ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಗನಕ್ಕೇರಿದ ತರಕಾರಿ ದರ: ಗ್ರಾಹಕರಿಗೆ ತೀವ್ರ ಹೊರೆ

ತೀವ್ರ ಬರಗಾಲದಿಂದಾಗಿ ಇಳುವರಿ ಕುಂಠಿತ
Published 22 ಏಪ್ರಿಲ್ 2024, 7:41 IST
Last Updated 22 ಏಪ್ರಿಲ್ 2024, 7:41 IST
ಅಕ್ಷರ ಗಾತ್ರ

ತ್ಯಾವಣಿಗೆ: ಗ್ರಾಮದಲ್ಲಿ ಭಾನುವಾರ ವಾರದ ಸಂತೆಯಲ್ಲಿ ತರಕಾರಿ ಬೆಲೆ ಕಳೆದ ವಾರಕ್ಕಿಂತ ದುಪ್ಪಟ್ಟಾಗಿದೆ. ಪ್ರತಿ ಕೆ.ಜಿ.ಗೆ ಬೀನ್ಸ್ ₹ 200, ಹಸಿಮೆಣಸಿನಕಾಯಿ ₹ 120, ಬೆಂಡೆಕಾಯಿ ₹ 80ರವರೆಗೂ ಏರಿಕೆಯಾಗಿದೆ.

ವಾರದ ಹಿಂದೆ ಕೆ.ಜಿ ಬೀನ್ಸ್ ಹಾಗೂ ಹಸಿಮೆಣಸಿನಕಾಯಿ ಬೆಲೆ ಕ್ರಮವಾಗಿ ₹ 120 ಹಾಗು ₹ 80 ಇತ್ತು. ಬೆಂಡೆಕಾಯಿ ₹ 50ರಿಂದ ₹ 60 ಇತ್ತು. ಆದರೆ, ಈ ವಾರ ಬಹುತೇಕ ಎಲ್ಲಾ ತರಕಾರಿಗಳ ಬೆಲೆ ದುಬಾರಿಯಾಗಿದ್ದರಿಂದ ಗ್ರಾಹಕರಿಗೆ ಹೊರೆಯಾಗಿದೆ.

ನುಗ್ಗೇಕಾಯಿ ಕೆ.ಜಿ.ಗೆ ₹ 40 ಇದ್ದದ್ದು ಈಗ ₹ 80, ಜವಳಿಕಾಯಿ ಮತ್ತು ಮೂಲಂಗಿ ಕೆ.ಜಿ. ಬೆಲೆ ₹ 80ಕ್ಕೆ ಏರಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ತರಕಾರಿ ಬೆಲೆ ಕೇಳಿ ಅಚ್ಚರಿಗೊಂಡ ಮಹಿಳೆಯರು, ಒಂದೆರಡು ದಿನಕ್ಕಾಗುವಷ್ಟು ತರಕಾರಿಯನ್ನು ಮಾತ್ರ ಕೊಂಡೊಯ್ಯುತ್ತಿದ್ದುದು ಕಂಡುಬಂತು.

‘ಬೇಸಿಗೆಯ ಕಾರಣ ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ತಕರಾರಿ ಬರುತ್ತಿಲ್ಲ. ನಾವು ಕೂಡ ದುಬಾರಿ ಬೆಲೆ ತೆತ್ತು ಖರೀದಿಸಿ ತಂದು ಮಾರಾಟ ಮಾಡುತ್ತಿದ್ದೇವೆ. ಲಾಭ ಸಿಗುತ್ತಿಲ್ಲ. ಅಲ್ಲದೇ ಬಿಸಿಲಿನ ಜಳಕ್ಕೆ ತರಕಾರಿಗಳು ಒಣಗುತ್ತಿವೆ’ ಎಂದು ತರಕಾರಿ ವ್ಯಾಪಾರಿ ಉಮೇಶ್ ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

ರಥೋತ್ಸವ, ಮದುವೆ ಸಮಾರಂಭಗಳು ಹೆಚ್ಚಾಗಿ ನಡೆಯುತ್ತಿರುವುದರಿಂದ ಬೇಡಿಕೆ ಹೆಚ್ಚಿದೆ. ಮಳೆ ಇಲ್ಲದ ಕಾರಣ ತರಕಾರಿ ಇಳುವರಿ ಕುಂಠಿತವಾಗಿರುವುದೂ ಬೆಲೆ ಏರಿಕೆಗೆ ಕಾರಣ ಎಂದು ವರ್ತಕರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT