ದಾವಣಗೆರೆ:ಜಿಲ್ಲೆಯಲ್ಲಿ 237 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 7 ಜನರು ಮೃತಪಟ್ಟಿದ್ದಾರೆ. 158 ಮಂದಿ ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ನಗರದ ಬಂಬೂಬಜಾರ್ನ 76ರ ವೃದ್ಧ, ಕುರಬರಕೇರಿಯ 60 ವರ್ಷದ ವೃದ್ಧೆ, ವಿನಾಯಕ ಬಡಾವಣೆಯ 40ರ ಪುರುಷ, ಪಿ.ಜೆ. ಬಡಾವಣೆಯ 53ರ ಪುರುಷ, ತುರ್ಚಘಟ್ಟದ 69 ವರ್ಷದ ವೃದ್ಧ ಕೋವಿಡ್ನಿಂದ ಗುರುವಾರ ಮೃತಪಟ್ಟಿದ್ದಾರೆ. ಚಿಗಟೇರಿ ಆಸ್ಪತ್ರೆಗೆ ದಾಖಲಾಗಿದ್ದಚನ್ನಗಿರಿ ತಾಲ್ಲೂಕಿನ ಹಿರೇಮಳಲಿಯ 62ರ ವೃದ್ಧೆ ಬುಧವಾರ ಅಸುನೀಗಿದ್ದಾರೆ.

ಇಲ್ಲಿನ ಬಾಪೂಜಿ ಆಸ್ಪತ್ರೆಗೆ ದಾಖಲಾಗಿದ್ದ ಹಾವೇರಿ ಜಿಲ್ಲೆ ಗೋಧಿಹೊನ್ನಟ್ಟಿಯ 65ರ ವೃದ್ಧ ಮೃತಪಟ್ಟಿದ್ದಾರೆ.

ವಿದ್ಯಾನಗರದ 19ರ ಯುವಕ, ಜೆಜೆಎಂಸಿ ವೈದ್ಯಕೀಯ ಕಾಲೇಜಿನ 25 ವರ್ಷದ ಸ್ನಾತಕೋತ್ತರ ವಿದ್ಯಾರ್ಥಿ, ವಿವಿಧ ಬಡಾವಣೆಯ 28, 29ರ ಯವಕರಿಗೆ ಶುಕ್ರವಾರ ಕೊರೊನಾ ಸೋಂಕು ತಗುಲಿದೆ.

ಇಲ್ಲಿನ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ಚಿತ್ರದುರ್ಗದ 60ರ ವೃದ್ಧ, ಚಳ್ಳಕೆರೆಯ 20ರ ಯುವಕ, ಹರಪನಹಳ್ಳಿಯ ಇಬ್ಬರು ಸೇರಿ ಹೊರ ಜಿಲ್ಲೆಯ 4 ಜನರಿಗೆ ಸೋಂಕು ದೃಢಪಟ್ಟಿದೆ.

ದಾವಣಗೆರೆ ನಗರ ಸೇರಿ ತಾಲ್ಲೂಕಿನಲ್ಲಿ 48 ಪುರುಷರು, 42 ಮಹಿಳೆಯರಿಗೆ ಸೋಂಕು ಕಾಣಿಸಿಕೊಂಡಿದೆ. ಹರಿಹರದಲ್ಲಿ 15, ಜಗಳೂರಿನಲ್ಲಿ 17, ಚನ್ನಗಿರಿಯಲ್ಲಿ 43, ಹೊನ್ನಾಳಿಯಲ್ಲಿ 68 ಜನರಿಗೆ ಸೋಂಕು ತಗುಲಿದೆ.

ಒಂದು ವರ್ಷದ ಹೆಣ್ಣು ಮಗು, ಎರಡು ವರ್ಷದ ಗಂಡು ಮಗು, 6ರ ಬಾಲಕಿ, 7 ವರ್ಷದ ಬಾಲಕ ಸೇರಿ ದಾವಣಗೆರೆಯ 84 ಮಂದಿ, ಹರಿಹರ– 34, ಜಗಳೂರು 11, ಚನ್ನಗಿರಿಯ ಇಬ್ಬರು, ಹೊನ್ನಾಳಿ 25 ಮತ್ತು ಹರಪನಹಳ್ಳಿ ಒಬ್ಬರು ರಾಣೆಬೆನ್ನೂರಿನ ಒಬ್ಬರು ಸೇರಿ 158 ಮಂದಿ ಗುಣಮುಖರಾಗಿ ಕೋವಿಡ್ ಆಸ್ವತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಜಿಲ್ಲೆಯಲ್ಲಿ1971 ಸಕ್ರಿಯ ಪ್ರಕರಣಗಳು ಇದ್ದು, 4,388 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ 148 ಮಂದಿ ಮೃತಪಟ್ಟಿದ್ದಾರೆ. 1103 ಜನರ ಗಂಟಲು ದ್ರವದ ವರದಿ ಬರುವುದು ಬಾಕಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.