ಸುಬ್ರಹ್ಮಣ್ಯ: ಅಡಿಕೆಯ ಹಳದಿ ಎಲೆರೋಗ ವಿಸ್ತರಣೆ ತಡೆಗೆ ಹಾಗೂ ಹಳದಿ ಎಲೆ ರೋಗ ಬಾಧಿತ ಅಡಿಕೆ ಮರಗಳಿಗೆ ಪೋಷಕಾಂಶಗಳ ನಿರ್ವಹಣೆಯ ದೃಷ್ಟಿಯಿಂದ ಅಳವಡಿಕೆ ಮಾಡಿದ್ದ ಪ್ಲಾಸ್ಟಿಕ್ ಹೊದಿಕೆಗಳ ವೀಕ್ಷಣೆ ಹಾಗೂ ಅಧ್ಯಯನ ವರದಿಯ ಬಗ್ಗೆ ಬೆಳೆಗಾರರಿಗೆ ಸಿಪಿಸಿಆರ್‌ಐ ವಿಜ್ಞಾನಿಗಳು ಸೋಮವಾರ ಮಾಹಿತಿ ನೀಡಿದರು.

ಹಲವಾರು ವರ್ಷಗಳಿಂದ ಅಡಿಕೆ ಹಳದಿ ಎಲೆರೋಗ ಬಾಧಿತ ಪ್ರದೇಶಗಳಲ್ಲಿ ಅಧ್ಯಯನ ಹಾಗೂ ಸಂಶೋಧನೆಯ ದೃಷ್ಟಿಯಿಂದ ಸಿಪಿಸಿಆರ್‌ಐ ವಿಜ್ಞಾನಿಗಳ ತಂಡ ಅಡಿಕೆ ತೋಟದಲ್ಲಿ ಪ್ಲಾಸ್ಟಿಕ್ ಹೊದಿಕೆ ಅಳವಡಿಕೆ ಮಾಡಿತ್ತು. ಐದು ವರ್ಷಗಳ ಹಿಂದೆ ಕಲ್ಮಕಾರಿನ ಒಂದು ತೋಟದಲ್ಲಿ ಹಾಗೂ ಮರ್ಕಂಜದ ಎರಡು ತೋಟ ಹಾಗೂ ಶೃಂಗೇರಿಯಲ್ಲಿ ಪ್ಲಾಸ್ಟಿಕ್ ಹೊದಿಕೆ ಹೊದಿಸಿ ಪೋಷಕಾಂಶಗಳ ನಿರ್ವಹಣೆ ಹಾಗೂ ಇತರ ಅಧ್ಯಯನ ನಡೆಸಿದ್ದರು.

ಇದೀಗ ಐದು ವರ್ಷಗಳ ನಂತರ ಈ ಅಧ್ಯಯನ ವರದಿ ಪ್ರಕಾರ ಅಡಿಕೆ ಹಳದಿ ಎಲೆರೋಗ ವಿಸ್ತರಣೆ ಕಡಿಮೆಯಾಗಿದೆ. ಅಲ್ಲದೇ ಮರಗಳಿಗೆ ಪೋಷಕಾಂಶಗಳು ಸರಿಯಾಗಿ ಲಭ್ಯವಾಗುವುದರಿಂದ ಮರಗಳ ಬೇರು ಆರೋಗ್ಯಯುತವಾಗಿ ಇರುವುದು ಕಂಡುಬಂದಿದೆ ಎಂಬುದನ್ನು ವಿಜ್ಞಾನಿಗಳ ತಂಡ ಕಂಡುಕೊಂಡಿದೆ.

ಇದೀಗ ಈ ಅಧ್ಯಯನದ ಜೊತೆಗೆ ಅಡಿಕೆ ಹಳದಿ ಎಲೆರೋಗ ಪೀಡಿತ ಪ್ರದೇಶದಲ್ಲಿ ರೋಗ ನಿರೋಧಕ ತಳಿ ಅಭಿವೃದ್ಧಿ ಹಾಗೂ ಟಿಶ್ಯೂ ಕಲ್ಚರ್ ಗಿಡಗಳನ್ನೂ ಅಭಿವೃದ್ಧಿ ಮಾಡಲು ಸಿಪಿಸಿಆರ್‌ಐ ವಿಜ್ಞಾನಿಗಳು ಮುಂದೆ ಬಂದಿದ್ದಾರೆ ಎಂದು ಸಿಪಿಸಿಆರ್‌ಐ ನಿರ್ದೇಶಕಿ ಡಾ.ಅನಿತಾ ಕರುಣ್ ತಿಳಿಸಿದ್ದಾರೆ.

ಸೋಮವಾರ ಕಲ್ಮಕಾರಿನ ನವೀನ್ ದಂಬೆಕೋಡಿ ಅವರ ತೋಟ ಹಾಗೂ ಮರ್ಕಂಜದ ಪವಿತ್ರ ಗುಂಡಿ ಅವರ ಅಡಿಕೆ ತೋಟಗಳಿಗೆ ಅಳವಡಿಸಿದ್ದ ಪ್ಲಾಸ್ಟಿಕ್ ಹೊದಿಕೆಗಳನ್ನು ವಿಜ್ಞಾನಿಗಳ ತಂಡ ವೀಕ್ಷಿಸಿತು. ತಂಡದಲ್ಲಿ ಕಾಸರಗೋಡು ಸಿಪಿಸಿಆರ್‌ಐ ನಿರ್ದೇಶಕಿ ಡಾ. ಅನಿತಾ ಕರುಣ್, ಸಮಾಜ ವಿಜ್ಞಾನ ವಿಭಾಗ ಮುಖ್ಯಸ್ಥ ಡಾ. ಮುರಳೀಧರನ್, ಬೆಳೆ ಉತ್ಪಾದನಾ ಘಟಕದ ಮುಖ್ಯಸ್ಥ ಡಾ. ರವಿ ಭಟ್, ಬೆಳೆ ಸಂರಕ್ಷಣಾ ವಿಭಾಗ ಮುಖ್ಯಸ್ಥ ಡಾ. ವಿನಾಯಕ ಹೆಗ್ಗಡೆ, ವಿಟ್ಲದ ಸಿಪಿಸಿಆರ್‌ಐ ಪ್ರಾದೇಶಿಕ ಕೇಂದ್ರ ಬೆಳೆ ಉತ್ಪಾದನಾ ವಿಭಾಗದ ವಿಜ್ಞಾನಿ ಡಾ.ಭವಿಷ್ ಇದ್ದರು.

ಈ ಸಂದರ್ಭ ಬೆಳೆಗಾರರೊಂದಿಗೆ ಮಾತುಕತೆ ನಡೆಸಿದ ವಿಜ್ಞಾನಿಗಳ ತಂಡ, ಅಡಿಕೆ ಬೆಳೆಗಾರರ ಅಭಿಪ್ರಾಯ ಪಡೆಯಿತು. ಈ ಸಂದರ್ಭ ಕಲ್ಮಕಾರು ಪಂಚಾಯಿತಿ ಅಧ್ಯಕ್ಷ ಉದಯಕುಮಾರ್ ಕೊಪ್ಪಡ್ಕ, ಸಹಕಾರಿ ಯೂನಿಯನ್ ಅಧ್ಯಕ್ಷ ರಮೇಶ್ ದೇಲಂಪಾಡಿ, ಸ್ಥಳೀಯರಾದ ಕೆ.ಸಿ. ಸುಬ್ರಹ್ಮಣ್ಯ ಕೊಪ್ಪಡ್ಕ, ಕೆ.ಪಿ. ಚಂದ್ರಶೇಖರ್ ಕೊಪ್ಪಡ್ಕ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ, ಬಾಲಕೃಷ್ಣ ಕೊಪ್ಪಡ್ಕ, ಮೋಹನ ಉಳುವಾಲು, ಡ್ಯಾನಿ ಯಲದಾಳೂ, ನರೇಂದ್ರ ಬಿಳಿಮಲೆ, ಗಂಗಾಧರ ಇಡ್ಯಡ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.