದೆ ಸಿಬ್ಬಂದಿ ಜೀವ ಭಯದ ನಡುವೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ದೂರುಗಳು ವ್ಯಕ್ತವಾಗಿವೆ.

ನಾಲ್ಕು ದಿನಗಳ ಸಮೀಕ್ಷೆ: ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯಲ್ಲಿ ಎರಡನೇ ಹಂತದ ಸಮೀಕ್ಷೆ ಆರಂಭಗೊಂಡಿದ್ದು, ನಾಲ್ಕು ದಿನ ನಡೆಯಲಿದೆ. ಪ್ರತಿ ಅರಣ್ಯ ಬೀಟ್ನಲ್ಲಿ ಬೆಳಿಗ್ಗೆ ಹಾಗೂ ಸಂಜೆ ಒಟ್ಟು ನಾಲ್ಕು ಕಿ.ಮೀ. ಸಮೀಕ್ಷೆ ನಡೆಯುತ್ತಿದೆ. ಈ ಹಂತದಲ್ಲಿ ಜಿಂಕೆ, ಕಡವೆ, ಕಾಡುಕೋಣ, ಕಾಡುಹಂದಿ ಸೇರಿದಂತೆ ಸಸ್ಯಹಾರಿ ಪ್ರಾಣಿಗಳ ನೇರ ವೀಕ್ಷಣೆ, ಪಾದಚಿಹ್ನೆಗಳು, ವಾಸಸ್ಥಳದ ಸ್ಥಿತಿಗತಿಗಳನ್ನು ದಾಖಲಿಸಲಾಗುತ್ತದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.