ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಕಾರ್ಯಕ್ರಮಕ್ಕಾಗಿ ಸಿದ್ಧಗೊಳ್ಳುತ್ತಿರುವ ಮೈದಾನದಲ್ಲಿ ನಾಗರಹಾವು ಪ್ರತ್ಯಕ್ಷ

Last Updated 16 ಮಾರ್ಚ್ 2023, 7:29 IST
ಅಕ್ಷರ ಗಾತ್ರ

ದಾವಣಗೆರೆ: ನರೇಂದ್ರಮೋದಿ ಭಾಗವಹಿಸಲಿರುವ ಕಾರ್ಯಕ್ರಮಕ್ಕಾಗಿ ಸಿದ್ಧಗೊಳ್ಳುತ್ತಿರುವ ಮೈದಾನದಲ್ಲಿ ಗುರುವಾರ ಭೂಮಿಪೂಜೆ ಸಂದರ್ಭದಲ್ಲಿ ನಾಗರಹಾವು ಪ್ರತ್ಯಕ್ಷವಾಯಿತು.

ಬಿಜೆಪಿಯ ರಥಯಾತ್ರೆಗಳ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಮಾರ್ಚ್‌ 25ಕ್ಕೆ ನರೇಂದ್ರ ಮೋದಿ ದಾವಣಗೆರೆಗೆ ಬರಲಿದ್ದಾರೆ.

ಈ ಹಿನ್ನೆಲೆಯಲ್ಲಿ ದಾವಣಗೆರೆ ಜಿಎಂಐಟಿ ಪಕ್ಕದ ನಲ್ವತ್ತು ಎಕರೆ ಜಮೀನನ್ನು ಸಮತಟ್ಟುಗೊಳಿಸಲಾಗಿತ್ತು. ಚಪ್ಪರ ಹಾಕುವ, ವೇದಿಕೆ ತಯಾರಿಸುವ ಕಾರ್ಯಕ್ಕೆ ಭೂಮಿ ಪೂಜೆ ಗುರುವಾರ ಹಮ್ಮಿಕೊಳ್ಳಲಾಗಿತ್ತು.

ಭೂಮಿಪೂಜೆಗಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್ ಬರುವ ಕೆಲವೇ ನಿಮಿಷಗಳ ಮೊದಲು ನಾಗರ ಹಾವು ಕಾಣಿಸಿಕೊಂಡಿತು. ಬಿಜೆಪಿ ಕಾರ್ಯಕರ್ತರು ಸ್ವಲ್ಪ ಹೊತ್ತು ಸ್ತಬ್ದಗೊಂಡರು. ಬಳಿಕ ಹಾವು ಮುಂದಕ್ಕೆ ಸಾಗಲು ದಾರಿಮಾಡಿಕೊಟ್ಟರು.

ಗಾಯಗೊಂಡಿದ್ದ ಈ ಹಾವು ನಿಧಾನಕ್ಕೆ ಮುಂದೆ ಹೋಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT