ಹರಿಹರ: ಕಳ್ಳತನ ಪ್ರಕರಣದ ಆರೋಪಿಯನ್ನು ಬಂಧಿಸಿರುವ ನಗರ ಠಾಣೆ ಪೊಲೀಸರು, ₹4.80 ಲಕ್ಷ ಮೌಲ್ಯದ 80 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ತುಮಕೂರು ಜಿಲ್ಲೆ ತುರುವೆಕೆರೆಯ ವಿನೋಬನಗರದ ವೆಂಕಟೇಶ್ ಅಲಿಯಾಸ್ ತಿಪ್ಪೆ ಬಂಧಿತ ಆರೋಪಿ. ಮೇ 15 ರಂದು ನಗರದ ಜೆ.ಸಿ.ಬಡಾವಣೆಯ ಮನೆಯೊಂದರಲ್ಲಿ ಕಳ್ಳತನ ನಡೆದಿತ್ತು.
ಗ್ರಾಮಾಂತರ ಡಿವೈಎಸ್‌ಪಿ ಬಸವರಾಜ ಬಿ.ಎಸ್. ಮಾರ್ಗದರ್ಶನದಲ್ಲಿ ಸಿಪಿಐ ಬಿ.ದೇವಾನಂದ ನೇತೃತ್ವದಲ್ಲಿ ಪಿಎಸ್‌ಐ ಪ್ರವೀಣ ಕುಮಾರ, ಸಿಬ್ಬಂದಿಯಾದ ಶ್ರೀಪತಿ ಗಿನ್ನಿ, ಮಂಜುನಾಥ ಕಲ್ಲೇದೆವರು, ಮಂಜುನಾಥ ಬಿ.ವಿ., ದೇವರಾಜ್ ಸೂರ್ವೆ, ಮಂಜುನಾಥ ಕ್ಯಾತಮ್ಮನವರ, ಹನುಮಂತ ಗೋಪನಾಳ, ಹೇಮಾನಾಯ್ಕ್, ರುದ್ರಸ್ವಾಮಿ, ಸಿದ್ದರಾಜು, ರಾಘವೇಂದ್ರ, ಶಾಂತರಾಜ್, ನಾಗರಾಜ ಕುಂಬಾರ, ಅಖ್ತರ್, ವಿರೇಶ್, ಅಡಿವೆಪ್ಪನವರ್, ಮಾರುತಿ ಅವರ ತಂಡಕಾರ್ಯಾಚರಣೆ ನಡೆಸಿತ್ತು.
ಸೂಚನೆ: ನಾಗರಿಕರು ಮನೆಗಳಿಗೆ ಬೀಗ ಹಾಕಿಕೊಂಡು ಪರಸ್ಥಳಗಳಿಗೆ ಹೋಗುವಾಗ ಬೆಲೆಬಾಳುವ ವಸ್ತುಗಳನ್ನು ಮನೆಯಲ್ಲೇ ಬಿಟ್ಟು ಹೋಗಬಾರದು. ಪರಸ್ಥಳಗಳಿಗೆ ಹೋಗುವಾಗ ಮಾಹಿತಿ ನೀಡಿದರೆ ಆ ಪ್ರದೇಶದಲ್ಲಿ ಗಸ್ತು ಹೆಚ್ಚಿಸಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.