ಶನಿವಾರ, ಅಕ್ಟೋಬರ್ 24, 2020
27 °C

106 ಮಂದಿಗೆ ಕೊರೊನಾ: 181 ಮಂದಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲೆಯಲ್ಲಿ ಭಾನುವಾರ 106 ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. 181 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.

ದಾವಣಗೆರೆ ತಾಲ್ಲೂಕಿನಲ್ಲಿ 33 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಹರಿಹರ ತಾಲ್ಲೂಕಿನ 29, ಹೊನ್ನಾಳಿ–ನ್ಯಾಮತಿ ತಾಲ್ಲೂಕಿನ 21, ಚನ್ನಗಿರಿ ತಾಲ್ಲೂಕಿನ 18 ಹಾಗೂ ಜಗಳೂರು ತಾಲ್ಲೂಕಿನ 4 ಮಂದಿಗೆ ಸೋಂಕು ಬಂದಿದೆ. ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಒಬ್ಬರಿಗೆ ಸೋಂಕು ಇರುವುದು ಖಚಿತವಾಗಿದೆ.

ಜಿಲ್ಲೆಯಲ್ಲಿ ಈ ವರೆಗೆ 16,701 ಮಂದಿಗೆ ಕೊರೊನಾ ಬಂದಿದೆ. 15,039 ಮಂದಿ ಗುಣಮುಖರಾಗಿದ್ದಾರೆ. 243 ಮಂದಿ ಮೃತಪಟ್ಟಿದ್ದಾರೆ. 1419 ಸಕ್ರಿಯ ಪ್ರಕರಣಗಳಿವೆ.

7 ಜನರಿಗೆ ಸೋಂಕು

ಮಲೇಬೆನ್ನೂರು: ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಭಾನುವಾರ 7 ಜನರಿಗೆ ಕೊರೊನಾ ಸೋಂಕು ತಗುಲಿದೆ.

ಪಟ್ಟಣದ ಒಬ್ಬ ಪುರುಷ, ಇಬ್ಬರು ಮಹಿಳೆಯರು, ಉಕ್ಕಡಗಾತ್ರಿ, ಕೊಕ್ಕನೂರು, ಯಲವಟ್ಟಿ ತಾಂಡಾ, ಧೂಳೆಹೊಳೆ ಗ್ರಾಮದ ತಲಾ ಒಬ್ಬ ಮಹಿಯರಿಗೆ ಕೊರೊನಾ ಬಂದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.