ಸೋಮವಾರ, ಜನವರಿ 20, 2020
19 °C

25ರಂದು ಎಸ್ಸೆಸ್ಸೆಲ್ಸಿ ಟಾಪರ್ಸ್‌ಗಳೊಂದಿಗೆ ಸಂವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಕುರಿತು ಮಾರ್ಗದರ್ಶನ ನೀಡಲು ಕೆ.ವಿ.ಎಸ್‌. ಇಂಗ್ಲಿಷ್‌ ಮಾಧ್ಯಮ ಪ್ರೌಢಶಾಲೆಯಿಂದ ಡಿ. 25ರಂದು ಬೆಳಿಗ್ಗೆ 10.30ಕ್ಕೆ ‘ಎಸ್ಸೆಸ್ಸೆಲ್ಸಿ ಟಾಪರ್ಸ್‌ಗಳೊಂದಿಗೆ ಸಂವಾದ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಲೆ ಮುಖ್ಯಸ್ಥ ಕೆ.ವಿ. ಗೋಪಾಲಕೃಷ್ಣ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಭಯ ಹೋಗಲಾಡಿಸಲು, ಹೆಚ್ಚು ಅಂಕಗಳಿಸುವ ಕುರಿತು ಮಾರ್ಗದರ್ಶನ ಮಾಡಲು ಹಾಗೂ ಪೋಷಕರು ಪರೀಕ್ಷೆ ಸಮಯದಲ್ಲಿ ಮಕ್ಕಳಿಗೆ ಹೇಗೆ ಸಹಕಾರ ನೀಡಬೇಕು ಎಂಬುದನ್ನು ತಿಳಿಸಲು ಟಾಪರ್ಸ್‌ಗಳೊಂದಿಗೆ ಸಂವಾದ ಏರ್ಪಡಿಸಲಾಗಿದೆ. ಎಸ್‌.ಕೆ.ಪಿ. ವಿದ್ಯಾಪೀಠದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ’ ಎಂದು ಹೇಳಿದರು.

ಎಸ್ಸೆಸ್ಸೆಲ್ಸಿ ಟಾಪರ್ಸ್‌ಗಳಾದ ಕುಮಟಾದ ನಾಗಾಂಜಲಿ ನಾಯಕ್‌, ವಿಜಯಪುರದ ಸುಪ್ರಿಯಾ ಜೋಶಿ ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ. ಬಳಿಕ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಲಿದ್ದಾರೆ. ಪ್ರವೇಶ ಉಚಿತವಾಗಿದ್ದು, ಒಂದು ಶಾಲೆಯಿಂದ 4 ವಿದ್ಯಾರ್ಥಿಗಳು ಭಾಗವಹಿಸಬಹುದು. ನೋಂದಣಿಗೆ ಡಿ.23 ಕಡೆಯ ದಿನ. ನೋಂದಣಿ ಮಾಡಿಕೊಂಡವರಿಗೆ ಮಾತ್ರ ಕಾರ್ಯಕ್ರಮಕ್ಕೆ ಅವಕಾಶ ಇದೆ. ಮಾಹಿತಿಗೆ 7899997920, 8618555634ಗೆ ಸಂಪರ್ಕಿಸಬಹುದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್‌.ಕೆ.ಪಿ. ವಿದ್ಯಾಪೀಠದ ಖಜಾಂಚಿ ಸಿ.ಪಿ. ಸತೀಶ್‌ಕುಮಾರ್‌, ಶಾಲೆಯ ಮುಖ್ಯಶಿಕ್ಷಕಿ ಶಕುಂತಲಾ ಜೆ.ಕೆ. ವಿಶ್ವನಾಥ ಡಿ.ಎಂ., ಮಂಜುನಾಥ ಡಿ. ಇದ್ದರು.

 

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು