ಕೋಟ(ಬ್ರಹ್ಮಾವರ ): ಕೋಟ ಸಮೀಪದ ವಡ್ಡರ್ಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂ.ಜಿ ಕಾಲೊನಿಯಲ್ಲಿ ಹಲವು ದಿನಗಳಿಂದ ನೀರಿನ ಪೂರೈಕೆಯಾಗುತ್ತಿಲ್ಲ, ಕುಡಿಯುವ ನೀರನ್ನು ಸಮರ್ಪಕವಾಗಿ ನೀರು ಪೂರೈಸಬೇಕು ಎಂದು ಒತ್ತಾಯಿಸಿ ಸ್ಥಳಿಯರು ಭಾನುವಾರ ಪ್ರತಿಭಟನೆ ನಡೆಸಿದರು.

ಕಾಲೊನಿಗೆ ನೀರು ಒದಗಿಸುವ ಬಾವಿಯು ಸಂಪೂರ್ಣ ಕಲುಷಿತಗೊಂಡಿದ್ದು, ನೀರು ಕುಡಿಯಲು ಅಸಾಧ್ಯವಾಗಿದೆ. ಈ ಹಿಂದೆ ಇಲ್ಲಿಗೆ ಸಮೀಪದ ಕುಂಬಾರುಬೆಟ್ಟು ವಾಟರ್ ಟ್ಯಾಂಕ್ನಿಂದ ನೀರಿನ ವ್ಯವಸ್ಥೆ ಮಾಡಿದ್ದು, ಇತ್ತೀಚೆಗೆ ಅಲ್ಲಿನ ಸ್ಥಳಿಯರು ನೀರು ಪೂರೈಕೆಯಾಗದಂತೆ ತಡೆ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಸಮಸ್ಯೆ ಕುರಿತು ಪಂಚಾಯಿತಿ ಗಮನಕ್ಕೆ ತಂದಿದ್ದರೂ ಇದುವರೆಗೆ ಯಾವುದೇ ಸ್ಪಂದನೆ ದೊರಕಿಲ್ಲ. ಕಳೆದ ಹಲವು ತಿಂಗಳಿನಿಂದ ಇಲ್ಲಿನ ೨೦೦ ಕ್ಕೂ ಹೆಚ್ಚಿನ ಮನೆಗಳಿಗೆ ನೀರಿನ ಸಮಸ್ಯೆ ಉಂಟಾಗಿದ್ದು, ಇದಕ್ಕೆ ಸರ್ಮಪಕವಾದ ಪರಿಹಾರ ಒದಗಿಸುವುದರ ಬದಲಿಗೆ, ಕಲುಷಿತಗೊಂಡ ನೀರಿನ ಬಾವಿಗೆ ಟ್ಯಾಂಕ್ ನಿರ್ಮಿಸುವ ಹುನ್ನಾರ ನಡೆಯುತ್ತಿದ್ದು, ಈ ಕಾಮಗಾರಿಯನ್ನು ವಿರೋಽಧಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ. ಕೂಡಲೇ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿದ್ದಾರೆ. ಪ್ರತಿಭಟನೆಯಲ್ಲಿ ರಾಜು ಪೂಜಾರಿ, ಕೋಟಿ ಪೂಜಾರಿ, ಪಂಚಾಯಿತಿ ಸದಸ್ಯೆ ರತ್ನಾ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.