ಶಾಮನೂರು ಕುಟುಂಬದಿಂದ ಮುಂದುವರಿದ ಲಸಿಕೆ ಕಾರ್ಯಕ್ರಮ

ದಾವಣಗೆರೆ: ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ತಮ್ಮ ಕ್ಷೇತ್ರದ ಜನರಿಗಾಗಿ ಆರಂಭಿಸಿರುವ ಲಸಿಕೆ ಕಾರ್ಯಕ್ರಮ ಶನಿವಾರ ಮುಂದುವರಿಯಿತು.
ಶುಕ್ರವಾರ ಉದ್ಘಾಟನೆಯ ಬಳಿಕ 270 ಮಂದಿಗೆ ಲಸಿಕೆ ನೀಡಲಾಗಿತ್ತು. ಶನಿವಾರ ಬಾಬೂ ಜಗಜೀವನರಾಂ ಸಮುದಾಯ ಭವನ, ಜಾಲಿನಗರದ ದುರ್ಗಾಂಬಿಕಾ ಶಾಲೆ ಹಾಗೂ ದುರ್ಗಾಂಬಿಕಾ ದೇವಿ ಭೋಜನಾಲಯಗಳಲ್ಲಿ 300ಕ್ಕೂ ಅಧಿಕ ನಾಗರಿಕರು ಲಸಿಕೆ ಹಾಕಿಸಿಕೊಂಡರು. ಪಾಲಿಕೆಯ 5, 7, 8, 10, 18 ಮತ್ತು 45ನೇ ವಾರ್ಡ್‌ನ ಜನರು ಶನಿವಾರ ಇದರ ಉಪಯೋಗ ಪಡೆದುಕೊಂಡರು.
ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್. ಮಲ್ಲಿಕಾರ್ಜುನ ಅವರ ಸೂಚನೆ ಮೇರೆಗೆ ದಾವಣಗೆರೆಯ ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಸಿಬ್ಬಂದಿ ಲಸಿಕಾ ಶಿಬಿರ ನಡೆಸಿಕೊಟ್ಟರು.
ಮೂರು ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಪಡೆದ ನಾಗರಿಕರಿಗೆ ನೀರು ಮತ್ತು ಬಿಸ್ಕತ್ ವಿತರಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಪಾಲಿಕೆ ವಿರೋಧಪಕ್ಷದ ನಾಯಕ ಎ. ನಾಗರಾಜ್, ಸದಸ್ಯರಾದ ಸುಧಾ ಇಟ್ಟಿಗುಡಿ ಮಂಜುನಾಥ್, ಉದಯ್ ಕುಮಾರ್, ವಿನಾಯಕ ಪೈಲ್ವಾನ್, ಮುಖಂಡರಾದ ಮಾಲತೇಶ್ ರಾವ್ ಜಾಧವ್, ಬಸಪ್ಪ, ಉಮೇಶ್ ಸಾಳಂಕಿ, ಪಿ.ಎನ್. ಚಂದ್ರಶೇಖರ್, ಬಾಬುರಾವ್ ಸಾಳಂಕಿ, ಆನಂದ ಇಟ್ಟಿಗುಡಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.