ದಾವಣಗೆರೆ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ (ಪೋಕ್ಸೊ) ಜಿಲ್ಲೆಯಾದ್ಯಂತ ಒಂದು ವರ್ಷದಲ್ಲಿ 98 ಪ್ರಕರಣ ದಾಖಲಾಗಿವೆ. ಇದೇ ಅವಧಿಯಲ್ಲಿ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಬಾಕಿಯೂ ಸೇರಿದಂತೆ 69 ಪ್ರಕರಣ ಖುಲಾಸೆಯಾಗಿದ್ದು, 16 ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ.

ಸಾಕ್ಷ್ಯಗಳ ಕೊರತೆ, ತನಿಖಾ ಹಂತದಲ್ಲಿನ ಲೋಪದೋಷ, ದೂರುದಾರರು ಹಾಗೂ ಆರೋಪಿ ನಡುವಿನ ಹೊಂದಾಣಿಕೆ ಸೇರಿ ಹಲವು ಕಾರಣಗಳಿಂದ ಪೋಕ್ಸೊ ಅಡಿ ದಾಖಲಾದ ಪ್ರಕರಣಗಳ ಪೈಕಿ ಶಿಕ್ಷೆಯ ಪ್ರಮಾಣ ಕಡಿಮೆ. ವಿಶೇಷ ಪೋಕ್ಸೊ ನ್ಯಾಯಾಲಯದಲ್ಲಿ ಈವರೆಗೆ ಒಟ್ಟು 224 ಪ್ರಕರಣ ವಿಚಾರಣೆಯ ಹಂತದಲ್ಲಿವೆ. 3 ಪ್ರಕರಣ ಸುಳ್ಳು ಎಂಬುದು ಸಾಬೀತಾಗಿದೆ. 20 ಪ್ರಕರಣ ಪೊಲೀಸ್ ತನಿಖೆಯ ಹಂತದಲ್ಲಿವೆ.

‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ–2012’ ಅನುಷ್ಠಾನಗೊಂಡು ದಶಕ ಕಳೆದಿದೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡುವ ಅವಕಾಶ ಕಾಯ್ದೆಯಲ್ಲಿದೆ. ‘ತನಿಖಾ ಹಂತದಲ್ಲಿ ಸಂತ್ರಸ್ತೆಯರು ಹಾಗೂ ಪಾಲಕರು ತೋರುವ ಅಸಹಕಾರದ ಕಾರಣಕ್ಕೂ ಪೂರಕ ಸಾಕ್ಷ್ಯ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ’ ಎಂಬುದು ಪೊಲೀಸರ ಅಳಲು.

‘ಪೋಕ್ಸೊ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಪ್ರೀತಿ–ಪ್ರೇಮಕ್ಕೆ ಸಂಬಂಧಿಸಿದವು ಹೆಚ್ಚು. ಹದಿಹರೆಯ ವಯಸ್ಸಿನಲ್ಲಿ ಆಕರ್ಷಣೆಗೆ ಒಳಗಾಗುವ ಬಾಲಕಿಯರು ಅಂತಿಮವಾಗಿ ಪೋಕ್ಸೊ ಕಾಯ್ದೆ ವ್ಯಾಪ್ತಿಗೆ ಬರುತ್ತಿದ್ದಾರೆ. ಪ್ರಕರಣ ದಾಖಲಾದ ಬಳಿಕ ಸಂತ್ರಸ್ತೆ ತನಿಖೆಗೆ ಸಹಕರಿಸುವುದಿಲ್ಲ. ಬಹುತೇಕ ಪಾಲಕರು ಮಾನ–ಮರ್ಯಾದೆಗೆ ಅಂಜುತ್ತಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ವಿಚಾರಣೆಯ ಸಂದರ್ಭ ಸಂತ್ರಸ್ತೆಯು ನ್ಯಾಯಾಲಯದಲ್ಲಿ ನೀಡುವ ಹೇಳಿಕೆಯ ಮೇಲೆ ಪ್ರಕರಣ ನಿರ್ಧಾರವಾಗುತ್ತದೆ. ಕೆಲ ಸಂತ್ರಸ್ತೆಯರು ಪೂರಕ ಸಾಕ್ಷ್ಯ ನುಡಿಯುವುದಿಲ್ಲ. ಇದರಿಂದ ದೌರ್ಜನ್ಯ ಎಸಗಿದ ಆರೋಪಿ ಶಿಕ್ಷೆಯಿಂದ ತಪ್ಪಿಸಿಕೊಳ್ಳುವಂತೆ ಆಗುತ್ತಿದೆ’ ಎಂಬುದು ವಕೀಲರೊಬ್ಬರ ಅಭಿಪ್ರಾಯ.

ಬಾಲಕನ ಮೇಲೂ ದೌರ್ಜನ್ಯ

ಜಿಲ್ಲೆಯಾದ್ಯಂತ ದಾಖಲಾಗಿರುವ 98 ಪೋಕ್ಸೊ ಪ್ರಕರಣಗಳಲ್ಲಿ ಬಾಲಕಿಯರ ಮೇಲೆ ನಡೆದ ದೌರ್ಜನ್ಯ ಪ್ರಕರಣ 97. ಒಬ್ಬ ಬಾಲಕನ ಮೇಲೂ ವ್ಯಕ್ತಿಯೊಬ್ಬನಿಂದ ದೌರ್ಜನ್ಯ ನಡೆದ ಕುರಿತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪೊಲೀಸ್ ಠಾಣೆಯ ಎಫ್ಐಆರ್ ಆಧರಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

‘ಬಾಲಕಿಯರಷ್ಟೇ ಬಾಲಕರು ಕೂಡ ಅಪಾಯಕಾರಿ ಸ್ಥಿತಿ ಎದುರಿಸುತ್ತಿದ್ದಾರೆ. ಈ ದೌರ್ಜನ್ಯಗಳನ್ನು ಬಾಲಕರು ಬಹಿರಂಗಪಡಿಸುವುದು ವಿರಳ. ಪಾಲಕರು ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಬಾಲಕ ಮತ್ತು ಬಾಲಕಿಯರಲ್ಲಿ ಈ ಕುರಿತು ಅರಿವು ಮೂಡಿಸಬೇಕು. ವಿಶೇಷವಾಗಿ ಬಾಲಕಿಯರು ಶಾಲೆಯಿಂದ ಹೊರಗೆ ಉಳಿಯದಂತೆ ಎಚ್ಚರ ವಹಿಸಿದರೆ ಪೋಕ್ಸೊ ಪ್ರಕರಣ ತಡೆಯಲು ಸಾಧ್ಯವಿದೆ’ ಎಂಬುದು ಅಧಿಕಾರಿಯೊಬ್ಬರ ಸಲಹೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.