ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: 100 ವರ್ಷದ ವೃದ್ಧ ಸೇರಿ 79 ಮಂದಿಗೆ ಕೊರೊನಾ

ಗುಣಮುಖರಾಗಿ 59 ಮಂದಿ ಬಿಡುಗಡೆ
Last Updated 25 ಜುಲೈ 2020, 15:55 IST
ಅಕ್ಷರ ಗಾತ್ರ

ದಾವಣಗೆರೆ: ಶತ ವರ್ಷ ಪೂರೈಸಿರುವ ವೃದ್ಧ ಸೇರಿ 8 ಮಂದಿ ವೃದ್ಧರು, 6 ವೃದ್ಧೆಯರಿಗೆ ಕೊರೊನಾ ಕಾಣಿಸಿಕೊಂಡಿದೆ. ಎಲ್ಲ ಸೇರಿ ಒಟ್ಟು 79 ಮಂದಿಗೆ ಕೊರೊನಾ ಬಂದಿದೆ.

18 ವರ್ಷದ ಕೆಳಗಿನವರು ಒಬ್ಬರೂ ಇಲ್ಲ. 18ರಿಂದ 59 ವರ್ಷದ ವರೆಗಿನ 45 ಪುರುಷರು ಮತ್ತು 20 ಮಹಿಳೆಯಿರಿಗೆ ಸೋಂಕು ಇರುವುದು ಖಚಿತವಾಗಿದೆ.

ಹರಿಹರ ತಾಲ್ಲೂಕಿನ 22 ಮಂದಿಗೆ ಕೊರೊನಾ ಬಂದಿದೆ. ವಿದ್ಯಾನಗರದ ಮೂವರು, ಜೆ.ಸಿ. ಬಡಾವಣೆ, ವಿಜಯಬ್ಯಾಂಕ್‌ ಎದುರು, ಬಂಗ್ಲೆ ಬಡಾವಣೆ,ಮಲೆಬೆನ್ನೂರಿನ ತಲಾ ಇಬ್ಬರಿಗೆ ಸೋಂಕು ಬಂದಿದೆ. ಗುತ್ತೂರು, ಹಳ್ಳದಕೆರೆ, ಹರ್ಲಾಪುರ, ಹಳೇ ಹರ್ಲಾಪುರ, ನಡವಲ ಪೇಟೆ, ಮೋಚಿ ಕಾಲೊನಿ, ಪ್ರಶಾಂತ್‌ನಗರ, ಬಂಗ್ಲೆ ಬಡಾವಣೆ, ಟಿಪ್ಪುನಗರ, ಕೊಳಚೆ‍ಪ್ರದೇಶ, ಇಂದಿರಾನಗರ, ಹರಿಹರದ ತಲಾ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ.

ಹೊನ್ನಾಳಿ ತಾಲ್ಲೂಕಿನ ದುರ್ಗಿ ಗುಡಿಯ ಇಬ್ಬರು, ಹರ್ಲಳ್ಳಿಯ ಒಬ್ಬರು ಸೇರಿ ಮೂವರಿಗೆ ಹಾಗೂ ನ್ಯಾಮತಿ ಎಸ್‌ಬಿಐ ಬ್ಯಾಂಕ್‌ ಸಿಬ್ಬಂದಿ ಸೇರಿ ಒಟ್ಟು ನಾಲ್ವರಿಗೆ ಕೊರೊನಾ ಬಂದಿದೆ.

ಚನ್ನಗಿರಿ ತಾಲ್ಲೂಕಿನ ಚನ್ನಗಿರಿ ನಗರ, ಕಬ್ಬಾಳ, ತಾವರಕೆರೆಯ ತಲಾ ಒಬ್ಬರಿಗೆ ಬಂದಿದೆ. ಜಗಳೂರು ತಾಲ್ಲೂಕು ಕಚೇರಿ ಬಳಿಯ ವ್ಯಕ್ತಿಗೆ ಸೋಂಕು ಬಂದಿದೆ.

ದಾವಣಗೆರೆ ಪಾಲಿಕೆ ಮತ್ತು ಗ್ರಾಮಾಂತರ ಪ್ರದೇಶದ 46 ಮಂದಿಗೆ ಸೋಂಕು ದೃಢಪಟ್ಟಿದೆ. ನಿಟುವಳ್ಳಿ, ಟಿ.ಬಿ. ಬಡಾವಣೆ, ಕೆಟಿಜೆ ನಗರದ ತಲಾ ಮೂವರಿಗೆ, ಎಸ್.ಎಸ್. ಲೇಔಟ್‌, ವಿನೋಬನಗರ, ಜಾಲಿನಗರದ ತಲಾ ಇಬ್ಬರಿಗೆ ಕೊರೊನಾ ಕಾಣಿಸಿಕೊಂಡಿದೆ. ಆಜಾದ್‌ನಗರ, ರಂಗನಾಥ ಬಡಾವಣೆ, ಪಿ.ಬಿ ರಸ್ತೆ, ಆಂಜನೇಯ ಬಡಾವಣೆ, ದಾವಣಗೆರೆ, ಬಿ.ಎಲ್‌ ಗೌಡ ಬಡಾವಣೆ, ದುಗ್ಗಮ್ಮ ದೇವಸ್ಥಾನ, ಮಹಾಲಕ್ಷ್ಮೀ ಬಡಾವಣೆ, ವಿನಾಯಕ ಬಡಾವಣೆ, ನಾಗರಕಟ್ಟೆ ಕ್ರಾಸ್‌, ಹದಡಿ ರಸ್ತೆ, ದೇವರಾಜ ಅರಸು ಬಡಾವಣೆ, ವಿದ್ಯಾನಗರ, ಡಿಸಿಎಂ ಟೌನ್‌ಶಿಪ್‌, ಶಿವಕುಮಾರಸ್ವಾಮಿ ಲೇಔಟ್‌, ಸರಸ್ವತಿ ಬಡಾವಣೆ, ಸರಸ್ವತಿ ನಗರ, ಹೊಸಚಿಕ್ಕನಹಳ್ಳಿ, ಎಸ್‌ಎಸ್‌ಎಂ ನಗರ, ಎಸ್‌ಪಿಎಸ್‌ ನಗರ, ನೂರಾನಿ ಮಸೀದಿ ಬಳಿಯ ಒಬ್ಬರಿಗೆ ಕೊರೊನಾ ಬಂದಿದೆ.

ದೊಡ್ಡಬಾತಿಯ ಇಬ್ಬರು, ಕಲ್ಕೇರಿ ಕ್ಯಾದಲೆಯ ಒಬ್ಬರಿಗೆ ವೈರಸ್‌ ತಗುಲಿದೆ. ಇನ್‌ಸ್ಟಿಟ್ಯೂಶನಲ್‌ ಕ್ವಾರಂಟೈನ್‌ನಲ್ಲಿ ಇರುವ ಮೂವರಿಗೆ ಸೋಂಕು ಬಂದಿದೆ. ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಸಿಬ್ಬಂದಿ, ಬಾಪೂಜಿ ಆಸ್ಪತ್ರೆ ಸಿಬ್ಬಂದಿಗೆ ಕೊರೊನಾ ಬಂದಿದೆ.

ಜಿಲ್ಲೆಯಲ್ಲಿ ಈವರೆಗೆ 1334 ಮಂದಿಗೆ ಕೊರೊನಾ ಬಂದಿದೆ. ಶನಿವಾರ 59 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅವರು ಸೇರಿ ಒಟ್ಟು 810 ಮಂದಿ ಗುಣಮುಖರಾಗಿದ್ದಾರೆ. 491 ಸಕ್ರಿಯ ಪ್ರಕರಣಗಳಿವೆ. 34 ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT