ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹ್ಯಾದ್ರಿ: ವಿಶ್ವ ಐಪಿ ದಿನ ಕಾರ್ಯಾಗಾರ

Last Updated 27 ಏಪ್ರಿಲ್ 2022, 5:06 IST
ಅಕ್ಷರ ಗಾತ್ರ

ಮಂಗಳೂರು: ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್‌ನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗ ಮತ್ತು ಸಂಶೋಧನಾ ಅಭಿವೃದ್ಧಿ ಕೋಶದ ವತಿಯಿಂದ ‘ಪೇಟೆಂಟ್ ಫೈಲಿಂಗ್, ಟ್ರೇಡ್‌ಮಾರ್ಕ್ ಮತ್ತು ಇಂಡಸ್ಟ್ರಿಯಲ್ ಡಿಸೈನ್, ಭೌಗೋಳಿಕ ಸೂಚನೆಗಳು’ ಕುರಿತು ವಿಶ್ವ ಐಪಿ ದಿನದ ಕಾರ್ಯಾಗಾರವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ (ವಿಟಿಪಿಸಿ) ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್‌ಸಿಎಸ್‌ಟಿ) ಸಹಯೋಗದಲ್ಲಿ ನಡೆದ ಕಾರ್ಯಕ್ರಮವನ್ನು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರೊ.ವಿನಯ್ ಬಿ.ಯು. ಉದ್ಘಾಟಿಸಿದರು.

ವಿಟಿಪಿಸಿ ಬೌದ್ಧಿಕ ಆಸ್ತಿ ಉಪಕ್ರಮಗಳು ಮತ್ತು ಭೌಗೋಳಿಕ ಸೂಚಕ ಕೋಶದ ಫೆಸಿಲಿಟೇಟರ್ ಪ್ರಭಾವತಿ ರಾವ್ ಅಧ್ಯಕ್ಷತೆ ವಹಿಸಿದ್ದರು. ಸಹ್ಯಾದ್ರಿ ಕಾಲೇಜಿನ ನಿರ್ದೇಶಕ ಡಾ. ಎಸ್.ಮಂಜಪ್ಪ ಐಪಿಆರ್ ಬಗ್ಗೆ ಮಾಹಿತಿ ನೀಡಿದರು. ಪ್ರೊ. ಸಾಯಿಚರಣ್ ಪ್ರಾರ್ಥನೆ ಹಾಡಿದರು. ಪ್ರಾಂಶುಪಾಲ ರಾಜೇಶ್ ಎಸ್. ಸ್ವಾಗತಿಸಿದರು.

ನಂತರ ನಡೆದ ಗೋಷ್ಠಿಯಲ್ಲಿ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದ ಬಾಹ್ಯ ಸಮಿತಿ ಸದಸ್ಯೆ ಡಾ. ಫರಾಹ್ ದೀಬಾ ಅವರು ‘ಐಪಿಆರ್ ಸ್ಪೆಕ್ಟ್ರಮ್‌ನ ಅವಲೋಕನದೊಂದಿಗೆ ಟ್ರೇಡ್‌ಮಾರ್ಕ್‌ಗಳು ಮತ್ತು ಇಂಡಸ್ಟ್ರಿಯಲ್ ಡಿಸೈನ್‌ಗಳ ಪ್ರಬಲ ಐಪಿ ಪರಿಕರಗಳ ಮೇಲೆ ಆಳವಾದ ಡೈವ್’ ಕುರಿತು ಮಾಹಿತಿ ನೀಡಿದರು. ತಾಂತ್ರಿಕ ಗೋಷ್ಠಿಯಲ್ಲಿ ವಕೀಲ ಬಿ.ವಿವೇಕ್ ಆನಂದ ಸಾಗರ್ ಮಾಹಿತಿ ನೀಡಿದರು. ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಡಾ.ಹರ್ಷ ಕುಮಾರ್ ಎಂ.ಕೆ ಮತ್ತು ಪ್ರೊ.ಅಜಿತ್ ಬಿ.ಎಸ್ ಕಾರ್ಯಕ್ರಮ ಸಂಯೋಜಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT