ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9 ವಿದ್ಯಾರ್ಥಿಗಳು, 3 ಉಪನ್ಯಾಸಕರಿಗೆ ಕೊರೊನಾ

Last Updated 21 ನವೆಂಬರ್ 2020, 15:15 IST
ಅಕ್ಷರ ಗಾತ್ರ

ದಾವಣಗೆರೆ: ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ತರಗತಿ ಆರಂಭಿಸಲಾಗಿದೆ. ತರಗತಿಗೆ ಬರುವ ಮುಂಚೆ ಎಲ್ಲರೂ ಕೊರೊನಾ ಪರೀಕ್ಷೆ ಮಾಡಿಸಬೇಕು ಎಂದು ಸರ್ಕಾರ ಸೂಚನೆ ನೀಡಿತ್ತು. ಇದೀಗ ಅದರ ಫಲಿತಾಂಶ ಬರಲು ಆರಂಭಗೊಂಡಿದ್ದು, 9 ವಿದ್ಯಾರ್ಥಿಗಳಿಗೆ, ಮೂವರು ಉಪನ್ಯಾಸಕರಿಗೆ ಕೊರೊನಾ ಇರುವುದು ದೃಢಪಟ್ಟಿದೆ.

2,967 ಮಂದಿ ಬೋಧಕರು ಪರೀಕ್ಷೆ ಮಾಡಿಸಿಕೊಂಡಿದ್ದಾರೆ. 1,890 ಮಂದಿಗೆ ನೆಗೆಟಿವ್‌ ಎಂದು ವರದಿ ಬಂದಿದೆ. 1,074 ಮಂದಿಯ ಫಲಿತಾಂಶ ಬರಲು ಬಾಕಿ ಇದೆ. 6,749 ವಿದ್ಯಾರ್ಥಿಗಳು ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ಅದರಲ್ಲಿ 4,380 ಮಂದಿಗೆ ನೆಗೆಟಿವ್‌ ಎಂದು ಫಲಿತಾಂಶ ಬಂದಿದೆ. ಇನ್ನೂ 2,360 ಮಂದಿಯ ಫಲಿತಾಂಶ ಬರಲು ಬಾಕಿ ಇದೆ.

1963 ಮಂದಿ ಬೋಧಕೇತರ ಸಿಬ್ಬಂದಿ ಪರೀಕ್ಷೆ ಮಾಡಿಸಿಕೊಂಡಿದ್ದರು. ಅದರಲ್ಲಿ 970 ಮಂದಿಯ ಫಲಿತಾಂಶ ಬಂದಿದ್ದು, ಯಾರಿಗೂ ಪಾಸಿಟಿವ್‌ ಕಂಡು ಬಂದಿಲ್ಲ. 993 ಮಂದಿಯ ಫಲಿತಾಂಶ ಇನ್ನಷ್ಟೇ ಬರಬೇಕಿದೆ.

ಈ ಪರೀಕ್ಷೆಗಳು ಕಳೆದ ಹತ್ತು ದಿನಗಳಿಂದ ನಡೆದಿದೆ. ವರದಿ ಬಾರದೇ ತರಗತಿಗೆ ಹೋಗುವಂತಿರಲಿಲ್ಲ. ಹಾಗಾಗಿ ಪಾಸಿಟಿವ್‌ ಬಂದವರು ಯಾರೂ ಕಾಲೇಜಿನಲ್ಲಿ ಇತರರ ಸಂ‍ಪರ್ಕಕ್ಕೆ ಬಂದಿಲ್ಲ. ಪಾಸಿಟಿವ್‌ ಬಂದವರು ಮನೆಯ ವಿಳಾಸ ನೀಡಿದ್ದರಿಂದ ಅವರು ವಿದ್ಯಾರ್ಥಿಗಳೋ, ಉಪನ್ಯಾಸಕರೋ, ಇತರರೋ ಎಂಬುದನ್ನು ಪತ್ತೆ ಹಚ್ಚಲು ಸಮಯ ಹಿಡಿಯಿತು. 9 ಮಂದಿ ವಿದ್ಯಾರ್ಥಿಗಳು ಮತ್ತು ಮೂವರು ಉಪನ್ಯಾಸಕರಿಗೆ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಹಾಗಾಗಿ ಎಲ್ಲರೂ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಆರೋಗ್ಯವಾಗಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

28 ಮಂದಿಗೆ ಕೊರೊನಾ

ಜಿಲ್ಲೆಯಲ್ಲಿ 28 ಮಂದಿಗೆ ಕೊರೊನಾ ಇರುವುದು ಶನಿವಾರ ದೃಢಪಟ್ಟಿದೆ. ಅಷ್ಟೇ ಸಂಖ್ಯೆಯಲ್ಲಿ ಅಂದರೆ 28 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.

ದಾವಣಗೆರೆ ತಾಲ್ಲೂಕಿನ 13, ಹರಿಹರ ತಾಲ್ಲೂಕಿನ 6, ಚನ್ನಗಿರಿ ತಾಲ್ಲೂಕಿನ 5, ಜಗಳೂರು ಮತ್ತು ಹೊನ್ನಾಳಿ ತಾಲ್ಲೂಕಿನ ತಲಾ ಇಬ್ಬರಿಗೆ ಸೋಂಕು ಇರುವುದು ಖಚಿತವಾಗಿದೆ.

ಜಿಲ್ಲೆಯಲ್ಲಿ ಈವರೆಗೆ 21,400 ಮಂದಿಗೆ ಸೋಂಕು ತಗುಲಿದೆ. 20,898 ಮಂದಿ ಗುಣಮುಖರಾಗಿದ್ದಾರೆ. 263 ಮಂದಿ ಮೃತಪಟ್ಟಿದ್ದಾರೆ. 239 ಸಕ್ರಿಯ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT