ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರ ರಕ್ಷಾನಿಧಿ--: ₹ 70 ಲಕ್ಷ ಸಂಗ್ರಹ

ಹೆಜಮಾಡಿ: ವಿಶ್ವ ಜಿಎಸ್‌ಬಿ ಸಮ್ಮೇಳನಕ್ಕೆ ದಿನಗಣನೆ
Last Updated 23 ಡಿಸೆಂಬರ್ 2016, 8:39 IST
ಅಕ್ಷರ ಗಾತ್ರ
ಪಡುಬಿದ್ರಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಗಡಿ ಪ್ರದೇಶದಲ್ಲಿ ಇದೇ 25ರಂದು ಐತಿಹಾಸಿಕ ವಿಶ್ವ ಜಿಎಸ್‌ಬಿ ಸಮ್ಮೇಳನ ನಡೆಯಲಿದ್ದು, ಭರದ ಸಿದ್ಧತೆಗಳು ನಡೆಯುತ್ತಿದೆ. 
 
ಸುಮಾರು ಒಂದೂವರೆ ಲಕ್ಷ ಚದರ ಅಡಿಗಳ ಪೆಂಡಾಲ್, ಸುಮಾರು 30 ಸಾವಿರ ಜನ ಕುಳಿತು ವೀಕ್ಷಿಸಲು ಆಸನದ ವ್ಯವಸ್ಥೆ, 150 ಜನ ಕುಳಿತುಕೊಳ್ಳಬಹು ದಾದ ಸುಸಜ್ಜಿತ ದೃಶ್ಯ ಶ್ರಾವ್ಯ ವ್ಯವಸ್ಥೆಯ ವೇದಿಕೆ ಸಿದ್ಧಗೊಳ್ಳುತ್ತಿದೆ. 
 
ಇನ್ನೊಂದೆಡೆ ಪಾಕ ಶಾಲೆ, ಭೋಜನ ಶಾಲೆ, ಕುಡಿಯುವ ನೀರು, ವಸ್ತು ಪ್ರದರ್ಶನದ ಮಳಿಗೆಗಳು, ಪರಿಸರ ಸ್ನೇಹಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಮೂರು ಸಾವಿರ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಬಸ್ ಹಾಗೂ ಟೆಂಪೋಗಳಿಗೆ ಸಮ್ಮೇಳನದ ಸ್ಥಳಕ್ಕೆ ಪ್ರವೇಶ ನಿಷೇಧಿಸಲಾಗಿದ್ದು, ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿ ಜನರನ್ನು ಇಳಿಸಿ ಅಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. 
 
ಸಮ್ಮೇಳನದ ಘಟನಾವಳಿಗಳನ್ನು ವೀಕ್ಷಿಸಲು 8 ಗಾತ್ರದ ಎಲ್ಇಡಿ ಪರದೆಗಳನ್ನು ಅಳವಡಿಸುವ ಕೆಲಸಗಳು ನಡೆಯುತ್ತಿದೆ. ಈ ಎಲ್ಲ ವ್ಯವಸ್ಥೆಯನ್ನು ಮೂಡುಬಿದಿರೆ ಜಿ.ಕೆ. ಡೆಕೋರೇ ಟರ್ಸ್‌ನ ಗಣೇಶ್ ಕಾಮತ್ ತಂಡ ಮಾಡುತ್ತಿದೆ.   
 
ಸಮ್ಮೇಳನಕ್ಕೆ ಬರುವವರ ಅನುಕೂಲಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಬಳಿಯಿರುವ ಹೆಜಮಾಡಿ ಬಸ್ತಿಪಡ್ಪು ಮೈದಾನದ ಬಳಿ ಎಕ್ಸ್‌ಪ್ರೆಸ್‌ ಬಸ್‌ಗಳನ್ನು ನಿಲುಗಡೆ ಮಾಡುವಂತೆ ಜಿಲ್ಲಾ ಬಸ್ ಮಾಲೀಕರ ಸಂಘಕ್ಕೆ ಮನವಿ ಮಾಡ ಲಾಗಿದ್ದು, ಅದಕ್ಕೆ ಒಪ್ಪಿಗೆ ದೊರೆತಿದೆ.
 
ಪ್ರದರ್ಶನ: ಸಮ್ಮೇಳನದ ಆವರಣದಲ್ಲಿ 30 ವಸ್ತು ಪ್ರದರ್ಶನ ಮಳಿಗೆಗಳನ್ನು ನಿರ್ಮಿಸಲಾಗಿದ್ದು, ಮಹಿಳಾ ಗೃಹ ಉತ್ಪನ್ನಗಳ ವಿಶೇಷ ಮಾರಾಟ ಮಳಿಗೆಗಳು ಮೆರುಗು ನೀಡಲಿವೆ. ಅಲ್ಲದೆ, ಪುಷ್ಪಾಲಂಕಾರ ಮತ್ತು ಫಲಪುಷ್ಪ ಪ್ರದರ್ಶನ ನಡೆಯಲಿದೆ.   
 
ರಾಷ್ಟ್ರ ರಕ್ಷಾನಿಧಿ ಸ್ವೀಕಾರ: ನಿರೀಕ್ಷೆಗೂ ಮೀರಿ ರಾಷ್ಟ್ರ ರಕ್ಷಾನಿಧಿ ಸಂಗ್ರಹವಾಗು ತ್ತಿದ್ದು, ಈಗಾಗಲೇ ₹ 70 ಲಕ್ಷ ಸಂಗ್ರಹವಾಗಿದೆ. ಸಮ್ಮೇಳನಕ್ಕೆ ಇನ್ನೆರಡು ದಿನ ಉಳಿದಿದ್ದು ಈ ಮೊತ್ತ ₹ 1 ಕೋಟಿ ಮೀರಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. 
 
ಸಮ್ಮೇಳನದ ದಿನ ಬೆಳಿಗ್ಗೆ 10 ಗಂಟೆಯವರೆಗೆ ಸಭಾಂಗಣದ ಬಳಿ ರಾಷ್ಟ್ರ ರಕ್ಷಾನಿಧಿ ಸ್ವೀಕರಿಸಲಾಗುವುದು. ಬಳಿಕ ಬಂದ ನಿಧಿಯನ್ನು ನೇರವಾಗಿ ದೆಹಲಿಗೆ ತಲುಪಿಸಲಾಗುತ್ತದೆ.
 
ಜಿಎಸ್‌ಬಿ ಹಿತರಕ್ಷಣಾ ವೇದಿಕೆಯ ಸಮಾಜ ಸಂಘಟನೆ ಹಾಗೂ ಸಮಾಜಮುಖಿ ಕಾರ್ಯಕ್ರಮಗಳಿಗೆ ಸಮ್ಮೇಳನದಲ್ಲಿ ದೇಣಿಗೆ ಸಂಗ್ರಹಣೆಗೂ ಅವಕಾಶ ಕಲ್ಪಿಸಲಾಗಿದೆ. ರಾಷ್ಟ್ರಕ್ಕೆ ಉತ್ತಮ ಸಂದೇಶ ನೀಡುವ ಸಮ್ಮೇಳನ ಯಶಸ್ಸಿಗೆ ಸಮಿತಿ ಪದಾಧಿಕಾರಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ.
 
**
ಬಿಗಿ ಭದ್ರತೆ
ನಾಗಲ್ಯಾಂಡ್‌ನ ರಾಜ್ಯಪಾಲ ಪಿ.ಬಿ. ಆಚಾರ್ಯ, ಕೇಂದ್ರ ರಕ್ಷಣಾ ಸಚಿವ ಮನೋಹರ ಪ್ರಭು ಪರಿಕ್ಕರ್, ರೈಲ್ವೆ ಸಚಿವ ಸುರೇಶ್ ಪ್ರಭು ಮತ್ತಿತರ 
ಗಣ್ಯರು ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಕಾರಣ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಗಣ್ಯರು ಕಾರ್ಯಕ್ರಮದಲ್ಲಿ ಇರುವಾಗ ವೇದಿಕೆ ಬಳಿ ಇತರ ವಾಹನಗಳಿಗೆ ನಿರ್ಬಂಧವಿದೆ. ವಿಶೇಷ ಪಾಸ್ ಇದ್ದವರಿಗೆ ಮಾತ್ರ ವೇದಿಕೆಗೆ ಪ್ರವೇಶ ಕಲ್ಪಿಸಲಾಗಿದೆ.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT