ಕೋವಿಡ್‌ಗೆ ದಾವಣಗೆರೆಯ ಮತ್ತೊಬ್ಬ ಮಹಿಳೆ ಸಾವು

ದಾವಣಗೆರೆ: ಕೋವಿಡ್-19 ರೋಗದಿಂದ ಜಿಲ್ಲೆಯಲ್ಲಿ 55 ವರ್ಷ ಮಹಿಳೆಯೊಬ್ಬರು (ಪಿ-694) ಗುರುವಾರ ಮೃತಪಟ್ಟಿದ್ದಾರೆ.
ಮೃತ ಈ ಮಹಿಳೆಯೂ ಸೇರಿ ಕೊರೊನಾ ವೈರಸ್‌ನ ಸೋಂಕು ಮತ್ತೆ ಮೂವರು ಮಹಿಳೆಯರಿಗೆ ತಗುಲಿರುವುದು ಗುರುವಾರ ಬಂದ ವೈದ್ಯಕೀಯ ವರದಿ ದೃಢಪಡಿಸಿದೆ.
ತೀವ್ರ ಉಸಿರಾಟ ಸಮಸ್ಯೆಯಿಂದ (SARI) ಬಳಲುತ್ತಿದ್ದ ಮಹಿಳೆಯು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು ನಾಲ್ವರು ಕೋವಿಡ್ ರೋಗದಿಂದ ಮೃತಪಟ್ಟಂತಾಗಿದೆ.
53 ವರ್ಷದ ಮಹಿಳೆ (ಪಿ-695) ಹಾಗೂ 40 ವರ್ಷದ ಮಹಿಳೆಗೂ (ಪಿ-696) ಹೊಸದಾಗಿ ಸೋಂಕು ತಗುಲಿದೆ.
ಇದುವರೆಗೂ ಜಿಲ್ಲೆಯಲ್ಲಿ ಒಟ್ಟು 47 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇಬ್ಬರು ರೋಗಿಗಳು ಗುಣಮುಖರಾಗಿದ್ದಾರೆ. ಒಟ್ಟು 41 ಕೋವಿಡ್ ಪ್ರಕರಣಗಳು ಸಕ್ರಿಯವಾಗಿವೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.