ದಾವಣಗೆರೆ: ಪತ್ರಿಕೋದ್ಯಮ ಕೇವಲ ವೃತ್ತಿಯಲ್ಲ, ಅದೊಂದು ಜವಾಬ್ದಾರಿ. ಪ್ರಜಾಪ್ರಭುತ್ವವನ್ನು ಜೀವಂತವಾಗಿಡುವ ಶಕ್ತಿ ಪತ್ರಿಕೋದ್ಯಮಕ್ಕೆ ಇದೆ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರಧಾನ ಸಂಚಾಲಕಿ ಲೀಲಾಜಿ ಅಭಿಪ್ರಾಯಪಟ್ಟರು.

ಇಲ್ಲಿನ ಬಿಐಇಟಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಭಾನುವಾರ ಏರ್ಪಡಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಪತ್ರಕರ್ತರು ಸುಖಕ್ಕಾಗಿ ಅಲ್ಲ, ಸತ್ಯಕ್ಕಾಗಿ ವೃತ್ತಿ ಆಯ್ಕೆ ಮಾಡಿಕೊಂಡಿದ್ದಾರೆ. ಭಯ ಇಲ್ಲದೇ ಸತ್ಯವನ್ನು ಬರೆಯುವಾಗ ಎದುರಾಗಬಹುದಾದ ಒತ್ತಡವನ್ನು ನಿರ್ಲಕ್ಷಿಸುತ್ತಾರೆ. ಪತ್ರಕರ್ತರ ಒಂದು ಲೇಖನ, ವರದಿ, ಪ್ರಶ್ನೆ ಸರ್ಕಾರವನ್ನೇ ಬದಲಿಸಬಹುದು. ಅನ್ಯಾಯದ ಕೋಟೆಗಳನ್ನೇ ಬೀಳಿಸಬಹುದು’ ಎಂದು ಹೇಳಿದರು.

‘ಪ್ರಸ್ತುತ ದಿನಗಳಲ್ಲಿ ಸತ್ಯ ಹೇಳಿದವರಿಗೆ ಪ್ರಸಂಶೆಗಿಂತ ಅಪಾಯ ಹೆಚ್ಚು. ಸುಳ್ಳು ವೇಗವಾಗಿ ಹರಡುವಾಗ ಸತ್ಯ ನಿಧಾನವಾಗಿ ನಡೆಯುತ್ತಿದೆ. ಆ ಕ್ಷಣದಲ್ಲಿ ನಿರ್ಭಯವಾಗಿ ನಿಲ್ಲುವವರೇ ಪತ್ರಕರ್ತರು. ಜನರ ನೋವನ್ನು ನೋಡುವ ದೃಷ್ಟಿ, ಧ್ವನಿಯಾಗುವ ಧೈರ್ಯ, ಅನ್ಯಾಯವನ್ನು ಪ್ರಶ್ನಿಸುವ ಶಕ್ತಿ ನಿಜವಾದ ಪತ್ರಕರ್ತನ ಗುರುತು. ಮೌನವಾಗಿರುವ ಜನರಿಗೆ ಪತ್ರಕರ್ತರು ಧ್ವನಿಯಾಗಬಲ್ಲರು’ ಎಂದರು.

‘ನೈಜ ಪತ್ರಕರ್ತರ ಲೇಖನಿ ಸತ್ಯಕ್ಕಾಗಿ, ನ್ಯಾಯಕ್ಕಾಗಿ ಮೀಸಲಿರಬೇಕು. ಪತ್ರಕರ್ತರ ಧೈರ್ಯ ಎಂದಿಗೂ ಕುಗ್ಗಬಾರದು. ಪತ್ರಕರ್ತರು ಇದ್ದಾಗ ಮಾತ್ರ ದೇಶಕ್ಕೆ ಬೆಳಕು. ಜನರಿಗೆ ನ್ಯಾಯ ಸಿಗುತ್ತದೆ. ಪತ್ರಕರ್ತ ಮೌನ ವಹಿಸಿದರೆ ಸಮಾಜಕ್ಕೆ ತೊಂದರೆ ಆಗಲಿದೆ’ ಎಂದು ಎಚ್ಚರಿಕೆ ನೀಡಿದರು.

‘ಸುಳ್ಳಿನ ವಿರುದ್ಧ ಸತ್ಯ, ಭಯದ ವಿರುದ್ಧ ಧೈರ್ಯ ಹಾಗೂ ಅನ್ಯಾಯದ ವಿರುದ್ಧ ನ್ಯಾಯದ ಯುದ್ದವೇ ಪತ್ರಿಕೋದ್ಯಮ. ಪತ್ರಕರ್ತರು ಎಂದಿಗೂ ಕರ್ತವ್ಯ ಮರೆಯಬಾರದು. ಧ್ವನಿ ಮೌನವಾಗಬಾರದು, ಧೈರ್ಯ ಕುಗ್ಗಬಾರದು. ಆಗ ಮಾತ್ರ ಸಮಾಜಕ್ಕೆ ಉತ್ತಮ ಭವಿಷ್ಯ ಇರಲು ಸಾಧ್ಯ’ ಎಂದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್ ಪ್ರತಿಜ್ಞಾವಿಧಿ ಬೋಧಿಸಿದರು. ಪತ್ರಕರ್ತರಾದ ಬಿ.ಎನ್. ಮಲ್ಲೇಶ್, ಪತ್ರಕರ್ತ ಬಾ.ಮ. ಬಸವರಾಜಯ್ಯ, ಸಂಘದ ನೂತನ ಅಧ್ಯಕ್ಷ ಇ.ಎಂ. ಮಂಜುನಾಥ, ಪ್ರಧಾನ ಕಾರ್ಯದರ್ಶಿ ಎನ್.ವಿ. ಬದರಿನಾಥ್, ಖಜಾಂಚಿ ಜೆ.ಎಸ್. ವೀರೇಶ್, ರಾಜ್ಯ ಸಮಿತಿ ಸದಸ್ಯ ಕೆ. ಚಂದ್ರಣ್ಣ, ರಾಷ್ಟ್ರೀಯ ಸಮಿತಿ ಸದಸ್ಯ ಎಸ್.ಕೆ. ಒಡೆಯರ್, ಜಿಲ್ಲಾ ವರದಿಗಾರರ ಕೂಟ ಅಧ್ಯಕ್ಷ ನಾಗರಾಜ್ ಬಡದಾಳ್, ಪತ್ರಕರ್ತರಾದ ಕೆ.ಏಕಾಂತಪ್ಪ, ಎ.ಫಕ್ರುದ್ದೀನ್, ಎಚ್.ಬಿ. ಮಂಜುನಾಥ್, ಸದಾನಂದ ಹೆಗಡೆ, ಮಂಜುನಾಥ ಗೌರಕ್ಕಳವರ್, ಬಸವರಾಜ ದೊಡ್ಡಮನಿ, ಯಶವಂತ್ಕುಮಾರ್, ಗಣೇಶ್ ಕಮಲಾಪುರ, ಆರ್.ರವಿ, ಈ.ಪವನ್ಕುಮಾರ್, ಮಲ್ಲಿಕಾರ್ಜುನ್ ಕಬ್ಬೂರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.