ಜಗಜೀವನರಾಂ ಪುಣ್ಯಸ್ಮರಣೆ: ‘ಶೋಷಿತರಿಗೆ ಆತ್ಮಸ್ಥೈರ್ಯ ತುಂಬಿದ ವಿಶ್ವಮಾನವ’

ಹುಬ್ಬಳ್ಳಿ: ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಬಾಬು ಜಗಜೀವನರಾಂ ಅವರ 35ನೇ ಪುಣ್ಯಸ್ಮರಣೆಯನ್ನು ಮಂಗಳವಾರ ನಗರದಲ್ಲಿ ಆಚರಿಸಲಾಯಿತು.
ಇಲ್ಲಿನ ಇಂದಿರಾಗಾಜಿನ ಮನೆ ಆವರಣದ ಬಾಬುಜೀ ಅವರ ಪ್ರತಿಮೆಗೆ ಶಾಸಕ ಪ್ರಸಾದ ಅಬ್ಬಯ್ಯ ಹಾಗೂ ವಿವಿಧ ಗಣ್ಯರು ಮಾಲಾರ್ಪಣೆ ಮಾಡಿದರು. ಮಹಾನಗರ ಪಾಲಿಕೆ ವತಿಯಿಂದಲೂ ಗೌರವ ಸಲ್ಲಿಸಲಾಯಿತು.
ಬಳಿಕ ಮಾತನಾಡಿದ ಅಬ್ಬಯ್ಯ ’ಸಮುದ್ರಕ್ಕೆ ಚೆಲ್ಲುತ್ತಿದ್ದ ಗೋಧಿಯನ್ನು ಆಮದು ಮಾಡಿಕೊಳ್ಳುತ್ತಿದ್ದ ಕಾಲದಲ್ಲಿ ಹಸಿರು ಕ್ರಾಂತಿ ಮೂಲಕ ದೇಶದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ, ವಿದೇಶಕ್ಕೂ ಗೋಧಿಯನ್ನು ರಫ್ತು ಮಾಡುವಂತೆ ಮಾಡಿದ ಕೀರ್ತಿ ಜಗಜೀವನ ರಾಂ ಅವರಿಗೆ ಸಲ್ಲಬೇಕು. ಅವರು ಕೇವಲ ಒಂದು ಸಮುದಾಯಕ್ಕೆ ಸೇರದೇ ವಿಶ್ವ ಮಾನವರಾಗಿದ್ದಾರೆ’ ಎಂದರು.
‘ಜಗಜೀವನರಾಂ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರು ಈ ದೇಶದ ಎರಡು ಕಣ್ಣುಗಳಾಗಿದ್ದಾರೆ. ಬಿಹಾರದಲ್ಲಿ ಹರಿಜನ ಸೇವಾ ಸಂಘ ಸ್ಥಾಪಿಸಿ ಶೋಷಿತರ-ಹರಿಜನರ ಧ್ವನಿಯಾಗಿ, ಅವರ ಹಕ್ಕುಗಳಿಗಾಗಿ ರಾಷ್ಟ್ರಮಟ್ಟದಲ್ಲಿ ಚಳವಳಿ ಮಾಡಿದರು’ ಎಂದು ನೆನಪಿಸಿಕೊಂಡರು.
ಸಮತಾ ಸೇನಾ, ಪ್ರಗತಿಪರ ಸಂಘಟನೆಗಳ ಒಕ್ಕೂಟ, ಲಡ್ಕರ್ ಸಂಘಟನೆ, ಸಮಗಾರ ಹರಳಯ್ಯ ಯುವ ಮಂಚ್, ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಅನುಷ್ಠಾನ ಹೋರಾಟ ಸಮಿತಿ ಜಿಲ್ಲಾ ಘಟಕ ಹಾಗೂ ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ ವತಿಯಿಂದ ಪುಷ್ಪ ನಮನ ಸಲ್ಲಿಸಲಾಯಿತು.
ಪಾಲಿಕೆ ಮಾಜಿ ಸದಸ್ಯರಾದ ಯಮನೂರು ಗುಡಿಹಾಳ, ವಿಜುನಗೌಡ ಪಾಟೀಲ, ಮುಖಂಡರಾದ ಸದಾನಂದ ಡಂಗನವರ, ರಜತ್ ಉಳ್ಳಾಗಡ್ಡಿಮಠ, ಸಮತಾಸೇನಾದ ಗುರುನಾಥ ಉಳ್ಳಿಕಾಶಿ, ಚೇತನ ಹಿರೇಕೆರೂರು, ಮಹೇಶ ದಾಬಡೆ, ಪ್ರೇಮನಾಥ ಚಿಕ್ಕತುಂಬಳ, ರೇವಣಸಿದ್ದಪ್ಪ ಹೊಸಮನಿ, ಶ್ರೀನಿವಾಸ ಬೆಳದಡಿ, ಪಕ್ಕಣ್ಣ ದೊಡ್ಡಮನಿ, ನವೀದ್ ಮುಲ್ಲಾ, ನಿರಂಜನ ಹಿರೇಮಠ, ಪ್ರಸನ್ನ ಮಿರಜಕರ್, ಪರಶುರಾಮ ಅರಕೇರಿ, ಮಂಜುನಾಥ ಉಳ್ಳಿಕಾಶಿ, ಗೋವಿಂದ ಬೆಲ್ದೋಣಿ, ಗುರುಮೂರ್ತಿ ಬೆಂಗಳೂರು, ಮೋಹನ ಹಿರೇಮನಿ, ದೇವೇಂದ್ರಪ್ಪ ಇಟಗಿ, ಮಂಜುನಾಥ ಸಣ್ಣಕ್ಕಿ, ಗೋವಿಂದ ಬೆಲ್ದೋಣಿ, ದೇವಣ್ಣ ಇಟಗಿ, ಭೀಮಾ ಹಲಗಿ, ಬಸಪ್ಪ ಮಾದರ, ನಾಗೇಶ ಕತ್ರಿಪುಲ್, ವೆಂಕಟೇಶ ನೀರಗಟ್ಟಿ, ಪ್ರಸಾದ ಪೆರೂರ, ಬಸವರಾಜ ದಿಂಡಾವರ, ರಾಜೇಶ ಸಂಕನಾಳ, ಹನಮಂತ ಹರಿಜನ, ಲೋಕೇಶ ಬಮ್ಮನಾಳ, ರಮೇಶ ಕೋಲಗೊಂಡ ಇದ್ದರು.
ಹೆಗ್ಗೇರಿಯಲ್ಲಿ ಆಚರಣೆ: ಹಳೇ ಹುಬ್ಬಳ್ಳಿಯ ಹೆಗ್ಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಮೋತಿಲಾಲ ರಾಠೋಡ ಮಾತನಾಡಿದರು.
ಶಿಕ್ಷಕರಾದ ದೇವಾನಂದ ಹಿರೇಮಠ, ಗಂಗಾಧರ ಬಾಣಿ, ಬಿ.ಜಿ. ಹಿರೇಮಠ, ಎಂ.ಕೆ. ಅಕ್ಕಸಾಲಿಗಾರ, ಆರ್.ಆರ್. ಸಿದ್ದಾಪೂರ. ಪಿ.ಎ. ಕಿಳಿ ಕಾತ್ಯಾರ್, ಆರ್.ವೈ. ನಿಕ್ಕಿಮ್ಮನವರ, ಅಂಗನವಾಡಿ ಶಿಕ್ಷಕಿಯರು, ಶಾಲಾ ಅಡುಗೆ ಸಹಾಯಕರು ಮತ್ತು ಎಸ್‌ಡಿಎಂಸಿ ಸದಸ್ಯರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.