ಮಂಗಳವಾರ, ಸೆಪ್ಟೆಂಬರ್ 28, 2021
22 °C

ಕಟ್ಟಡ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ನೀಡಲಾಗುವ ಆಹಾರ ಕಿಟ್‍ಗಳನ್ನು ಮಂಗಳವಾರ ಶಾಸಕ ಶಾಮನೂರು ಶಿವಶಂಕರಪ್ಪ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿತರಿಸಿದರು.

ಕಟ್ಟಡ ಕಾರ್ಮಿಕರು ದೇಶ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವವರು. ಅಂಥವರ ಸಂಕಷ್ಟಕ್ಕೆ ಸರ್ಕಾರಗಳು ಶೀಘ್ರ ಸ್ಪಂದಿಸುವಂತಾಗಬೇಕು ಎಂದು ಶಾಮನೂರು ಹೇಳಿದರು.

ಕೊರೊನಾ ಒಂದು ಮತ್ತು ಎರಡನೇ ಅಲೆ ವೇಳೆ ಕಟ್ಟಡ ಕಾರ್ಮಿಕರು ಸೇರಿ ಅನೇಕ ವೃತ್ತಿಪರ ಜನರಿಗೆ ತೊಂದರೆ ಆಯಿತು. ತಕ್ಷಣ ಸ್ಪಂದಿಸಬೇಕಾದ ಸರ್ಕಾರ ಬಹಳ ತಡವಾಗಿ ಸ್ಪಂದಿಸಿದೆ. ಈಗ ಮೂರನೇ ಅಲೆ ಆರಂಭಗೊಳ್ಳುವ ಸಮಯದಲ್ಲಿ  ರಾಜ್ಯ ಸರ್ಕಾರ ಕ್ಯಾಬಿನೆಟ್ ರಚನೆಯಲ್ಲಿ ಮುಳುಗಿದೆ ಎಂದು ಟೀಕಿಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಪಾಲಿಕೆಯ ವಿರೋಧ ಪಕ್ಷದ ನಾಯಕ ಎ. ನಾಗರಾಜ್, ಸದಸ್ಯರಾದ ಎ.ಬಿ. ರಹೀಂ, ಕೆ.ಚಮನ್‍ಸಾಬ್, ಜಾಕೀರ್‌ ಅಲಿ, ಶಫೀಕ್ ಪಂಡಿತ್, ಉಮಾಶಂಕರ್, ಕಾರ್ಮಿಕ ಇಲಾಖೆಯ ಅಧಿಕಾರಿಗಳಾದ ವೀಣಾ ಎಸ್.ಆರ್., ಇಬ್ರಾಹಿಂ ಸಾಬ್, ರಾಜಶೇಖರ್ ಹಿರೇಮಠ್, ಮಂಜು, ಮಧು, ಮುಖಂಡರಾದ ಹಾಲಸ್ವಾಮಿ, ಕರಿಬಸಪ್ಪ, ಅಬ್ದುಲ್ ಜಬ್ಬಾರ್, ವಾಸೀಮ್ ಚಾರ್ಲಿ ಅವರೂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.