ದಾವಣಗೆರೆ: ಇಲ್ಲಿನ ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರಿಗೆ ಕಪ್ಪು ಶಿಲೀಂಧ್ರ ಇರುವುದು ಗುರುವಾರ ದೃಢಪಟ್ಟಿದೆ. ಜಿಲ್ಲೆಯಲ್ಲಿ ಕಪ್ಪು ಶಿಲೀಂಧ್ರ ಪ್ರಕರಣಗಳ ಸಂಖ್ಯೆ 117ಕ್ಕೇರಿದೆ. ಗುರುವಾರ ಇಬ್ಬರು ಗುಣಮುಖರಾಗಿದ್ದಾರೆ. ಇಲ್ಲಿವರೆಗೆ ಒಟ್ಟು 64 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಇಲ್ಲಿವರೆಗೆ ಜಿಲ್ಲಾ ಆಸ್ಪತ್ರೆಯಲ್ಲಿ 77 ಪ್ರಕರಣ ದೃಢಪಟ್ಟಿದ್ದು, 43 ಮಂದಿ ಗುಣಮುಖರಾಗಿದ್ದಾರೆ. ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ 37 ಮಂದಿಯಲ್ಲಿ ಶಿಲೀಂಧ್ರ ಕಾಣಿಸಿಕೊಂಡಿದ್ದು, 23 ಮಂದಿ ಗುಣಮುಖರಾಗಿದ್ದಾರೆ. ಬಾಪೂಜಿ ಆಸ್ಪತ್ರೆಯಲ್ಲಿ ಎರಡು ಪ್ರಕರಣ ಹಾಗೂ ಕಾಲೇಜ್ ಆಫ್ ಡೆಂಟಲ್ ಸೈನ್ಸ್‌ನಲ್ಲಿ ಒಂದು ಪ್ರಕರಣ ಪತ್ತೆಯಾಗಿದ್ದು, ಅವರು ಗುಣಮುಖರಾಗಿದ್ದಾರೆ.
ಕೊರೊನಾದಿಂದ ನಾಲ್ವರು ಸಾವು: ಕೊರೊನಾ ಸೋಂಕಿನಿಂದ ಜಿಲ್ಲೆಯಲ್ಲಿ ನಾಲ್ವರು ಮೃತಪಟ್ಟಿರುವುದು ಗುರುವಾರ ದೃಢಪಟ್ಟಿದೆ.
ದಾವಣಗೆರೆ ತಾಲ್ಲೂಕು ತರಳಬಾಳು ಬಡಾವಣೆಯ 70 ವರ್ಷದ ವೃದ್ಧೆ, ಚನ್ನಗಿರಿ ತಾಲ್ಲೂಕು ಹಿರೇಕೋಗಲೂರಿನ 50 ವರ್ಷದ ಮಹಿಳೆ, ಹರಿಹರ ಹನಗವಾಡಿಯ 76 ವರ್ಷದ ವೃದ್ಧೆ, ಹೊನ್ನಾಳಿ ತಾಲ್ಲೂಕು ಹಿರೇಗೋಣಿಗೆರೆಯ 58 ವರ್ಷದ ಪುರುಷ ಮೃತಪಟ್ಟವರು.
ದಾವಣಗೆರೆ ತಾಲ್ಲೂಕಿನ 15, ಹೊನ್ನಾಳಿ ತಾಲ್ಲೂಕಿನ 4, ಚನ್ನಗಿರಿ ತಾಲ್ಲೂಕಿನ 5, ಹರಿಹರ ತಾಲ್ಲೂಕಿನ 3 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ. ಜಗಳೂರು ತಾಲ್ಲೂಕಿನಲ್ಲಿ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೊರ ಜಿಲ್ಲೆಯ ಒಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.