ದಾವಣಗೆರೆ: ಕೋವಿಡ್–19 ಹಿನ್ನೆಲೆಯಲ್ಲಿ ಪಾರ್ಸೆಲ್ಗಷ್ಟೇ ಸೀಮಿತಗೊಂಡಿದ್ದ ಹೋಟೆಲ್ಗಳು ಸೋಮವಾರದಿಂದ ಹೊಸ ಮಾರ್ಗಸೂಚಿಯೊಂದಿಗೆ ಆತಿಥ್ಯ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿವೆ.

ಹೋಟೆಲ್ಗಳನ್ನು ಸ್ಯಾನಿಟೈಸರ್ ಹಾಕಿ ಶುಚಿಗೊಳಿಸುತ್ತಿದ್ದು, ಒಂದು ಟೇಬಲ್ನಿಂದ ಮತ್ತೊಂದು ಟೇಬಲ್ ನಡುವೆ ಅಂತರ ಕಾಯ್ದುಕೊಳ್ಳಲಾಗುತ್ತಿದೆ. ಹೊಸ ಮಾರ್ಗಸೂಚಿ ಅನ್ವಯ ಹೋಟೆಲ್ ಸಿಬ್ಬಂದಿ ತಲೆಗೆ ಟೋಪಿ, ಮಾಸ್ಕ್ ಹಾಗೂ ಗ್ಲೌಸ್ ಧರಿಸಬೇಕು. ಅಲ್ಲದೇ ಅಂತರ ಕಾಯ್ದುಕೊಳ್ಳಬೇಕು.

‘ದಾವಣಗೆರೆಯಲ್ಲಿ 167 ನೋಂದಣಿಯಾಗಿರುವ ಹೋಟೆಲ್ಗಳು ಇದ್ದು, ಅವುಗಳಲ್ಲಿ ಬೇಕರಿ, ಜ್ಯೂಸ್ ಹಾಗೂ ನಾನ್ವೆಜ್ ಹೋಟೆಲ್ಗಳು ಸೇರಿವೆ. ಸಣ್ಣಪುಟ್ಟ ಹೋಟೆಲ್ಗಳು ಸೇರಿ 440 ಹೋಟೆಲ್ಗಳು ಇವೆ. ಎಲ್ಲರಿಗೂ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಮಾರ್ಗಸೂಚಿಯನ್ನು ತಿಳಿಸಿದ್ದೇವೆ’ ಎನ್ನುತ್ತಾರೆ’ ದಾವಣಗೆರೆ ಹೋಟೆಲ್ ಉದ್ದಿಮೆದಾರರ ಸಂಘದ ಕಾರ್ಯದರ್ಶಿ ಸುಬ್ರಹ್ಮಣ್ಯ ಬಿ.ಕೆ.

‘ಹೊಸ ಮಾರ್ಗಸೂಚಿಯಲ್ಲಿ ತೊಂದರೆಯಾಗುವ ಅಂಶ ಇಲ್ಲ. ದರ್ಶಿನಿ ಮತ್ತು ಸ್ವಸಹಾಯ ಪದ್ಧತಿ ಹೋಟೆಲ್ಗಳಿಗೆ ಈ ಮಾರ್ಗಸೂಚಿ ಅನ್ವಯವಾಗುವುದಿಲ್ಲ. ರೆಸ್ಟೊರಂಟ್ಗಳಲ್ಲಿ ಒಬ್ಬರಿಗೆ ನೀಡಿದ ‘ಮೆನು’ ಕಾರ್ಡ್ ಬಳಸಬೇಕು, ಮತ್ತೊಬ್ಬರಿಗೆ ನೀಡಬಾರದು ಎಂದಿದೆ. ಸದ್ಯದ ಪರಿಸ್ಥಿತಿಯಲ್ಲಿ ಹೊಸದಾಗಿ ಮೆನು ತಯಾರು ಮಾಡುವ ಅವಶ್ಯಕತೆ ಇಲ್ಲ’ ಎನ್ನುತ್ತಾರೆ ಸುಬ್ರಹ್ಮಣ್ಯ.

‘ಒಂದು ಟೇಬಲ್ನಲ್ಲಿ ಆ ಕುಟುಂಬ ಕುಳಿತು ಊಟ ಮಾಡಬಹುದು. ಊಟ ಮಾಡಿ ಹೋದ ನಂತರ ಸ್ಯಾನಿಟೈಸರ್ನಿಂದ ಸ್ವಚ್ಛ ಮಾಡಬೇಕು. ಒಂದು ಟೇಬಲ್ನಿಂದ ಮತ್ತೊಂದರ ನಡುವಿನ ಅಂತರ 6 ಅಡಿ ಇದ್ದರೆ ಅನುಕೂಲ ಎಂದು ಹೇಳಿದೆ. ರೆಸ್ಟೊರಂಟ್ ಬಾಗಿಲು ಹಾಗೂ ಹ್ಯಾಂಡ್ ವಾಶ್ ಬಳಿ ಸ್ಯಾನಿಟೈಸರ್ ಕಡ್ಡಾಯವಾಗಿ ಇಡಬೇಕು. ವಾಷ್ರೂಂಗಳನ್ನು ಪದೇ ಪದೇ ಸ್ವಚ್ಛಗೊಳಿಸಬೇಕು’ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ’ ಎನ್ನುತ್ತಾರೆ.

‘ಪ್ಲೇಟ್ಗಳನ್ನು ಬಿಸಿನೀರಿನಲ್ಲಿ ತೊಳೆಯಬೇಕು ಎಂದಿದೆ. ಮೊದಲಿನಿಂದಲೂ ನಾವು ಈ ಕೆಲಸ ಮಾಡುತ್ತಿದ್ದೇವೆ. ಹೊಸ ಮಾರ್ಗಸೂಚಿ ಅನ್ವಯ ಆದಷ್ಟು ಪಾರ್ಸೆಲ್ಗೆ ಆದ್ಯತೆ ನೀಡಬೇಕು. ಅಲ್ಲದೇ ಕಡಿಮೆ ಸಿಬ್ಬಂದಿಯನ್ನು ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ಹೇಳಿದೆ. ಇದು ಸ್ವಲ್ಪ ಕಷ್ಟದ ಕೆಲಸ’ ಎನ್ನುತ್ತಾರೆ.

‘ಹೋಟೆಲ್ಗಳಲ್ಲಿ ವೃದ್ಧರು ಹಾಗೂ ಮಕ್ಕಳಿಗೆ ಪ್ರವೇಶವಿಲ್ಲ ಎಂದು ಹೇಳಿದೆ. ಊಟಕ್ಕೆ ತಂದೆ, ತಾಯಿ, ಮಕ್ಕಳನ್ನು ಕರೆದುಕೊಂಡು ಬರುತ್ತಾರೆಯೇ ಹೊರತು ಗಂಡ–ಹೆಂಡತಿ ಅಷ್ಟೇ ಬರುವುದಿಲ್ಲ. ಕಾಲೇಜುಗಳು ಆರಂಭವಾಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಬರುವುದು ಕಷ್ಟ. ಆದ್ದರಿಂದ ಹೆಚ್ಚಿನ ಗ್ರಾಹಕರನ್ನು ನಿರೀಕ್ಷಿಸಲು ಆಗುವುದಿಲ್ಲ’ ಎನ್ನುವುದು ಸರೋವರ್ ಹೋಟೆಲ್ ಮಾಲೀಕ ಶೈಲೇಶ್ ಶೆಟ್ಟಿ ಅವರ ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.