ಭಾನುವಾರ, ಸೆಪ್ಟೆಂಬರ್ 26, 2021
21 °C

ದಾವಣಗೆರೆ | ಸೂರ್ಯಗ್ರಹಣ ವೀಕ್ಷಣೆಗೆ ಮೋಡ, ಮಳೆ, ಕೊರೊನಾ ಅಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಕಂಕಣ ಸೂರ್ಯಗ್ರಹಣ ವೀಕ್ಷಿಸಲು ವಿವಿಧ ವಿಜ್ಞಾನ ಸಮಿತಿಗಳು ಹೈಸ್ಕೂಲ್ ಮೈದಾನದಲ್ಲಿ ವ್ಯವಸ್ಥೆ ಮಾಡಲು ಮುಂದಾಗಿದ್ದರೂ ಕೊರೊನಾ ವೈರಸ್ ಸೋಂಕು ಕಾರಣಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಆದರೂ ಕೃತಕ ಕನ್ನಡಕ ಮೂಲಕ ಗ್ರಹಣ ವೀಕ್ಷಣೆಗೆ ಹಲವು ಬಂದಿದ್ದರು. ಅವರಿಗೆ ಮೊದಲು ಮೋಡ, ಬಳಿಕ ಮಳೆ ಅವಕಾಶ ನೀಡಲಿಲ್ಲ.

ರಂಗಕರ್ಮಿ ಎಸ್.ಎಸ್.ಸಿದ್ದರಾಜು ತಂದಿದ್ದ ಉಪ್ಪಿಟ್ಟು ತಿಂದುಕೊಂಡು ಎಲ್ಲರೂ ಹೋದರು.

ಈ ಸಂದರ್ಭದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ  ಅಧ್ಯಕ್ಷ ಉಮೇಶ ಬಾಂಭೋರೆ, ಕರ್ನಾಟಕ ವಿಜ್ಞಾನ ಪರಿಷತ್ ಸದಸ್ಯ ಎಂ. ಗುರುಸಿದ್ಧಸ್ವಾಮಿ, ಡಾ.ಬಿ.ಇ. ರಂಗಸ್ವಾಮಿ, ಎಂ.ಟಿ. ಶರಣಪ್ಪ, ಕೆ.ಸಿ. ಬಸವರಾಜು, ಕೆ. ಸಿದ್ದೇಶ್, ಅಂಗಡಿ ಸಂಗಪ್ಪ, ಕಲಿವೀರ ಕಳ್ಳೀಮನಿ, ಆವರಗೆರೆ ರುದ್ರಮುನಿ ಅವರೂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು