ಶುಕ್ರವಾರ, ಜುಲೈ 30, 2021
20 °C

ಸೀರೆ ಅಂಗಡಿಯಲ್ಲಿ ಹಣ ಕಳ್ಳತನ ಮಾಡಿದ್ದ ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ನಗರದ ಬಿ.ಟಿ. ಗಲ್ಲಿಯಲ್ಲಿನ ಕ್ರಾಂತಿ ಡಿಸ್ಟ್ರಿಬ್ಯೂಟರ್ (ಸೀರೆ ಅಂಗಡಿ)ಯಲ್ಲಿ ಕಳ್ಳತನ ಮಾಡಿದ್ದ ಇಬ್ಬರನ್ನು ಬಂಧಿಸಿರುವ ಬಸವನಗರ ಠಾಣೆಯ ಪೊಲೀಸರು ₹ 1.90 ಲಕ್ಷವನ್ನು ವಶಪಡಿಸಿಕೊಂಡಿದ್ದಾರೆ.

ಹೊಂಡದ ಸರ್ಕಲ್ ನಿವಾಸಿ ನವೀನ್ (20) ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಬಂಧಿತರು. ಸೀರೆ ಅಂಗಡಿಯಲ್ಲಿ ಡ್ರಾ ದಲ್ಲಿ ಇಟ್ಟಿದ್ದ ₹ 2.50 ಲಕ್ಷ ಕಳ್ಳತನವಾಗಿತ್ತು. ಕ್ರಾಂತಿ ಡಿಸ್ಟ್ರಿಬ್ಯೂಟರ್ ಮಾಲೀಕ ಮನೀಶ್ ಮೆಹ್ತಾ ಅವರು ಬಸವನಗರ ಠಾಣೆಗೆ ಮಂಗಳವಾರ ದೂರು ನೀಡಿದ್ದರು.

ತನಿಖೆ ಕೈಗೊಂಡ ಠಾಣೆಯ ಎಸ್‌ಐ ನಾಗಪ್ಪ ಬಂಕಾಳಿ ಹಾಗೂ ಪಿಎಸ್‌ಐ ಶೀಲಾ ಹೊಂಗಲ್ ಹಾಗೂ ತಂಡ ಆರೋಪಿಗಳನ್ನು ಬಂಧಿಸಿದೆ. ಸಿಬ್ಬಂದಿ ಫಕೃದ್ದೀನ್ ಅಲಿ, ವಿಶ್ವನಾಥ ಗಡ್ಡಿ, ಅನಸೂಯ ಅವರು ಅವರು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು