ದಾವಣಗೆರೆ: ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರಿಗೆ ಶನಿವಾರ ಮತ್ತೆ ಹೋರಿ ತಿವಿಯಲು ಬಂದಿದೆ. ಬೆಂಬಲಿಗರು ಕೂಡಲೇ ರೇಣುಕಾಚಾರ್ಯ ಅವರನ್ನು ಎಳೆದುಕೊಂಡಿದ್ದರಿಂದ ಅವರು ಬಚಾವಾಗಿದ್ದಾರೆ.

ಹೊನ್ನಾಳಿ ತಾಲ್ಲೂಕು ಕತ್ತಿಗೆ ಗ್ರಾಮದಲ್ಲಿ ಶನಿವಾರ ಹೋರಿ ಬೆದರಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಥಳೀಯ ಶಾಸಕರಾಗಿರುವ ರೇಣುಕಾಚಾರ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಗ ಹೋರಿ ಹಿಡಿದುಕೊಳ್ಳುವಂತೆ ಸ್ಥಳೀಯರು ಪುಸಲಾಯಿಸಿದ್ದಾರೆ. ರೇಣುಕಾಚಾರ್ಯ ಹಿಡಿದುಕೊಳ್ಳಲು ಹೋಗುತ್ತಿದ್ದಂತೆ ಹೋರಿ ತಿವಿಯಲು ಬಂದಿದೆ.ಅದೇ ಹೊತ್ತಿಗೆ ಬೆಂಬಲಿಗರು ಅವರನ್ನು ಎಳೆದುಕೊಂಡಿದ್ದರಿಂದ ಪಾರಾಗಿದ್ದಾರೆ.

ಇದನ್ನೂ ಓದಿ: VIDEO| ಶಾಸಕ ರೇಣುಕಾಚಾರ್ಯಗೆ ಹೋರಿ ತಿವಿತ!

ಅಕ್ಟೋಬರ್ 31ರಂದು ಹೋರಿ ಬೆಸರಿಸುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವೇಳೆ ಹೋರಿ ತಿವಿದಿದ್ದರಿಂದ ರೇಣುಕಾಚಾರ್ಯ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಈಗ ಮತ್ತೆ ಹೋರಿ ತಿವಿಯಲು ಬಂದಿರುವುದು ಜನರನ್ನು ಚಕಿತಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.