ದಾವಣಗೆರೆ: ತಾಲ್ಲೂಕಿನ ಕುಕ್ಕವಾಡ ಗ್ರಾಮದ ಕಲ್ಲೇಶ್ವರ ಬಡಾವಣೆಯಲ್ಲಿ ಭಾನುವಾರ ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಎತ್ತಿನಗಾಡಿಯಿಂದ ಕೆಳಗೆ ಬಿದ್ದು ಬಾಲಕ ಮೃತಪಟ್ಟಿದ್ದಾನೆ.

ಕೊಟ್ಟೂರು ತಾಲ್ಲೂಕಿನ ಧೂಪದಹಳ್ಳಿ ತಾಂಡಾದ ಪತ್ತಿನಾಯ್ಕ ಹಾಗೂ ಲಕ್ಷ್ಮಿಬಾಯಿ ದಂಪತಿ ಪುತ್ರ ಪ್ರತಾಪ್ (6) ಮೃತ ಬಾಲಕ.

ಕಬ್ಬು ಕಡಿಯುವ ಕೆಲಸಕ್ಕಾಗಿ ಕುಕ್ಕವಾಡದ ಶುಗರ್ ಫ್ಯಾಕ್ಟರಿಗೆ ಸೇರಿದ ಜಾಗದಲ್ಲಿ ಶೆಡ್ ಹಾಕಿಕೊಂಡು ವಾಸವಾಗಿದ್ದರು. ಗ್ರಾಮದ ಪ್ರವೀಣ ಅವರ ಜಮೀನಿನಲ್ಲಿ ಕಬ್ಬು ಕಟಾವು ಮಾಡಿ ಎತ್ತಿನ ಗಾಡಿಗೆ ತುಂಬಿಕೊಂಡು ಮೂವರು ಗಾಡಿಯಲ್ಲಿ ಕುಳಿತುಕೊಂಡು ಹೋಗುವಾಗ ಏಕಾಏಕಿ ವೇಗವಾಗಿ ಚಲಿಸಿದ್ದರಿಂದ ಪ್ರತಾಪ್ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಆಗ ಗಾಡಿಯ ಚಕ್ರವು ಅವನ ಮೇಲೆ ಹರಿದಿದೆ. ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಬಾಲಕ ಮೃತಪಟ್ಟಿದ್ದಾನೆ.

ಪತ್ನಿ ಲಕ್ಷ್ಮಿಬಾಯಿ ಹದಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.