ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ಲೋಕಸಭಾ ಕ್ಷೇತ್ರ | ಕಣದಲ್ಲಿ ಉಳಿದ 30 ಮಂದಿ

Published 22 ಏಪ್ರಿಲ್ 2024, 15:50 IST
Last Updated 22 ಏಪ್ರಿಲ್ 2024, 15:50 IST
ಅಕ್ಷರ ಗಾತ್ರ

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾದ ಸೋಮವಾರ (ಏ.22) ಮೂವರು ಉಮೇದುವಾರಿಕೆ ವಾಪಸ್ ಪಡೆದಿದ್ದು, 30 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ತಿಳಿಸಿದ್ದಾರೆ.

ನಾಮಪತ್ರ ಸಲ್ಲಿಸಲು ಏ.19 ಕೊನೆಯ ದಿನವಾಗಿತ್ತು, ಒಟ್ಟು 40 ಅಭ್ಯರ್ಥಿಗಳಿಂದ 54 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಏ.20ರಂದು ನಡೆದ ನಾಮಪತ್ರ ಪರಿಶೀಲನೆಯಲ್ಲಿ 7 ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತವಾಗಿ 33 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ದವಾಗಿದ್ದವು. ಸೋಮವಾರ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನವಾಗಿತ್ತು. ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಇರ್ಫಾನ್ ಮುಲ್ಲಾ, ಅಲ್ಲಾಭಕ್ಷ್ ಬಿ ಹಾಗೂ ಕೆ.ಜಿ. ಅಜ್ಜಪ್ಪ ತಮ್ಮ ಉಮೇದುವಾರಿಕೆ ವಾಪಸ್ ಪಡೆಯುವ ಮೂಲಕ 30 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ವಿವರ:

ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷ ತಿಪ್ಪೇಸ್ವಾಮಿ ಎ.ಕೆ,

ಭಾರತೀಯ ಕಾಂಗ್ರೆಸ್ ಪಕ್ಷದ ಡಾ; ಪ್ರಭಾ ಮಲ್ಲಿಕಾರ್ಜುನ್,

ಉತ್ತಮ ಪ್ರಜಾಕೀಯ ಪಕ್ಷದ ಈಶ್ವರ,

ಭಾರತೀಯ ಜನತಾ ಪಾರ್ಟಿ ಜಿ.ಎಸ್.ಗಾಯಿತ್ರಿ,

ಬಿ.ಎಸ್.ಪಿ ಹನುಮಂತಪ್ಪ,

ಸಮಾಜ ವಿಕಾಸ ಕ್ರಾಂತಿ ರುದ್ರೇಶ್ ಕೆ.ಹೆಚ್,

ರಾಣಿ ಚೆನ್ನಮ್ಮ ಪಾರ್ಟಿ ವೀರೇಶ್.ಎಸ್,

ಕಂಟ್ರಿ ಸಿಟಿಜನ್ ಪಾರ್ಟಿ ಎ.ಟಿ.ದಾದಾಖಲಂದರ್,

ನವಭಾರತ ಸೇನಾ ಎಂ.ಜಿ.ಶ್ರೀಕಾಂತ್,

ಜನಹಿತ ಪಕ್ಷ ದೊಡ್ಡೇಶ್ ಹೆಚ್.ಎಸ್,

ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ ಶ್ರೀನಿವಾಸ ಎಂ.ಸಿ,

ಕೆ.ಆರ್.ಎಸ್.ನಿಂದ ಕೆ.ಎಸ್.ವೀರಭದ್ರಪ್ಪ.

ಪಕ್ಷೇತರರಾಗಿ ವಿನಯ್ ಕುಮಾರ್ ಜಿ.ಬಿ, ಟಿ.ಜಬೀನ್ ತಾಜ್, ಎ.ಕೆ.ಗಣೇಶ್, ಬರ್ಕತ್ ಅಲಿ, ಮೊಹಮದ್ ಹಯಾತ್ ಎಂ, ಎಂ.ಟಿ.ಚಂದ್ರಣ್ಣ, ಸೈಯದ್ ಜಬೀವುಲ್ಲಾ.ಕೆ, ರವಿನಾಯ್ಕ್ ಬಿ, ತಸ್ಲಿಮ್ ಬಾನು, ಪರ್ವೇಜ್ ಹೆಚ್, ರಶೀದ್ ಖಾನ್, ಸಲೀಮ್ ಎಸ್, ಮಂಜುನಾಥ ಎ.ಕೆ,  ಅಬ್ದುಲ್ ನಜೀರ್ ಅಹ್ಮದ್, ಪೆದ್ದಪ್ಪ ಎಸ್, ಮೆಹಬೂಬ್ ಬಾμÁ, ಜಿ.ಎಂ.ಬರ್ಕತ್ ಅಲಿ ಬಾμÁ,  ಜಿ.ಎಂ.ಗಾಯಿತ್ರಿ, ಇವರು  ಅಂತಿಮ ಕಣದಲ್ಲಿರುವವರು.

ಗಾಯತ್ರಿ ಸಿದ್ದೇಶ್ವರ
ಗಾಯತ್ರಿ ಸಿದ್ದೇಶ್ವರ
ಜಿ.ಬಿ.ವಿನಯ್‌ಕುಮಾರ್
ಜಿ.ಬಿ.ವಿನಯ್‌ಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT