ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೇಬೆನ್ನೂರಿನಲ್ಲಿ ಸಂಭ್ರಮದ ಭೂಮಿ ಹುಣ್ಣಿಮೆ

Published 29 ಅಕ್ಟೋಬರ್ 2023, 5:36 IST
Last Updated 29 ಅಕ್ಟೋಬರ್ 2023, 5:36 IST
ಅಕ್ಷರ ಗಾತ್ರ

ಮಲೇಬೆನ್ನೂರು: ಹೋಬಳಿ ವ್ಯಾಪ್ತಿಯಲ್ಲಿ ಶನಿವಾರ ‘ಭೂಮಿಹುಣ್ಣಿಮೆ’ ಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಆಶ್ವಯುಜ ಶುದ್ಧ ಹುಣ್ಣಿಮೆಯಂದು ಬಸಿರು ಹೊತ್ತ ಭೂ ತಾಯಿಗೆ ವಂದಿಸುವ ಹಬ್ಬ 'ಭೂಮಿ ಹುಣ್ಣಿಮೆ’. ಸೀಗೆ ಹುಣ್ಣಿಮೆ’ ಎಂದು ಕರೆಯಲಾಗುತ್ತದೆ.

ನವರಾತ್ರಿ ಮತ್ತು ದೀಪಾವಳಿ ನಡುವೆ ತೆನೆ ಹೊತ್ತು ನಿಂತ ಭೂತಾಯಿಯ ಬಸಿರ ಬಯಕೆ ತೀರಿಸಲಾಗುತ್ತದೆ. ಸಾಂಪ್ರದಾಯಿಕವಾಗಿ ಗಂಗಾ ಪೂಜೆ, ಭತ್ತ, ಅಡಿಕೆ ಮರಕ್ಕೆ ಹಸಿರು ಸೀರೆ ಉಡಿಸಿ ಬಳೆ, ಸೀರೆ, ಕುಪ್ಪಸ ತೊಡಿಸಲಾಗುತ್ತದೆ. ಕಡುಬು, ಬುತ್ತಿ, ಚಿತ್ರಾನ್ನ, ಸೇರಿ ವಿವಿಧ ಭಕ್ಷ್ಯಗಳನ್ನು ಎಡೆ ಇಟ್ಟು, ಬಳಿಕ ಪೂಜೆ ನೆರವೇರಿಸುತ್ತಾರೆ. ತೆನೆಕಟ್ಟಿದ ಬೆಳೆ ಯಾವುದೇ ಅಡ್ಡಿ ಆತಂಕ ಇಲ್ಲದೆ ಕಣಕ್ಕೆ ಬಂದು ರಾಶಿ ಆಗಲಿ ಎಂದು ಪ್ರಾರ್ಥಿಸಲಾಗುವುದು ಎಂದು ಸ್ಥಳೀಯರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT