ಶುಕ್ರವಾರ, ಜುಲೈ 30, 2021
25 °C

ಹರಪನಹಳ್ಳಿ: ಚಿರತೆ ಪ್ರತ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ: ತಾಲ್ಲೂಕಿನ ಕಡತಿ, ವಟ್ಲಹಳ್ಳಿ ಸಮೀಪದಲ್ಲಿ ಕಂಡುಬಂದ ಚಿರತೆಯನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿರುವ ಗ್ರಾಮಸ್ಥರು ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಗ್ರಾಮಗಳ ಸುತ್ತಮುತ್ತ ಎರಡು ದಿನಗಳ ಹಿಂದೆ ಚಿರತೆ ಕಂಡುಬಂದಿದ್ದು ಕೃಷಿ ಕೆಲಸಕ್ಕೆ ತೆರಳುವ ಜನರು ಆತಂಕಗೊಂಡಿದ್ದಾರೆ. ಈ ಹಿಂದೆಯೂ ಚಿರತೆ ಸಮೀಪದ ಹೊಲಗಳಲ್ಲಿ ದಾಳಿ ಮಾಡಿ, ಕುರಿ, ಮೇಕೆ ತಿಂದು ಹಾಕಿತ್ತು. ಆದಕಾರಣ ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು