ಸೋಮವಾರ, 29 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ದಾವಣಗೆರೆ| ಹವಾಮಾನದಲ್ಲಿ ಏರಿಳಿತ: ವೈರಾಣು ಜ್ವರಕ್ಕೆ ಹೈರಾಣಾದ ಜನ

Published : 29 ಸೆಪ್ಟೆಂಬರ್ 2025, 5:58 IST
Last Updated : 29 ಸೆಪ್ಟೆಂಬರ್ 2025, 5:58 IST
ಫಾಲೋ ಮಾಡಿ
Comments
ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಒಪಿಡಿ ವಿಭಾಗದಲ್ಲಿ ಹೊರ ರೋಗಿ ಚೀಟಿ ಪಡೆಯಲು ನಿಂತಿದ್ದ ರೋಗಿಗಳು
ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಒಪಿಡಿ ವಿಭಾಗದಲ್ಲಿ ಹೊರ ರೋಗಿ ಚೀಟಿ ಪಡೆಯಲು ನಿಂತಿದ್ದ ರೋಗಿಗಳು
ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಜನರಲ್‌ ಮೆಡಿಸಿನ್‌ ವಿಭಾಗದ ಕೊಠಡಿಯ ಮುಂದೆ ಸಾಲುಗಟ್ಟಿ ನಿಂತಿದ್ದ ರೋಗಿಗಳು 
ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಜನರಲ್‌ ಮೆಡಿಸಿನ್‌ ವಿಭಾಗದ ಕೊಠಡಿಯ ಮುಂದೆ ಸಾಲುಗಟ್ಟಿ ನಿಂತಿದ್ದ ರೋಗಿಗಳು 
ವೈರಾಣು ಜ್ವರದ ಲಕ್ಷಣ ಆಧರಿಸಿ ಚಿಕಿತ್ಸೆ
ಜಿಲ್ಲಾ ಆಸ್ಪತ್ರೆ ಸೇರಿದಂತೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಮಕ್ಕಳ ತಜ್ಞರು ಸೇರಿದಂತೆ ತಜ್ಞ ವೈದ್ಯರಿದ್ದಾರೆ. ವೈರಾಣು ಜ್ವರದ ಲಕ್ಷಣ ಆಧರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳ ಬಗ್ಗೆ ಪೋಷಕರು ಹೆಚ್ಚು ಕಾಳಜಿ ವಹಿಸಲಿ ಡಾ.ಎಸ್‌.ಷಣ್ಮುಖಪ್ಪ ಡಿಎಚ್‌ಒ
ಕೆಮ್ಮು ನೆಗಡಿ ಶೀತ ಜ್ವರ ಕಾಣಿಸಿಕೊಂಡರೆ ನಿರ್ಲಕ್ಷ್ಯ ವಹಿಸದೇ ಆಸ್ಪತ್ರೆಗೆ ಧಾವಿಸಿ ಚಿಕಿತ್ಸೆ ಪಡೆಯಬೇಕು. ಇದರಿಂದ ಬೇಗ ಗುಣಮುಖರಾಗಲು ಸಾಧ್ಯವಾಗುತ್ತದೆ.
ಡಾ.ಎಂ.ಬಿ.ನಾಗೇಂದ್ರಪ್ಪ ಜಿಲ್ಲಾ ಶಸ್ತ್ರ ಚಿಕಿತ್ಸಕ
ವಾತಾವರಣದಲ್ಲಿನ ಏರುಪೇರಿನಿಂದ ಫ್ಲೂ ತರಹದ ಪ್ರಕರಣಗಳು ಕಳೆದ ಮೂರು ವಾರಗಳಲ್ಲಿ ಸ್ವಲ್ಪ ಏರಿಕೆ ಕಂಡುಬಂದಿವೆ. ಬಿಸಿಲಿನ ವಾತಾವರಣ ಹೆಚ್ಚಾದರೆ ವೈರಾಣು ಸೋಂಕು ಕಡಿಮೆಯಾಗುವ ಸಾಧ್ಯತೆ ಇದೆ
ಡಾ.ಜಿ.ಡಿ.ರಾಘವನ್ ಜಿಲ್ಲಾ ಸರ್ವೇಕ್ಷಣಾಧಿಕಾರಿ
ವೈದ್ಯರ ಸಲಹೆಗಳು
ಸಾಧ್ಯವಾದಷ್ಟು ಕಾಯಿಸಿ ಆರಿಸಿದ ನೀರನ್ನು ಕುಡಿಯಿರಿ * ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಿ  * ಕಾಯಿಲೆ ಇರುವವರು ಕೆಮ್ಮುವಾಗ ಕರವಸ್ತ್ರ ಬಳಸಿ ಎಲ್ಲೆಂದರಲ್ಲಿ ಉಗುಳಬೇಡಿ * ಅಸ್ತಮಾ ರೋಗಿಗಳು ಗರ್ಭಿಣಿಯರು ವೃದ್ಧರು ರಕ್ತದೊತ್ತಡ (ಬಿ.ಪಿ.) ರೋಗಿಗಳು ಹೆಚ್ಚಿನ ಜಾಗ್ರತೆ ವಹಿಸಿ * ಐಸ್‌ಕ್ರೀಮ್‌ ಹಾಗೂ ಇನ್ನಿತರ ತಂಪು ಪಾನೀಯಗಳನ್ನು ಸೇವಿಸಬೇಡಿ * ಬಿಸಿ ಆಹಾರ ಪದಾರ್ಥ ಸೇವಿಸಿ ಬೆಚ್ಚಗಿನ ಉಡುಪು ಧರಿಸಿ
ಮಕ್ಕಳಿಗೇ ಹೆಚ್ಚು ಅನಾರೋಗ್ಯ ಎಚ್.ವಿ. ನಟರಾಜ್  ಚನ್ನಗಿರಿ
ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಎರಡ್ಮೂರು ವಾರಗಳಿಂದ ಹವಾಮಾನ ವೈಪರೀತ್ಯದ ಪರಿಣಾಮವಾಗಿ ಮಕ್ಕಳಿಂದ ವೃದ್ಧರವರೆಗೆ ಎಲ್ಲಾ ವಯೋಮಾನದವರೂ ಶೀತ ನೆಗಡಿ ಕೆಮ್ಮು ಹಾಗೂ ಜ್ವರದಿಂದ ಬಳಲಿ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಎಡತಾಕುವಂತಾಗಿದೆ.  ಸ್ವಲ್ಪ ಹೊತ್ತು ಬಿರು ಬಿಸಿಲು ಇನ್ನು ಸ್ವಲ್ಪ ಹೊತ್ತು ಚಳಿಯ ವಾತಾವರಣ ಆಗಾಗ ಬಿಟ್ಟು ಬಿಟ್ಟು ಸುರಿಯುವ ಜಿಟಿಜಿಟಿ ಮಳೆಯು ಜನರಲ್ಲಿ ಅನಾರೋಗ್ಯ ಸೃಷ್ಟಿಸಿದೆ. ಹೆಚ್ಚಿನದಾಗಿ ಮಕ್ಕಳು ಶೀತ ನೆಗಡಿ ಕೆಮ್ಮು ಹಾಗೂ ಜ್ವರ ಬಾಧೆಗೆ ತುತ್ತಾಗುತ್ತಿದ್ದಾರೆ.  ‘ಇಲ್ಲಿನ ಸರ್ಕಾರಿ ಆಸ್ಪತ್ರೆಗಳಿಗೆ ಪ್ರತಿ ದಿನ 30ಕ್ಕೂ ಹೆಚ್ಚು ಮಕ್ಕಳು ಬರುತ್ತಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಚಳಿಯ ವಾತಾವರಣದ ಕಾರಣಕ್ಕೆ ಮಕ್ಕಳಿಗೆ ದೇಹವನ್ನು ಬಿಸಿಯಾಗಿ ಇಡಲು ಉಣ್ಣೆ ಬಟ್ಟೆಗಳನ್ನು ತೊಡಿಸಬೇಕು’ ಎಂದು ತಾಲ್ಲೂಕು ವೈದ್ಯಾಧಿಕಾರಿ ಈ. ಶಿವಕುಮಾರ್ ಸಲಹೆ ನೀಡಿದರು.  ‘ತಾಲ್ಲೂಕಿನ ಎಲ್ಲ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ವೈರಲ್‌ ಫೀವರ್‌ಗೆ ಸಂಬಂಧಿಸಿ ಸಾಕಷ್ಟು ಔಷಧಿಗಳ ದಾಸ್ತಾನು ಇದೆ’ ಎಂದು ಮಾಹಿತಿ ನೀಡಿದರು.  ‘ಮಗನಿಗೆ ಮೂರು ದಿನಗಳಿಂದ ಶೀತ ಕೆಮ್ಮು ಹಾಗೂ ಜ್ವರ ಇದೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇವೆ’ ಎಂದು ಪಟ್ಟಣದ ವಾಸಿ ರುಕ್ಸನಾ ಬೇಗಂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT