ಬುಧವಾರ, ಮಾರ್ಚ್ 3, 2021
26 °C
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಲ್ಕಿಶ್ ಬಾನು

ಜಾತಿ ಧರ್ಮವಿಲ್ಲದ ಪಕ್ಷ ಕಾಂಗ್ರೆಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಹರಪನಹಳ್ಳಿ: ಆಡಳಿತ ಪಕ್ಷಗಳಿಗೆ ವಿರೋಧ ಪಕ್ಷಗಳು ಚಾಟಿ ಏಟಿನಂತಹ ವೀಕ್ಷಕರಾದರೆ ಅಭಿವೃದ್ಧಿ ಸಾಧ್ಯ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಲ್ಕಿಶ್ ಬಾನು ಹೇಳಿದರು.

ಪಟ್ಟಣದ ಕಾಶಿ ಸಂಗಮೇಶ್ವರ ಬಡಾವಣೆಯಲ್ಲಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಭಾನುವಾರ ನಡೆದ ‘ಪ್ರಾಜೆಕ್ಟ್ ಶಕ್ತಿ’ ಬಲವರ್ಧನಾ ಸಭೆಯಲ್ಲಿ ಮಾತನಾಡಿದರು.

ಜಾತಿ ಧರ್ಮವಿಲ್ಲದ ಪಕ್ಷ ಕಾಂಗ್ರೆಸ್. ಸರ್ವಶ್ರೇಷ್ಟ ಸಂವಿಧಾನವನ್ನು ನೀಡಿದ್ದು ಕಾಂಗ್ರೆಸ್, ಬಡವರ ಪರವಾಗಿರುವ ದೊಡ್ಡ ಪಕ್ಷ. ವಿರೋಧ ಪಕ್ಷ ಸಮಾಜ ಒಡೆಯುವ ಕೆಲಸಕ್ಕೆ ಮುಂದಾಗುತ್ತಿದೆ. ವಿರೋಧ ಪಕ್ಷದ ಕುತಂತ್ರಗಾರಿಕೆಯನ್ನು ಪ್ರತಿ ಯುವಕರಿಗೆ ಮನದಟ್ಟು ಮಾಡುವುದಕ್ಕಾಗಿ ಶಕ್ತಿ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದರು.

‘ದೇಶದ ಮುಂದಿನ ಪ್ರಧಾನಿ ರಾಹುಲ್‍ಗಾಂಧಿ, ಇದಕ್ಕೆ ಶಕ್ತಿ ಪ್ರಾಜೆಕ್ಟ್ ದಿಕ್ಸೂಚಿಯಾಗಲಿದೆ. ಯುವಕರ ಮನಸ್ಸುಗಳಿಗೆ ಸೇತುವೆಯಾಗಿ ಪರಿಣಮಿಸಲಿದೆ. 2019ರ ಚುನಾವಣೆ ದೇಶದ ಪ್ರಗತಿಗೆ ತಾವೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಸಹಕರಿಸುವ ಮೂಲಕ ಚುನಾವಣೆಗೆ ಸಿದ್ಧರಾಗೋಣ’ ಎಂದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ.ಮಂಜಪ್ಪ, ‘ತಳಮಟ್ಟದಿಂದ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಬೇಕು. ದೇಶದ ಪ್ರತಿಯೊಬ್ಬ ಪ್ರಜೆಯ ಸಮಸ್ಯೆಗಳ ಅಹವಾಲುಗಳನ್ನು ಆಲಿಸಿ ಪರಿಹಾರ ಸೂಚಿಸುವ ‘ಪ್ರಾಜೆಕ್ಟ್ ಶಕ್ತಿ’ಗೆ ಎಲ್ಲರೂ ಕೈಜೋಡಿಸಬೇಕು. ಪ್ರತಿ ತಾಲ್ಲೂಕಿನಲ್ಲಿ 20-25 ಸಾವಿರ ನೋಂದಣಿಗೆ ಪಕ್ಷದ ಎಲ್ಲಾ ಕಾರ್ಯಕರ್ತರು ಕಾರ್ಯೋನ್ಮುಖರಾಗಬೇಕು ಎಂದರು.

ಹಿರಿಯ ಕಾಂಗ್ರೆಸ್ ಮುಖಂಡ ಟಿ.ಎಚ್.ಎಂ. ವಿರೂಪಾಕ್ಷಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಚಿಗಟೇರಿ ಬಿ.ಕೆ. ಪ್ರಕಾಶ್, ಎಂ.ವಿ.ಅಂಜಿನಪ್ಪ, ವಕೀಲ ವೆಂಕಟೇಶ್, ಹಲಗೇರಿ ಮಂಜಪ್ಪ, ಡಿ.ಅಬ್ದುಲ್ ರೆಹಮಾನ್, ಜಾವೀದ್ ಮಾತನಾಡಿದರು.

ಸಭೆಯಲ್ಲಿ ಎಂ.ಪಿ. ಲತಾ ಮಲ್ಲಿಕಾರ್ಜುನ, ಎಂ.ಪಿ. ಸುಮಾ, ಎಂ.ಪಿ. ವೀಣಾ, ತಾಲ್ಲೂಕು ಪಂಚಾಯಿತಿ ಸದಸ್ಯ ಎಚ್. ಚಂದ್ರಪ್ಪ, ಓ. ರಾಮಪ್ಪ, ಮುಖಂಡರಾದ, ವಸಂತಪ್ಪ, ಕೆ.ಎಂ. ಬಸವರಾಜಯ್ಯ, ಸಾಬಳ್ಳಿ ಜಂಬಣ್ಣ, ನಾಗರಾಜ, ಮಮ್ತಾಜ್ ಬೇಗಂ, ನೀಲಗುಂದ ವಾಗೀಶ್, ನಜೀರ ಅಹ್ಮದ್, ಯಡಿಹಳ್ಳಿ ಶೇಖರಪ್ಪ, ಜಯಲಕ್ಷ್ಮಿ, ಮಂಜ್ಯಾನಾಯ್ಕ, ಎನ್‍ಎಸ್‍ಯುಐ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು