ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಹೃದಯ ಜಾಗೃತಿಗಾಗಿ ಮಹಿಳೆಯರ ನಡಿಗೆ

Published 17 ಸೆಪ್ಟೆಂಬರ್ 2023, 14:30 IST
Last Updated 17 ಸೆಪ್ಟೆಂಬರ್ 2023, 14:30 IST
ಅಕ್ಷರ ಗಾತ್ರ

ಮಂಗಳೂರು: ಹೃದಯದ ಆರೋಗ್ಯ ಕುರಿತು ಜಾಗೃತಿ ಮೂಡಿಸಲು ಹಾಗೂ ಮಹಿಳೆಯರ ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಕ್ಕಾಗಿ ನಗರದ ಕೆಎಂಸಿ ಆಸ್ಪತ್ರೆ ಆಯೋಜಿಸಿದ್ದ ‘ವಿಮೆನ್ ಆನ್ ವಾಕ್’ ವಾಕಥಾನ್‌ ಭಾನುವಾರ ಬೆಳಿಗ್ಗೆ ಸಂಚಲನ ಮೂಡಿಸಿತು.

ಮಳೆ ಬಂದು ತಂಪಾಗಿದ್ದ ವಾತಾವರಣದಲ್ಲಿ ಅಂಬೇಡ್ಕರ್ ವೃತ್ತದ ಬಳಿಯಿಂದ ಚಾಲನೆ ಪಡೆದ ನಡಿಗೆ ಅತ್ತಾವರದಲ್ಲಿರುವ ಮರೀನಾ ಕ್ರೀಡಾ ಸಂಕೀರ್ಣದಲ್ಲಿ ಮುಕ್ತಾಯಗೊಂಡಿತು. ಸಂಚಾರ ಉಪವಿಭಾಗದ ಎಸಿಪಿ ಗೀತಾ ಡಿ. ಕುಲಕರ್ಣಿ ಹಸಿರು ನಿಶಾನೆ ತೋರಿಸಿದರು. ಮಣಿಪಾಲ ದಂತವೈದ್ಯಕೀಯ ಕಾಲೇಜಿನ ಡೀನ್ ಡಾ. ಆಶಿತಾ ಉಪ್ಪೂರ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವೈದ್ಯಾಧಿಕಾರಿ ಡಾ. ಪ್ರಿಯಾಂಕಾ ಶೇಖರ್ ಇದ್ದರು. ಅಥ್ಲೀಟ್ ವರ್ಷಾ ಅವರು ವಾಕಥಾನ್‍ನ ಜ್ಯೋತಿ ಹಿಡಿದು ಸಾಗಿದರು.

ಇದೇ 29ರಂದು ಆಚರಿಸುವ ವಿಶ್ವ ಹೃದಯ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆಂಪು ಬಣ್ಣದ ಪೋಷಾಕು ಧರಿಸಿ ಕೈಯಲ್ಲಿ ಘೋಷಣಾ ಫಲಕಗಳು, ಕೃದಯದ ಸಂಕೇತ, ಬಲೂನ್‌ ಇತ್ಯಾದಿಗಳನ್ನು ಹಿಡಿದುಕೊಂಡು ಹೆಜ್ಜೆ ಹಾಕಿದ ನೂರಾರು ಮಹಿಳೆಯರು ಹೃದಯ ಸಂರಕ್ಷಣೆಗೆ ಸಂಬಂಧಿಸಿದ ಘೋಷಣೆಗಳನ್ನು ಮೊಳಗಿಸಿದರು.

ಮಹಿಳೆಯ ಹೃದಯದ ಆರೋಗ್ಯದ ಬಗ್ಗೆ ಸಾಮಾನ್ಯವಾಗಿ ಕಾಳಜಿ ವಹಿಸಲಾಗುತ್ತಿಲ್ಲ. ಆಕೆಯ ಹೃದಯ ಕೇವಲ ಆಕೆಗೆ ಮಾತ್ರವಲ್ಲ,  ಇಡೀ ಕುಟುಂಬದ ಅಗತ್ಯ ಎಂಬ ಸಂದೇಶ ಹರಡಲಾಯಿತು. ಕೆಎಂಸಿ ಆಸ್ಪತ್ರೆಯ ಹೃದ್ರೋಗ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ನರಸಿಂಹ ಪೈ ವಿಶ್ವ ಹೃದಯ ದಿನದ ಕುರಿತು ಮಾತನಾಡಿದರು. ಕೆಎಂಸಿ ಡೀನ್ ಬಿ.ಉಣ್ಣಿಕೃಷ್ಣನ್, ಆಸ್ಪತ್ರೆಯ ಮುಖ್ಯ ಪ್ರಾದೇಶಿಕ ಕಾರ್ಯಾಚರಣೆ ಅಧಿಕಾರಿ ಸಗೀರ್ ಸಿದ್ದಿಕಿ, ಮಾಹೆ ಕ್ಯಾಂಪಸ್‌ನ ಪ್ರೊ. ದಿಲೀಪ್ ಜಿ.ನಾಯಕ್,  ಹೃದ್ರೋಗ ತಜ್ಞರಾದ ಡಾ. ಎಂ.ಎನ್.ಭಟ್, ಡಾ.ರಾಜೇಶ್ ಪೈ, ಡಾ.ಮನೀಶ್ ರೈ, ಡಾ.ಮಾಧವ್ ಕಾಮತ್, ಡಾ.ಸೂರಜ್ ಪೈ, ಡಾ.ಹರೀಶ್ ರಾಘವನ್ ಮತ್ತು ಡಾ. ಐರೇಶ್ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT