ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಅಗತ್ಯ: ಶಿಕ್ಷಕ ಮಹಾರುದ್ರಪ್ಪ ಮೆಣಸಿನಕಾಯಿ

Last Updated 5 ಏಪ್ರಿಲ್ 2022, 13:25 IST
ಅಕ್ಷರ ಗಾತ್ರ

ದಾವಣಗೆರೆ: ಶಾಲೆಗಳಲ್ಲಿ ಅಕ್ಷರದ ಜತೆಗೆ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ಮತ್ತು ಮಾನವೀಯ ಮೌಲ್ಯಗಳನ್ನು ತುಂಬುವ ಹೊಣೆಯನ್ನು ಶಿಕ್ಷಕರು ಪಾಲಿಸಬೇಕಿದೆ ಎಂದು ಶಿಕ್ಷಕ ಮಹಾರುದ್ರಪ್ಪ ಮೆಣಸಿನಕಾಯಿ ಹೇಳಿದರು.

ನಗರದ ಬಂಕಾಪುರದ ನಂಜುಂಡಪ್ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಶಿಕ್ಷಕರಿಗೆ ನೆನಪಿನ ಕಾಣಿಕೆ ಹಾಗೂ ನಿವೃತ್ತ ಶಿಕ್ಷಕರಾದ ಜಿ.ವಿ. ಮಂಜಪ್ಪ ಅವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಈ ಹಿಂದೆ ವಿದ್ಯಾಸಂಸ್ಥೆಗಳ ಸಂಖ್ಯೆ ಕಡಿಮೆಯಿದ್ದರೂ ವಿದ್ಯಾರ್ಥಿಗಳಿಗೆ ಅಕ್ಷರದ ಜೊತೆಗೆ ಮೌಲ್ಯಯುತ ಶಿಕ್ಷಣ ದೊರಕುತ್ತಿತ್ತು. ಮಾನವೀಯ ಮೌಲ್ಯಗಳನ್ನು ಕಲಿಯುತ್ತಿದ್ದ ಮಕ್ಕಳು ತಮ್ಮ ಪೋಷಕರನ್ನು ತಮ್ಮೊಟ್ಟಿಗೆ ಇಟ್ಟುಕೊಂಡು ಜತನ ಮಾಡುತ್ತಿದ್ದರು ಎಂದರು.

ನಿವೃತ್ತ ಶಿಕ್ಷಕರಾದ ಜಿ.ವಿ. ಮಂಜಪ್ಪ, ‘ಮಕ್ಕಳಿಗೆ ಅಕ್ಷರ ಕಲಿಸಿಕೊಟ್ಟರೆ ಸಾಲದು, ಅದರ ಜತೆಗೆ ಬದುಕಿಗೆ ಬೇಕಾದ ಮೌಲ್ಯಗಳನ್ನು ಹಾಗೂ ವ್ಯಾವಹಾರಿಕ ಜ್ಞಾನವನ್ನು ನೀಡುವುದು ಒಬ್ಬ ಶಿಕ್ಷಕ ಮಾಡಬೇಕಾದ ಕಾರ್ಯ’ ಎಂದು ಹೇಳಿದರು.

ಹಳೆಯ ವಿದ್ಯಾರ್ಥಿಗಳು ಶಿಕ್ಷಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಶಾಲೆಯ ಮುಖ್ಯೋಪಾಧ್ಯಾಯರಾದ ಹನುಮಂತನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಶಂಭುಲಿಂಗಪ್ಪ, ಎಸ್.ಯು. ಜವಾಯಿ, ಎಸ್‍ಡಿಎಂಸಿ ನಿರ್ದೇಶಕ ವೀರಭದ್ರಪ್ಪ ಮಾತನಾಡಿದರು.

ಶಾಲೆಯ ಶಿಕ್ಷಕರಾದ ಬಿ.ಎ. ಬಿರಾದಾರ್, ಎಸ್.ವಿ. ಸುಧಾರಾಣಿ, ಗಂಗಪ್ಪ ಉಗುರ್‍ಕೋಡ್, ಸಿ. ಮಹೇಂದ್ರಪ್ಪ, ಎಸ್‍ಡಿಎಂಸಿ ಕಾರ್ಯದರ್ಶಿ ಬೆಳ್ಳೊಡಿ ಮಲ್ಲಿಕಾರ್ಜುನ್, ಕೆ. ಬಸವರಾಜಪ್ಪ, ಖಜಾಂಚಿ ಎಂ. ಬನ್ನಯ್ಯಸ್ವಾಮಿ, ನಿರ್ದೇಶಕರಾದ ಕೆ.ಎನ್. ಗಣೇಶ್, ಹಳೆಯ ವಿದ್ಯಾರ್ಥಿಗಳಾದ ಧರ್ಮರಾಜ್, ರಾಜೇಶ್ ಕುಮಾರ್, ಕಾವ್ಯ ಬಿ.ಕೆ., ನೇತ್ರಾ, ಗಣೇಶ್, ಹರೀಶ್, ಮಮತಾ, ಶಿವರಾಜ್, ಕರಿಬಸಪ್ಪ, ಸುನೀತಾ, ಮಹೇಶ್ವರಿ, ಮಂಜುನಾಥ್, ಶಂಕರ್, ಪ್ರಶಾಂತ್, ಕುಮಾರ್, ದೀಪಾ, ಸುಚಿತಾ, ಸುನೈನಾ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT