ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು: ಯಕ್ಷಾಭಿನಯ ಬಳಗ ವಾರ್ಷಿಕೋತ್ಸವ ನಾಳೆ

Published : 9 ಫೆಬ್ರುವರಿ 2024, 5:40 IST
Last Updated : 9 ಫೆಬ್ರುವರಿ 2024, 5:40 IST
ಫಾಲೋ ಮಾಡಿ
Comments

ಮಂಗಳೂರು: ಯಕ್ಷಾಭಿನಯ ಬಳಗದ ವಾರ್ಷಿಕೋತ್ಸವವನ್ನು ಇಲ್ಲಿನ ಕುದ್ಮುಲ್ ರಂಗರಾವ್‌ ಪುರಭವನದಲ್ಲಿ ಇದೇ 10ರಂದು ಮಧ್ಯಾಹ್ನ 3 ಗಂಟೆಗೆ ಏರ್ಪಡಿಸಲಾಗಿದೆ ಎಂದು ಬಳಗದ ಅಧ್ಯಕ್ಷ ಪ್ರಶಾಂತ್‌ ಕುಮಾರ್‌ ಶೆಟ್ಟಿ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ನಮ್ಮ ಬಳಗವು ಯಕ್ಷಗುರುಗಳಾದ ಐರೋಡಿ ಮಂಜುನಾಥ ಕುಲಾಲ್‌ ಯಡ್ತಾಡಿಯವರ ಮಾರ್ಗದರ್ಶನದಲ್ಲಿ 2019ರಿಂದ ಇಲ್ಲಿ ಬಡಗು ತಿಟ್ಟು ಯಕ್ಷಗಾನವನ್ನು ಆಸಕ್ತರಿಗೆ ಕಲಿಸುತ್ತಿದೆ.  ಹವ್ಯಾಸಿ ಕಲಾವಿದರು ಸೇರಿ ಪ್ರತಿವರ್ಷವೂ ಯಕ್ಷಗಾನವನ್ನು ಪ್ರದರ್ಶಿಸುತ್ತಿದ್ದೇವೆ’ ಎಂದರು.

‘ಈ ಸಲ ‘ವೀರಮಣಿ ಕಾಳಗ’ ಪ್ರಸಂಗವನ್ನು ಪ್ರದರ್ಶಿಸಲಿದ್ದೇವೆ. ಹಿಮ್ಮೇಳದಲ್ಲಿ ಭಾಗವತರಾಗಿ ಪ್ರಸಾದ್ ಕುಮಾರ್ ಮೊಗೆಬೆಟ್ಟು, ಮದ್ದಳೆಯಲ್ಲಿ ಭರತ್ ಚಂದನ್ ಕೋಟೇಶ್ವರ, ಚಂಡೆಯಲ್ಲಿ ಶ್ರೀಕಾಂತ ಶೆಟ್ಟಿ ಯಡಮೊಗೆ ಸಹಕರಿಸಲಿದ್ದಾರೆ. ಸಾಂಪ್ರದಾಯಿಕ ಪೂರ್ವರಂಗದ ಬಾಲಗೋಪಾಲ, ಗಣಪತಿ ಕೌತುಕ ಪೀಠಿಕೆ ಸ್ತ್ರೀವೇಷ ಈ ಸಲದ ವಿಶೇಷ’ ಎಂದರು. 

‘ಐರೋಡಿ ಮಂಜುನಾಥ್‌ ಕುಲಾಲ್ ಅವರಿಗೆ ಗುರುವಂದನೆ ಸಲ್ಲಿಸಲಿದ್ದೇವೆ. ಕಾರ್ಯಕ್ರಮದಲ್ಲಿ ವಿದ್ವಾಂಸ ಪ್ರಭಾಕರ ಜೋಷಿ, ವೈದ್ಯ ಡಾ.ಅಣ್ಣಯ್ಯ ಕುಲಾಲ್‌, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ,   ಕಾಪಿಕಾಡು ಶಾಲೆಯ ಮುಖ್ಯೋಪಾಧ್ಯಾಯಿನಿ ಶೀಲಾವತಿ ಭಾಗವಹಿಸಲಿದ್ದಾರೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಸತ್ಯನಾರಾಯಣ ಎಚ್‌.ಕೆ, ಸದಸ್ಯರಾದ ಐಶ್ವರ್ಯಾ, ಲಿಖಿತಾ ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT