ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರ್ಸ್‌ಗೆ ಕೊರೊನಾ ವಾರಿಯರ್‌ ಗೌರವ

Last Updated 10 ಜೂನ್ 2020, 15:03 IST
ಅಕ್ಷರ ಗಾತ್ರ

ದಾವಣಗೆರೆ: ಪೀಪಲ್ಸ್ ಲಾಯರ್ಸ್ ಗಿಲ್ಡ್ ಬುಧವಾರ ಬಾಷಾನಗರದ ನರ್ಸ್‌ಗೆ ಕೊರೋನಾ ವಾರಿಯರ್ ಎಂದು ಗೌರವಿಸಿ, ಸನ್ಮಾನಿಸಿದೆ.

ಗಿಲ್ಡ್ ಅಧ್ಯಕ್ಷ ಅನೀಸ್ ಪಾಷ ಮಾತನಾಡಿ, ‘ಕೊರೊನಾ ವಿರುದ್ಧ ವೈದ್ಯರು, ಸ್ಟಾಫ್ ನರ್ಸ್‌ಗಳು, ಪೊಲೀಸರು ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಅವರೇ ನಿಜವಾದ ಯೋಧರು. ಅವರು ಕೆಲಸ ಮಾಡುವಾಗ ಸೋಂಕು ಬಂದರೆ ಅಪಪ್ರಚಾರ ಮಾಡುವುದನ್ನು ಬಿಡಬೇಕು. ಅಂಥವರನ್ನು ಗೌರವಿಸುವುದು ಸಮಾಜದ ಕರ್ತವ್ಯ’ ಎಂದುಹೇಳಿದರು.

ಗೌರವ ಅಧ್ಯಕ್ಷ ರಾಮಚಂದ್ರ ಕಲಾಲ್ ಮಾತನಾಡಿ, ‘ಕೆಲವು ಮಾಧ್ಯಮಗಳು ನರ್ಸ್ ನಂಜು, ಕೊರೋನಾ ಸ್ಪ್ರೆಡ್ಡರ್ ಎಂದೆಲ್ಲ ಹೇಳಿ ಆತಂಕ ಸೃಷ್ಟಿಸಿದ್ದವು. ಅವರ ಸೇವೆಯನ್ನು ಗುರುತಿಸದೇ ಅಪಪ್ರಚಾರ ನಡೆಯಿತು. ಜಗತ್ತಿನಲ್ಲಿ ಕೋವಿಡ್‌ ಬಂದು ಮೃತಪಟ್ಟವರಲ್ಲಿ 10 ವೈದ್ಯರು ಇದ್ದಾರೆ. ಹಲವು ವೈದ್ಯರು, ನರ್ಸ್‌ಗಳು ಸೋಂಕಿಗೆ ಒಳಗಾಗಿದ್ದರು’ ಎಂದು ಹೇಳಿದರು.

ಬಾಷಾ ನಗರದ ನರ್ಸ್ ಮಾತನಾಡಿ, ‘ಕರ್ತವ್ಯ ನಿರ್ವಹಿಸಲು ನನಗೆ ಹಿಂಜರಿಕೆ ಇಲ್ಲ. ಆದರೆ ನಮ್ಮ ಬಗ್ಗೆ ಕೆಟ್ಟದಾಗಿ ಮಾತಾಡಿದಾಗ ಆತ್ಮಬಲ ಕುಗ್ಗಿ ಹೋಗುತ್ತದೆ. ನಮ್ಮ ಆಸ್ಪತ್ರೆಯಲ್ಲಿ 28 ಜನ ಸಿಬ್ಬಂದಿ ಇದ್ದು, ಯಾರಿಗೂ ಸೋಂಕು ಬಂದಿಲ್ಲ. ನನಗೆ ಅನುಮಾನ ಬಂದ ಕೂಡಲೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದೆ. ಕೋವಿಡ್-19 ಬಗ್ಗೆ ಹೆಚ್ಚು ಭಯಪಡುವ ಅಗತ್ಯವಿಲ್ಲ. ಅಂತರ, ಮಾಸ್ಕ್‌, ಸ್ವಚ್ಛತೆ ಮುಂತಾದ ಮುಂಜಾಗ್ರತಾ ಕ್ರಮವನ್ನು ವಹಿಸಿದರೆ ಸಾಕು’ ಎಂದು ತಿಳಿಸಿದರು.

ಲಾಯರ್ಸ್ ಗಿಲ್ಡ್ ನ ಕಾರ್ಯದರ್ಶಿ ದುರಗೇಶ್, ಜಂಟಿ ಕಾರ್ಯದರ್ಶಿ ಅಬ್ದುಲ್ ಸಮದ್, ವಕೀಲರಾದ ಎಮ್.ಎಚ್. ಶೃತಿ, ಬಿ. ತಿರುಕಪ್ಪ, ಖಲೀಲ್ ಅಹಮ್ಮದ್, ನೌಷಾದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT