ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿ.ಜಿ. ಆಸ್ಪತ್ರೆ: ಕೇರ್‌ ಕಂಪ್ಯಾನಿಯನ್‌ ಕಾರ್ಯಕ್ರಮ ಯಶಸ್ವಿ

Published 24 ಆಗಸ್ಟ್ 2024, 14:17 IST
Last Updated 24 ಆಗಸ್ಟ್ 2024, 14:17 IST
ಅಕ್ಷರ ಗಾತ್ರ

ದಾವಣಗೆರೆ: ಇಲ್ಲಿನ ಚಿಗಟೇರಿ ಜಿಲ್ಲಾ ಆಸ್ಪತ್ರೆ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಶುಕ್ರವಾರ ಕೇರ್‌ ಕಂಪ್ಯಾನಿಯನ್‌ ಕಾರ್ಯಕ್ರಮ (ಸಿಸಿಪಿ) ಕಾರ್ಯಕ್ರಮ ನಡೆಯಿತು.

ರಾಷ್ಟ್ರೀಯ ಕೇರ್‌ ಕಂಪ್ಯಾನಿಯನ್‌ ಕಾರ್ಯಕ್ರಮವು ತಾಯಂದಿರು ಹಾಗೂ ಕುಟುಂಬದ ಸದಸ್ಯರಿಗೆ ನವಜಾತ ಶಿಶುವಿನ ಆರೈಕೆ ಹಾಗೂ ಆರೋಗ್ಯದ ಬಗ್ಗೆ ಮಾಹಿತಿ ನೀಡುವುದಾಗಿದೆ. ಈ ಕಾರ್ಯಕ್ರಮವು ಜಿಲ್ಲೆಯಲ್ಲಿ ಯಶಸ್ವಿಯಾಗಿದ್ದು, ಹಲವು ತರಬೇತಿ ಕಾರ್ಯಕ್ರಮಗಳ ಮೂಲಕ ತಾಯಂದಿರಿಗೆ ಮಾಹಿತಿ ನೀಡಲಾಗಿದೆ ಎಂದು ಕಾರ್ಯಕ್ರಮದ ತಾಂತ್ರಿಕ ಸಲಹೆಗಾರರಾದ ಪರ್ವೀನ್‌ ಅಹಮ್ಮದ್‌ ಹೇಳಿದರು.

ರಾಜ್ಯದಲ್ಲೇ ದಾವಣಗೆರೆಯಲ್ಲಿ ಈ ಕಾರ್ಯಕ್ರಮ ಭಾರಿ ಯಶಸ್ಸು ಕಂಡಿದೆ. ಜಿಲ್ಲೆಯಲ್ಲಿ ಕಾರ್ಯಕ್ರಮದ ಮೂಲಕ 2.47 ಲಕ್ಷ ತಾಯಂದಿರಿಗೆ ಮಾಹಿತಿ ನೀಡಲಾಗಿದೆ. ಇದರ ಯಶಸ್ಸಿನಲ್ಲಿ ಸಿಸಿಪಿ ಮಾಸ್ಟರ್‌ ಟ್ರೈನರ್‌ಗಳ ಪಾಲು ಇದೆ. ಈ ಕಾರ್ಯಕ್ರಮದ ಮೂಲಕ ರಾಜ್ಯದ 44 ಜಿಲ್ಲಾ ಆಸ್ಪತ್ರೆ, 94 ಉಪ ಜಿಲ್ಲಾ ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಚಿಗಟೇರಿ ಜಿಲ್ಲಾ ಆಸ್ಪತ್ರೆ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 3,661 ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಉತ್ತಮ ಪ್ರದರ್ಶನ ತೋರಿದ ಮಾಸ್ಟರ್ ಟ್ರೈನರ್‌ಗಳಾದ ಸಿ.ಜಿ. ಆಸ್ಪತ್ರೆಯ ನರ್ಸಿಂಗ್ ಅಧಿಕಾರಿಗಳಾದ ದೇವಕಿ, ಇಂದಿರಾ, ಆಶಾಬಾಯಿ, ಆರ್‌ಎಂಎನ್‌ಸಿಎಚ್‌ ಕೌನ್ಸಿಲರ್‌ ಶ್ರೀದೇವಿ, ಆರೋಗ್ಯ ಸಲಹೆಗಾರರಾದ ಕಮಲಾಕ್ಷಿ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಮಧು ಕೆ.ಎಸ್‌., ನರ್ಸಿಂಗ್‌ ಸೂ‍ಪರಿಂಟೆಂಡೆಂಟ್ ಸುಧಾ ಜಿ.ಎಚ್., ಆರ್‌ಎಂಎನ್‌ಸಿಎಚ್‌ ಕೌನ್ಸಿಲರ್‌ ಗೀತಮ್ಮ, ನರ್ಸಿಂಗ್ ಅಧಿಕಾರಿ ಅನಿತಾ ಸಿ. ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಡಿಎಚ್‌ಒ ಡಾ.ಎಸ್‌. ಷಣ್ಮುಖಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ. ರಾಘವನ್, ಜಿಲ್ಲಾ ಆಸ್ಪತ್ರೆಯ ಸರ್ಜನ್‌ ಡಾ. ನಾಗೇಂದ್ರಪ್ಪ, ಆರ್‌ಸಿಎಚ್‌ ಅಧಿಕಾರಿ ಡಾ. ರೇಣುಕಾರಾಧ್ಯ, ಅಧಿಕಾರಿಗಳಾದ ಡಾ. ಮಧು, ನಾಗವೇಣಿ, ವರಲಕ್ಷ್ಮಿ, ಶಾಂತಿ, ಜೀವಿತಾ, ಮಣಿಕಂಠ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT