ಜಗಳೂರು: ತಾಲ್ಲೂಕಿನ ರಿನ್ಯೂ ಪವರ್ ಖಾಸಗಿ ಕಂಪನಿಯಲ್ಲಿ 50ಕ್ಕೂ ಹೆಚ್ಚು ಕಾರ್ಮಿಕರನ್ನು ಏಕಾಏಕಿ ಕೆಲಸದಿಂದ ವಜಾಗೊಳಿಸಿರುವ ಕ್ರಮವನ್ನು ಖಂಡಿಸಿ ತಾಲ್ಲೂಕಿನ ಅಣಬೂರು ಗ್ರಾಮದಲ್ಲಿ ಸೋಮವಾರ ಕರುನಾಡ ನವ ನಿರ್ಮಾಣ ವೇದಿಕೆಯ ನೇತೃತ್ವದಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಅಣಬೂರು ಹಾಗೂ ಮಠದ ದ್ಯಾಮವ್ವನಹಳ್ಳಿಯಲ್ಲಿ ರಿನ್ಯೂ ಪವರ್ ಕಂಪನಿಗೆ ಸೇರಿದ ಪವನ ವಿದ್ಯುತ್ ಹಾಗೂ ಸೋಲಾರ್ ಕಂಪನಿಗಳಲ್ಲಿ ಕೇಲಸ ಮಾಡುವ 51ಜನ ಕಾರ್ಮಿಕರನ್ನ ಸಕಾರಣವಿಲ್ಲದೇ ಏಕಾಏಕಿ ಕೆಲಸದಿಂದ ವಜಾ ಮಾಡಲಾಗಿದೆ. ವಜಾಗೊಳಿಸಲು ಯಾವುದೇ ಕಾರಣಗಳನ್ನೂ ನೀಡದೇ ಕಂಪನಿ ಅಧಿಕಾರಿಗಳು ದೌರ್ಜನ್ಯದಿಂದ ವರ್ತಿಸಿದ್ದಾರೆ. ಇದರಿಂದ 50 ಕ್ಕೂ ಹೆಚ್ಚು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ರಾಜ್ಯಾಧ್ಯಕ್ಷ ಮಹಾಲಿಂಗಪ್ಪ ಜೆ ಎಚ್ ಎಂ ಹೊಳೆ ಆರೋಪಿಸಿದರು.

ರಿನ್ಯೂ ಕಂಪನಿ ಅಧೀನದಲ್ಲಿ ಬರುವ ರೇವಾ ಕಂಪನಿಯಲ್ಲಿ ಐದಾರು ವರ್ಷಗಳಿಂದ ಕೆಲಸ ಮಾಡುತ್ತಿರುವ 50ಕ್ಕೂ ಹೆಚ್ಚು ಕಾರ್ಮಿಕರನ್ನು ಸೂಕ್ತ ಕಾರಣವಿಲ್ಲದೇ ಏಕಾಏಕಿ ಕೆಲಸದಿಂದ ವಜಾ ಮಾಡಿದ್ದು ಅವರ ಬದಲಿಗೆ ಬೇರೆ ರಾಜ್ಯದ ಕಾರ್ಮಿಕರನ್ನು ಒಳಗೊಳಗೆ ನೇಮಕ ಮಾಡಿಕೊಳ್ಳಲಾಗಿದೆ. ಇದು ಕಾರ್ಮಿಕರ ಹಕ್ಕಿನ ಉಲ್ಲಂಘನೆಯಾಗಿದ್ದು, ಸ್ಥಳೀಯರಿಗೆ ಮಾಡಿರುವ ಅನ್ಯಾಯವಾಗಿದೆ. ಸ್ಥಳೀಯರು ಹಾಗೂ ಅನ್ಯ ರಾಜ್ಯದವರ ನಡುವೆ ತಾರತಮ್ಯ ಮಾಡುತ್ತಿರುವ ಕಂಪನಿ ನಮ್ಮ ನೆಲದಲ್ಲಿ ಕೋಟಿಗಟ್ಟಲೆ ಲಾಭ ಮಾಡಿಕೊಳ್ಳುತ್ತಿದ್ದು, ಇದೀಗ ನಮ್ಮ ಜನಗಳನ್ನೇ ಕಡೆಗಣಿಸುತ್ತರಿವುದು ದುರಹಂಕಾರದ ಪರಮಾವಾಧಿಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

’ ಕೂಡಲೇ ವಜಾಮಾಡಿರುವ ಕಾರ್ಮಿಕರನ್ನು ಮರು ನೇಮಕ ಮಾಡಿಕೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸ್ಥಳಿಯವಾಗಿ ಕಂಪನಿಯ ಕಾರ್ಯನಿರ್ವಹಣೆಗೆ ತಡೆಯೊಡ್ಡಲಾಗುವುದು. ಕಾರ್ಮಿಕರಿಗೆ ಮುಂಚಿತವಾಗಿ ನೋಟಿಸ್ ನೀಡದೇ ನಮ್ಮನ್ನ ಕೇಲಸದಿಂದ ತೆಗೆಯುವ ಮೂಲಕ ವಂಚಿಸಲಾಗಿದೆ ಎಂದು ರಂಗಸ್ವಾಮಿ ಹೇಳಿದರು.

ಕಾರ್ಮಿಕರಾದ ಮಹಮದ್ ಅಲಿ, ಅಂಬದಾಸ್.ಉಮೇಶ್ ಜೆ ಎಚ್.ಪ್ರಮೋದ್.ಪವನ್,

ಪುನೀತ್, ಕೀರಣ್ ಕುಮಾರ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.