ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕಾಂಗ್ರೆಸ್‌ನಿಂದ ಸಂಸದರಿಗೆ ಬಳೆ ರವಾನೆ

ರಾಜ್ಯಕ್ಕೆ ಅನುದಾನ ತಾರದ ಅಸಮರ್ಥ ಸಂಸದರು: ಡಿ.ಬಸವರಾಜ್ ಆರೋಪ
Last Updated 14 ಸೆಪ್ಟೆಂಬರ್ 2020, 13:24 IST
ಅಕ್ಷರ ಗಾತ್ರ

ದಾವಣಗೆರೆ: ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಬರಬೇಕಾಗಿರುವ ಅನುದಾನ ಮತ್ತು ಜಿಎಸ್‌ಟಿ ಪಾಲನ್ನು ತರಲು ವಿಫಲರಾಗಿರುವ ಸಂಸದರ ನಡೆಯನ್ನು ಖಂಡಿಸಿಸಂಸದರನ್ನು ಹುಡುಕಿಕೊಡಿ’ ಅಭಿಯಾನ ಆರಂಭಿಸಲಾಗುವುದು ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ್ ತಿಳಿಸಿದರು.

ರಾಜ್ಯದಲ್ಲಿ ಬಿಜೆಪಿಯಿಂದ 25 ಸಂಸದರು ಆಯ್ಕೆ ಆಗಿದ್ದರೂ ಪ್ರಧಾನಿ ನರೇಂದ್ರ ಮೋದಿಯ ಮುಂದೆ ಬಾಯಿ ಬಿಡುತ್ತಿಲ್ಲ. ರಾಜ್ಯದ ಪಾಲಿನ ಅನುದಾನ ತರುವಲ್ಲಿ ಇವರು ಅಸಮರ್ಥರಾಗಿದ್ದಾರೆ. ಇವರ ಕಾರ್ಯವೈಖರಿ ಇದೇ ರೀತಿ ಮುಂದುವರೆದರೆ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಬಿಜೆಪಿ ಸಂಸದರಿಗೆ ಬಳೆಯನ್ನು ಪೋಸ್ಟ್ ಮೂಲಕ ಕಳುಹಿಸಿಕೊಡಲಾಗುವುದು’ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಜನತೆಗೆ ಉತ್ತಮ ಆಡಳಿತ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ಆಡಳಿತ ವೈಫಲ್ಯಗಳನ್ನು ಮರೆಮಾಚಲು ಚಿತ್ರ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸುದ್ದಿಗಳನ್ನು ವೈಭವೀಕರಿಸುವಂತೆ ಬಿಜೆಪಿ ಸರ್ಕಾರ ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿದೆ. ಉತ್ತಮ ಸಂಸ್ಕಾರ ಹೊಂದಿರುವ ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್ ಹೆಸರಿನಲ್ಲಿ ಬಿಜೆಪಿ ಸರ್ಕಾರ ಮಸಿ ಬಳಿಯುತ್ತಿದೆ’ ಎಂದು ಆರೋಪಿಸಿದರು.

‘ರಾಜ್ಯ ಸರ್ಕಾರ ಕೊರೊನಾ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ವರ್ಗಾವಣೆ ಮಾಡಿ ಹಣ ಲೂಟಿ ಮಾಡುತ್ತಿದೆ. ಡ್ರಗ್ಸ್ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಿರುವ ರಾಜ್ಯ ಸರ್ಕಾರ, ಕೊರೊನಾದಿಂದ ಆಗಿರುವ ಭ್ರಷ್ಟಾಚಾರದ ತನಿಖೆಯನ್ನು ಸಿಸಿಬಿ ಏಕೆ ವಹಿಸುತ್ತಿಲ್ಲ’ ಎಂದು ಪ್ರಶ್ನಿಸಿದರು.

62 ಪ್ರಕರಣಗಳು ವಜಾ

‘62 ಪ್ರಕರಣ ಸಚಿವರಾದ ಬಿ.ಸಿ. ಪಾಟೀಲ್, ಆನಂದಸಿಂಗ್, ಸಂಸದ ಪ್ರತಾಪಸಿಂಹ, ಶಾಸಕ ರೇಣುಕಾಚಾರ್ಯ, ಶಾಸಕ ನೆಹರು ಓಲೇಕಾರ್ ಸೇರಿಬಿಜೆಪಿ ನಾಯಕರ ಮೇಲಿನ 62 ಪ್ರಕರಣಗಳನ್ನು ವಾಪಸ್ ಪಡೆದು ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಗೆ ಅಪಮಾನ ಮಾಡಿದೆ. ಕೋಮು ಸಾಮರಸ್ಯ ಕದಡಿದ ಪ್ರಕರಣಗಳನ್ನು ಹಿಂಪಡೆದ ಸರ್ಕಾರದ ಕ್ರಮ ಸರಿಯಲ್ಲ’ ಎಂದು ಖಂಡಿಸಿದರು.

ಸಚಿವ ನಾರಾಯಣಗೌಡ ವಿರುದ್ಧ ಆರೋಪ:‘ಇಂದ್ರಜಿತ್ ಲಂಕೇಶ್‌ ಬಿಜೆಪಿ ಕಾರ್ಯಕರ್ತ, ಪ್ರಶಾಂತ್ ಸಂಬರಗಿ ಬಿಜೆಪಿ ಏಜೆಂಟ್. ಡ್ರಗ್ಸ್ ದಂಧೆಯ ಬಗ್ಗೆ ಗೊತ್ತಿದ್ದರೆ ಮೊದಲೇ ತಿಳಿಸಬಹುದಿತ್ತು. ಚುನಾವಣೆ ವೇಳೆ ಸಚಿವ ನಾರಾಯಣಗೌಡ ಅವರ ಪರ ನಟಿ ರಾಗಿಣಿ ಪ್ರಚಾರ ಮಾಡಿದ್ದರು. ಅವರೂ ಭಾಗಿಯಾಗಿದ್ದಾರೆ ಎಂಬ ಶಂಕೆ ಇದೆ’ ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಸದಸ್ಯರಾದ ಚಮನ್‌ಸಾಬ್, ದೇವರಮನೆ ಶಿವಕುಮಾರ್, ಅಬ್ದುಲ್ ಲತೀಫ್, ಗಡಿಗುಡಾಳ್ ಮಂಜುನಾಥ್, ಮುಖಂಡರಾದ ಕೆ.ಎಂ.ಮಂಜುನಾಥ್, ಡಿ.ಶಿವಕುಮಾರ್, ಮಹಿಳಾ ಘಟಕ ರಾಜೇಶ್ವರಿ, ಶುಭಮಂಗಳ, ದ್ರಾಕ್ಷಾಯಣಮ್ಮ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT