ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಬ್ರಹ್ಮಣ್ಯ: ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರ

Published 8 ಜನವರಿ 2024, 6:46 IST
Last Updated 8 ಜನವರಿ 2024, 6:46 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನ, ಎಸ್‌ಪಿವೈಎಸ್‌ಎಸ್ ಕರ್ನಾಟಕ ನೇತ್ರಾವತಿ ವಲಯ ಕಡಬ ತಾಲ್ಲೂಕು, ಶ್ರೀಪತಂಜಲಿ ಯೋಗ ಶಿಕ್ಷಣ ಫೌಂಡೇಷನ್ ಮಂಗಳೂರು, ಶ್ರೀಪತಂಜಲಿ ಯೋಗ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ತುಮಕೂರು, ಮೈಸೂರು ಆಶ್ರಯದಲ್ಲಿ ಯೋಗ ಜಾಗೃತಿಗಾಗಿ ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರ ಕುಕ್ಕೆ ಸುಬ್ರಹ್ಮಣ್ಯದ ರಥಬೀದಿಯಲ್ಲಿ ಭಾನುವಾರ ನಡೆಯಿತು.

ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಉದ್ಘಾಟಿಸಿದರು. ಸುಬ್ರಹ್ಮಣ್ಯ ಅನುಗ್ರಹ ಎಜುಕೇಷನ್ ಟ್ರಸ್ಟ್‌ನ ಗಣೇಶ್ ಪ್ರಸಾದ್, ಎಸ್‌ಪಿವೈಎಸ್‌ಎಸ್ ಪುತ್ತೂರು ತಾಲ್ಲೂಕು ಸಂಚಾಲಕ ಯೋಗೀಶ್ ಆಚಾರ್ಯ, ಬಂಟ್ವಾಳ ತಾಲ್ಲೂಕು ಸಹಸಂಚಾಲಕಿ ನಯನಾ, ಯೋಗ ಶಿಕ್ಷಕ ಆನಂದ ಕುಂಟಿನಿ ಭಾಗವಹಿಸಿದ್ದರು.

ನಸುಕಿನ 4.30ರಿಂದ 7ರ ವರೆಗೆ ಯೋಗ ನಡೆಯಿತು. ವಿಟ್ಲ ಶಾಖೆಯ ಯೋಗ ಶಿಕ್ಷಕಿ ಮೈತ್ರಿ ಅವರು ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರದ ಮಹತ್ವ ತಿಳಿಸಿದರು. ಮೂರು ಹಂತದಲ್ಲಿ ಆರು ಸುತ್ತು ಷಣ್ಮುಖ ನಮಸ್ಕಾರವು ತಾಲ್ಲೂಕು ಶಿಕ್ಷಣ ಪ್ರಮುಖ ಗಣೇಶ ಸುವರ್ಣ ನೇತೃತ್ವದಲ್ಲಿ ನಡೆಯಿತು. ಯೋಗ ಶಿಕ್ಷಕಿ ಮಾಧುರಿ ನಿರೂಪಿಸಿದರು. ಯೋಗ ಶಿಕ್ಷಕರಾದ ಸಂತೋಷ ಉಪ್ಪಿನಂಗಡಿ, ಅಶೋಕ ಪುತ್ತೂರು, ಸುನಂದ ಶೆಟ್ಟಿ ಸುಳ್ಯ, ಪ್ರಾತ್ಯಕ್ಷಿಕೆಯೊಂದಿಗೆ ಯೋಗ ಷಣ್ಮುಖ ನಮಸ್ಕಾರ ಮಾಡಿಸಿದರು. ಯೋಗ ಶಿಕ್ಷಕ ಕೃಷ್ಣಾನಂದ ನಾಯಕ್ ಅಮೃತಾಸನ ನಡೆಸಿಕೊಟ್ಟರು.

ಯೋಗ ಜಾಗೃತಿಗಾಗಿ ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರ ಕುಕ್ಕೆ ಸುಬ್ರಹ್ಮಣ್ಯದ ರಥಬೀದಿಯಲ್ಲಿ ಭಾನುವಾರ ನಡೆಯಿತು
ಯೋಗ ಜಾಗೃತಿಗಾಗಿ ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರ ಕುಕ್ಕೆ ಸುಬ್ರಹ್ಮಣ್ಯದ ರಥಬೀದಿಯಲ್ಲಿ ಭಾನುವಾರ ನಡೆಯಿತು

ದಾವಣಗೆರೆ, ತುಮಕೂರು, ಹಾಸನ, ಕಾಸರಗೋಡು, ಬೆಂಗಳೂರು, ಮೈಸೂರು, ಉಡುಪಿ, ಸುಳ್ಯ, ಮಂಗಳೂರು, ಸುರತ್ಕಲ್, ಮೂಲ್ಕಿ, ಪುತ್ತೂರು, ಬಂಟ್ವಾಳ, ವಿಟ್ಲ, ಮಂಜೇಶ್ವರ, ಪೊಳಲಿ, ಉಳ್ಳಾಲ, ಕಲ್ಲಡ್ಕದಿಂದ ಸುಮಾರು ಮೂರು ಸಾವಿರ ಯೋಗಪಟುಗಳು, ಸಾರ್ವಜನಿಕರೊಂದಿಗೆ ಭಾಗವಹಿಸಿ ಯೋಗ ಷಣ್ಮುಖ ನಮಸ್ಕಾರ ಮಾಡಿದರು. ಕಾರ್ಯಕ್ರಮ ಸಂಚಾಲಕ ಪ್ರಭಾಕರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT