ಬುಧವಾರ, ಡಿಸೆಂಬರ್ 8, 2021
28 °C
ದಾವಣಗೆರೆಯ 18, ಹೊನ್ನಾಳಿಯ 14, ಹರಿಹರದ 5, ಚನ್ನಗಿರಿಯ ನಾಲ್ವರಿಗೆ ಕೋವಿಡ್‌

ಕೊರೊನಾ: 41 ಮಂದಿಗೆ ಸೋಂಕು; ಇಬ್ಬರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಏಳು ವೃದ್ಧರು, ಇಬ್ಬರು ವೃದ್ಧೆಯರು, ಮೂವರು ಬಾಲಕರು, ಇಬ್ಬರು ಬಾಲಕಿಯರು ಸೇರಿ 41 ಮಂದಿಗೆ ಸೋಂಕು ಇರುವುದು ಸೋಮವಾರ ದೃಢಪಟ್ಟಿದೆ. ಇಬ್ಬರು ಮೃತಪ್ಟಟ್ಟಿದ್ದಾರೆ. 82 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.

18ರಿಂದ 59 ವರ್ಷದ ವರೆಗಿನ 12 ಪುರುಷರು, 15 ಮಹಿಳೆಯರಿಗೆ ಸೋಂಕು ತಗುಲಿದೆ.

ಜೆ.ಎಚ್‌. ಪಟೇಲ್‌ ನಗರದ 79 ವರ್ಷದ ವೃದ್ಧ ಉಸಿರಾಟದ ಸಮಸ್ಯೆಗಾಗಿ ಜುಲೈ 1ರಂದು ಆಸ್ಪತ್ರೆಗೆ ದಾಕಲಾಗಿದ್ದು, ಅಂದೇ ಮೃತಪಟ್ಟಿದ್ದಾರೆ. ಅವರಿಗೆ ಹೃದಯ ಸಂಬಂಧಿ ಕಾಯಿಲೆ ಇತ್ತು ಎಂದು ಗುರುತಿಸಲಾಗಿದೆ. ಚನ್ನಗಿರಿ ತಾಲ್ಲೂಕು ನಲ್ಲೂರಿನ 50 ವರ್ಷದ ಪುರುಷ ಉಸಿರಾಟದ ಸಮಸ್ಯೆ, ಮಧುಮೇಹ, ರಕ್ತದೊತ್ತಡದಿಂದ ಬಳಲುತ್ತಿದ್ದು, ಜುಲೈ 24ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆಗಸ್ಟ್‌ 2ರಂದು ಮೃತಪಟ್ಟಿದ್ದಾರೆ.

ಹೊನ್ನಾಳಿ ತಾಲ್ಲೂಕಿನ ಸುರಹೊನ್ನೆಯ 14 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ. ಚನ್ನಗಿರಿ ತಾಲ್ಲೂಕಿನ ಎ.ಕೆ. ಕಾಲೊನಿ ಮತ್ತು ಕೆಜಿಎನ್‌ ನಗರದ ತಲಾ ಇಬ್ಬರಿಗೆ ಕೊರೊನಾ ಬಂದಿದೆ. ಹರಿಹರ ತಾಲ್ಲೂಕಿನ ಜೆ.ಸಿ. ಬಡಾವಣೆ, ಎ.ಕೆ. ಕಾಲೊನಿ, ವಿದ್ಯಾನಗರ, ಮಜ್ಜಗಿ ಬಡಾವಣೆ, ಕಾಳಿದಾನಗರದ ತಲಾ ಒಬ್ಬರಿಗೆ ಸೋಂಕು ತಗುಲಿದೆ.

ದಾವಣಗೆರೆಯ ಪಿ.ಜೆ. ಬಡಾವಣೆ ಮತ್ತು ಹೊಸ ಮಸೀದಿ ಗಲ್ಲಿಯ ತಲಾ ಇಬ್ಬರಿಗೆ ಕೊರೊನಾ ಬಂದಿದೆ. ಭಾರತ್‌ ಕಾಲೊನಿ, ಗಂಗನಕೋಟೆ, ಕೆಟಿಜೆನಗರ, ಒಬಣ್ಣನ ಹಳ್ಳಿ, ಚಿಕ್ಕಮ್ಮಣಿ ದೇವರಾಜ ಅರಸು ಬಡಾವಣೆ, ಬಸವೇಶ್ವರ ನಗರ, ದೊಡ್ಡಬಗ್ಗೆಹಳ್ಳಿ, ಎಸ್‌ಎಸ್‌ ಬಡಾವಣೆ, ದೇವರಾಜನಗರ ತಲಾ ಒಬ್ಬರಿಗೆ ಸೋಂಕು ಬಂದಿದೆ. ಇನ್‌ಸ್ಟಿಟ್ಯೂಷನಲ್‌ ಕ್ವಾರಂಟೈನ್‌ನಲ್ಲಿದ್ದ 6 ಮಂದಿಗೆ ವೈರಸ್‌ ತಗುಲಿದೆ.

ಜಿಲ್ಲೆಯಲ್ಲಿ ಈವರೆಗೆ 2425 ಮಂದಿಗೆ ಸೋಂಕು ತಗುಲಿದೆ. 57 ಜನ ಮೃತಪಟ್ಟಿದ್ದಾರೆ. 1561 ಮಂದಿ ಗುಣಮುಖರಾಗಿದ್ದಾರೆ. 807 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ 10 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು