ಮುಡಿಪು: ಕುಡಿಯುವ ನೀರಿಗೆ ಸಂಬಂಧಿಸಿದಂತೆ ಕೊಣಾಜೆ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಸಭೆಯ ವೇಳೆ ಮಾರಾಮಾರಿ ನಡೆದು ಮೂವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಕರಣ ನಂತರ ಕೊಣಾಜೆ ಠಾಣೆಯಲ್ಲಿ ರಾಜಿಯಲ್ಲಿ ಇತ್ಯರ್ಥಗೊಂಡಿತು.

ಸಭೆಯಲ್ಲಿ ಒಂದನೇ ವಾರ್ಡ್ ಹಾಗೂ ಐದನೇ ವಾರ್ಡ್‌ಗೆ ಕುಡಿಯುವ ನೀರು ಪೂರೈಸುವ ವಿಚಾರದಲ್ಲಿ ಮಹಮ್ಮದ್ ಹಾಗೂ ಪಂಚಾಯಿತಿ ಸದಸ್ಯ ಸೂಫಿಕುಂಞಿ ಅವರ ನಡುವೆ ಮಾತಿಗೆ ಮಾತು ಬೆಳೆದು ನಂತರ ಹೊಡೆದಾಟ ನಡೆಯಿತು ಎನ್ನಲಾಗಿದೆ.

`ನನಗೆ ಪಂಚಾಯಿತಿ ಸದಸ್ಯ ಸೂಫಿ ಕುಂಞಿ ಹಾಗೂ ಅಬ್ಬಾಸ್ ಎಂಬವರು ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆ~ ಎಂದು ಈ ಬಗ್ಗೆ ಮಹಮ್ಮದ್ ಎಂಬವರು ಕೊಣಾಜೆ ಠಾಣೆಗೆ ದೂರು ನೀಡಿ, ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಾಗಿದ್ದರು.

ಇದಕ್ಕೆ ಪ್ರತಿಯಾಗಿ ಪಂಚಾಯಿತಿ ಸದಸ್ಯ ಸೂಫಿಕುಂಞಿ ಹಾಗೂ ಅಬ್ಬಾಸ್, `ನಾವು ನೀರಿನ ಪೂರೈಕೆಯನ್ನು ಸರಿಯಾಗಿ ಮಾಡಲು ತಿಳಿಸಿದ್ದಕ್ಕೆ ಮಹಮದ್ ಏಕಾಏಕಿ ನಮ್ಮ ಮೇಲೆ ಹಲ್ಲೆ ನಡೆಸಿದರು~ ಎಂದು ಕೊಣಾಜೆ ಠಾಣೆಗೆ ದೂರು ನೀಡಿದರು. ಇವರಿಬ್ಬರೂ ದೇರಳಕಟ್ಟೆಯ ಯೆನಪೋಯ ಆಸ್ಪತ್ರೆಗೆ ದಾಖಲಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.