ದಾವಣಗೆರೆಯ ದುರ್ಗಾಂಬಿಕಾ ದೇವಸ್ಥಾನದಲ್ಲಿ ಜಾತ್ರೆ ಅಂಗವಾಗಿ ದೇವಿಯ ದರ್ಶನ ಪಡೆದ ಭಕ್ತರು
–ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ
ದಾವಣಗೆರೆಯ ದುರ್ಗಾಂಬಿಕಾ ದೇವಸ್ಥಾನದ ಮುಂಭಾಗದಲ್ಲಿ ಜಾತ್ರೆ ಅಂಗವಾಗಿ ಸಾರು ಹಾಕುವ ಕಾರ್ಯ ಭಾನುವಾರ ರಾತ್ರಿ ನಡೆಯಿತು
–ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ
ಕೋಣನ ಮೆರವಣಿಗೆ
ಜಾತ್ರಾ ಮಹೋತ್ಸವದ ಅಂಗವಾಗಿ ಸಾರು ಹಾಕುವ ಹಾಗೂ ಪಟ್ಟದ ಕೋಣನ ಮೆರವಣಿಗೆ ಭಾನುವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು. ಗಾಂಧಿನಗರದಿಂದ ಮೆರವಣಿಗೆಯಲ್ಲಿ ಕೋಣವನ್ನು ಕರೆತರಲಾಯಿತು. ಶಾನುಭೋಗರು ಗೌಡರು ಸೇರಿದಂತೆ ದೇಗುಲ ಸಮಿತಿ ಸದಸ್ಯರ ಮನೆಗೆ ಕೋಣನನ್ನು ಕೊಂಡೊಯ್ಯಲಾಯಿತು. ಕಂಕಣಧಾರಣೆಯ ಬಳಿಕ ಆರಂಭವಾದ ಮೆರವಣಿಗೆ ತಡರಾತ್ರಿಯವರೆಗೂ ನಡೆಯಿತು.
ದಾವಣಗೆರೆಯ ದುರ್ಗಾಂಬಿಕಾ ದೇವಸ್ಥಾನದ ಮುಂಭಾಗದಲ್ಲಿ ಜಾತ್ರೆ ಅಂಗವಾಗಿ ಕೋಣವನ್ನು ವಾಹನದಲ್ಲಿ ಮೆರವಣಿಗೆ ಮಾಡಲಾಯಿತು