ಶನಿವಾರ, ಆಗಸ್ಟ್ 20, 2022
21 °C
ದಾವಣಗೆರೆ 114, ಹರಿಹರ 42, ಹೊನ್ನಾಳಿ–ನ್ಯಾಮತಿ 31, ಚನ್ನಗಿರಿ 14, ಜಗಳೂರು 3 ಮಂದಿಗೆ ಸೋಂಕು

209 ಮಂದಿಗೆ ಕೊರೊನಾ: 85 ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲೆಯಲ್ಲಿ 209 ಮಂದಿಗೆ ಕೊರೊನಾ ವೈರಸ್‌ ಸೋಂಕು ಇರುವುದು ಬುಧವಾರ ದೃಢಪಟ್ಟಿದೆ. 15 ವೃದ್ಧರು, ಆರು ಮಂದಿ ವೃದ್ಧೆಯರು, ತಲಾ ಒಬ್ಬ ಬಾಲಕ, ಬಾಲಕಿ ಸೇರಿ85 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.

26 ವೃದ್ಧರು, 15 ವೃದ್ಧೆಯರು, ನಾಲ್ವರು ಬಾಲಕರು, ಒಬ್ಬ ಬಾಲಕಿಗೂ ಕೊರೊನಾ ಬಂದಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಿಬ್ಬಂದಿಗೆ, ಸೃಷ್ಟಿ ಆಸ್ಪತ್ರೆಯ ಸಿಬ್ಬಂದಿಗೂ ಸೋಂಕು ತಗುಲಿದೆ.

ದಾವಣಗೆರೆ ತಾಲ್ಲೂಕಿನಲ್ಲಿ 114 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಆಲೂರಹಟ್ಟಿ, ಎಲೆಬೇರೂರು, ಬುಗ್ಗೇಹಳ್ಳಿ, ಶಿರಮಗೊಂಡನಹಳ್ಳಿ, ಕಾಡಜ್ಜಿ, ಕುರುಡಿ, ಚಟ್ಟೋಬನಹಳ್ಳಿ, ನಾಗನೂರು ಹೀಗೆ 13 ಮಂದಿ ಗ್ರಾಮೀಣ ಪ್ರದೇಶದವರಾಗಿದ್ದಾರೆ. ಉಳಿದವರು ಮಹಾನಗರ ಪಾಲಿಕೆ ವ್ಯಾಪ್ತಿಯವರು.

ಸಿದ್ಧವೀರಪ್ಪ ಬಡಾವಣೆ ವಿನೋಬನಗರ, ಎಸ್‌ಎಸ್‌ ಬಡಾವಣೆ, ನಿಟುವಳ್ಳಿ, ಎಂಸಿಸಿ ‘ಬಿ’ ಬ್ಲಾಕ್‌, ಪಿ.ಜೆ. ಬಡಾವಣೆಗಲ್ಲಿ ಐದಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಹರಿಹರ ತಾಲ್ಲೂಕಿನ 42, ಹೊನ್ನಾಳಿ–ನ್ಯಾಮತಿ ತಾಲ್ಲೂಕಿನ 31, ಚನ್ನಗಿರಿ ತಾಲ್ಲೂಕಿನ 14, ಜಗಳೂರು ತಾಲ್ಲೂಕಿನ 3 ಮಂದಿಗೆ ಕೊರೊನಾ ಬಂದಿದೆ. ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಿತ್ರದುರ್ಗದ ಮೂವರು, ಹೊಳಲ್ಕೆರೆ ಮತ್ತು ಹಾವೇರಿಯ ತಲಾ ಒಬ್ಬರಲ್ಲೂ ಕೊರೊನಾ ಕಾಣಿಸಿಕೊಂಡಿದೆ.

ಜಿಲ್ಲೆಯಲ್ಲಿ ಈವರೆಗೆ 13,834 ಮಂದಿಗೆ ಕೊರೊನಾ ಬಂದಿದೆ. 10,733 ಮಂದಿ ಗುಣಮುಖರಾಗಿದ್ದಾರೆ. 227 ಮಂದಿ ಮೃತಪಟ್ಟಿದ್ದಾರೆ. 2,874 ಸಕ್ರಿಯ ಪ್ರಕರಣಗಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು