ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳ್ತಂಗಡಿ: ಯುವಬಿಲ್ಲವ ವೇದಿಕೆ ನೇತೃತ್ವದಲ್ಲಿ ಯುವ ಸ್ಫೂರ್ತಿ ತರಬೇತಿ

Published : 10 ಸೆಪ್ಟೆಂಬರ್ 2024, 13:36 IST
Last Updated : 10 ಸೆಪ್ಟೆಂಬರ್ 2024, 13:36 IST
ಫಾಲೋ ಮಾಡಿ
Comments

ಬೆಳ್ತಂಗಡಿ: ಇಲ್ಲಿನ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಯುವಬಿಲ್ಲವ ವೇದಿಕೆ, ಬಿಲ್ಲವ ಮಹಿಳಾ ವೇದಿಕೆ ಸಹಕಾರದೊಂದಿಗೆ ಯುವ ಸ್ಫೂರ್ತಿ - 2024 ವಿದ್ಯಾರ್ಥಿಗಳಿಗಾಗಿ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮ ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸಭಾಂಗಣದಲ್ಲಿ ನಡೆಯಿತು.

ಸಂಘದ ಮಾಜಿ ಅಧ್ಯಕ್ಷ ಭಗೀರಥ ಜಿ.ಕಾರ್ಯಕ್ರಮ ಉದ್ಘಾಟಿಸಿ, ಸಂಕಷ್ಟದಲ್ಲಿರುವ ಕುಟುಂಬಸ್ಥರ ಮಕ್ಕಳಿಗೆ ಪ್ರತಿ ವರ್ಷ ವಿದ್ಯಾರ್ಜನೆಗಾಗಿ ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದು, ಈ ಸೇವೆ ನಿರಂತರವಾಗಿ ನಡೆಯಲಿದೆ ಎಂದರು.

ವ್ಯಕ್ತಿತ್ವ ವಿಕಸನ ತರಬೇತುದಾರ, ಕೊಶಮಟ್ಟಂ ಫೈನಾನ್ಸ್‌ನ ವಲಯ ಮುಖ್ಯಸ್ಥ ಶಾಜಿ ಕೆ.ಕುರಿಯನ್ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಸಂಸ್ಕಾರಯುತವಾಗಿ ಬದುಕುವುದನ್ನು ಕಲಿತುಕೊಳ್ಳಬೇಕು. ಯಶಸ್ಸಿಗೆ ಅಂಕವೊಂದೇ ಮಾನದಂಡವಲ್ಲ ಎಂದರು.

ಗುರುದೇವ ಪದವಿಪೂರ್ವ ಕಾಲೇಜು ಉಪನ್ಯಾಸಕ ರಾಕೇಶ್ ಕುಮಾರ್ ಉಪನ್ಯಾಸ ನೀಡಿದರು.

ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸುಂದರ ಪೂಜಾರಿ, ಪ್ರಧಾನ ಕಾರ್ಯದರ್ಶಿ ನಿತೀಶ್ ಎಚ್.ಕೋಟ್ಯಾನ್, ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ಸುಮತಿ ಪ್ರಮೋದ್ ಭಾಗವಹಿಸಿದ್ದರು.

ಕೋಶಾಧಿಕಾರಿ ಪ್ರಶಾಂತ್ ಮಚ್ಚಿನ, ಜತೆ ಕಾರ್ಯದರ್ಶಿ ಸಂತೋಷ್ ಉಪ್ಪಾರು, ನಿರ್ದೇಶಕ ಹರಿದಾಸ್ ಕೇದೆ, ಕಮಲಾಕ್ಷ ಬೆಳ್ತಂಗಡಿ, ಗುರುರಾಜ್ ಗುರಿಪಳ್ಳ, ಸಂತೋಷ್ ಕೆ.ಸಿ., ರೂಪೇಶ್ ಧರ್ಮಸ್ಥಳ, ಪ್ರಮೋದ್ ಮಚ್ಚಿನ, ಅನೂಪ್ ಬಂಗೇರ, ಚಂದ್ರಶೇಖರ್, ಸಂಜೀವ ಪೂಜಾರಿ ಕೊಡಂಗೆ, ನಾರಾಯಣ ಉಚ್ಚೂರು, ರಾಜಶ್ರೀ ರಮಣ್, ಗುಣಕರ ಅಘ್ನಾಡಿ, ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಸದಾಶಿವ ಊರ, ಯುವಬಿಲ್ಲವ ವೇದಿಕೆ ಕಾರ್ಯದರ್ಶಿ ಸಂತೋಷ್ ಅರಳಿ ಭಾಗವಹಿಸಿದ್ದರು.

ಯುವಬಿಲ್ಲವ ವೇದಿಕೆ ಅಧ್ಯಕ್ಷ ಎಂ.ಕೆ.ಪ್ರಸಾದ್ ಸ್ವಾಗತಿಸಿ, ಪ್ರಚಾರ ಕಾರ್ಯದರ್ಶಿ ಆಕಾಶ್ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT