ಸೋಮವಾರ, ಏಪ್ರಿಲ್ 6, 2020
19 °C

ದಾವಣಗೆರೆಯಿಂದ ಶಿರಡಿ, ಮಂಗಳೂರು, ಶ್ರೀಶೈಲಕ್ಕೆ ಬಸ್‍

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೆಎಸ್‌ಆರ್‌ಟಿಸಿ ದಾವಣಗೆರೆ ಘಟಕದಿಂದ ಶಿರಡಿ ಹಾಗೂ ಮಂಗಳೂರಿಗೆ ನಾನ್‌ ಎಸಿ ಸ್ಲೀಪರ್‌ ಹಾಗೂ ಶ್ರೀಶೈಲಕ್ಕೆ ವೇಗದೂತ ಸಾರಿಗೆಯನ್ನು ಆರಂಭಿಸಲಾಯಿತು.

ನಾನ್‌ ಎಸಿ ಸ್ಲೀಪರ್‌ ಬಸ್‌ ದಾವಣಗೆರೆಯಿಂದ ಶಿರಡಿಗೆ ಸಂಜೆ 5.15ಕ್ಕೆ ಹೊರಟು ಹರಿಹರ, ರಾಣೆಬೆನ್ನೂರು, ಹಾವೇರಿ, ಹುಬ್ಬಳ್ಳಿ, ಬೆಳಗಾವಿ, ಕೊಲ್ಲಾಪುರ, ಪೂನಾ, ಅಹಮದ್‍ನಗರ ಮಾರ್ಗವಾಗಿ ಮರುದಿನ ಬೆಳಿಗ್ಗೆ 7.45ಕ್ಕೆ ಶಿರಡಿ ತಲುಪಲಿದೆ. ಹಾಗೂ ಸಂಜೆ 5.15ಕ್ಕೆ ಶಿರಡಿಯಿಂದ ಹೊರಟು ಅದೇ ಮಾರ್ಗವಾಗಿ ಮರುದಿನ ಬೆಳಿಗ್ಗೆ 7.45ಕ್ಕೆ ದಾವಣಗೆರೆ ತಲುಪುವುದು.

ದಾವಣಗೆರೆಯಿಂದ ಮಂಗಳೂರಿಗೆ ಹೋಗುವ ಬಸ್‌ ರಾತ್ರಿ 9.30ಕ್ಕೆ ಹೊರಟು ಹರಿಹರ, ಶಿವಮೊಗ್ಗ, ಕುಂದಾಪುರ, ಮಣಿಪಾಲ, ಉಡುಪಿ ಮಾರ್ಗವಾಗಿ ಬೆಳಿಗ್ಗೆ 6ಕ್ಕೆ ಮಂಗಳೂರಿಗೆ ತಲುಪಲಿದೆ. ಮಂಗಳೂರಿನಿಂದ ರಾತ್ರಿ 10.30ಕ್ಕೆ ಹೊರಟು ಅದೇ ಮಾರ್ಗವಾಗಿ ಬೆಳಿಗ್ಗೆ 6.30ಕ್ಕೆ ದಾವಣಗೆರೆ ತಲುಪಲಿದೆ.

ದಾವಣಗೆರೆಯಿಂದ ಶ್ರೀ ಶೈಲಕ್ಕೆ ಹೋಗುವ ಬಸ್ ಸಂಜೆ 4.30ಕ್ಕೆ ಹೊರಟು ಹರಿಹರ, ಹರಪನಹಳ್ಳಿ, ಹೊಸಪೇಟೆ, ಬಳ್ಳಾರಿ ಕರ್ನೂಲ್, ಡೋರ್ನಾಳು, ಆತ್ಮಕೂರು ಮಾರ್ಗವಾಗಿ ಶ್ರೀಶೈಲವನ್ನು ಮರುದಿನ ಬೆಳಿಗ್ಗೆ 5.45ಕ್ಕೆ ತಲುಪಲಿದೆ. ಮತ್ತು ಬೆಳಿಗ್ಗೆ 5.35ಕ್ಕೆ ಶ್ರೀಶೈಲದಿಂದ ಹೊರಟು ಅದೇ ಮಾರ್ಗವಾಗಿ ಮರುದಿನ ಬೆಳಿಗ್ಗೆ 6.45ಕ್ಕೆ ದಾವಣಗೆರೆ ತಲುಪಲಿದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ದಾವಣಗೆರೆ ಬಸ್ ನಿಲ್ದಾಣದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಚಾಲನೆ ನೀಡಿದರು. ಮಹಾನಗರಪಾಲಿಕೆ ನೂತನ ಮೇಯರ್ ಬಿ.ಜಿ.ಅಜಯ್ ಕುಮಾರ್, ಉಪ ಮೇಯರ್ ಸೌಮ್ಯ ಎಸ್.ನರೇಂದ್ರಕುಮಾರ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಹೆಬ್ಬಾಳ್‌, ಡಿಟಿಒ ಮಂಜುನಾಥ್, ಡಿಪೊ ಮ್ಯಾನೇಜರ್ ಎಂ. ರಾಮಚಂದ್ರಪ್ಪ, ಲೆಕ್ಕಾಧಿಕಾಧಿಕಾರಿ ದಿನೇಶ್ ಇತರೆ ಅಧಿಕಾರಿಗಳು ಇದ್ದರು.

ಪ್ರಯಾಣ ದರ ಎಷ್ಟು

ದಾವಣಗೆರೆಯಿಂದ ಶಿರಡಿಗೆ ₹1,000, ದಾವಣಗೆರೆಯಿಂದ ಶ್ರೀಶೈಲಕ್ಕೆ ₹652, ದಾವಣಗೆರೆಯಿಂದ ಮಂಗಳೂರಿಗೆ ₹450.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು