ಬುಧವಾರ, ಮಾರ್ಚ್ 22, 2023
19 °C

ಧೂಡಾದಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಗರದ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಚಾಲನೆ ನೀಡಲಾಯಿತು.

ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಎಸ್.ಎ. ರವೀಂದ್ರನಾಥ್, ಧೂಡಾ ಅಧ್ಯಕ್ಷ ರಾಜನಹಳ್ಳಿ‌ ಶಿವಕುಮಾರ್, ಧೂಡಾ ಸದಸ್ಯರಾದ ಸದಸ್ಯರಾದ ನಾಗರಾಜ ಎಂ. ರೋಖಡೆ, ಡಿ.ವಿ. ಜಯರುದ್ರಪ್ಪ, ಆರ್‌.ಎಲ್‌. ದೇವಿರಮ್ಮ, ಸೌಭಾಗ್ಯ ಮುಕುಂದ, ಬಿಜೆಪಿ ಮುಖಂಡ ಯಶವಂತರಾವ್‌ ಜಾಧವ್‌, ಗೋಣೆಪ್ಪ ಅವರು ಕಾಮಗಾರಿಗಳಿಗೆ ಚಾಲನೆ ನೀಡಿದರು.

ಎಸ್.ಎಂ. ಕೃಷ್ಣ ನಗರದಲ್ಲಿರುವ ಪಾರ್ಕ್ ಅಭಿವೃದ್ಧಿ, ಬಾಬೂ ಜಗಜೀವನ್ ರಾಂ ನಗರದ ಪಾರ್ಕ್ ಅಭಿವೃದ್ಧಿಯ ಉದ್ಘಾಟನೆ, ವೀರಮದಕರಿ ನಾಯಕ ವೃತ್ತದ (ಹೊಂಡದ ಸರ್ಕಲ್) ನೀರಿನ ಕಾರಂಜಿ, ಶಿವಾಜಿ ಸರ್ಕಲ್‌ನ ನೀರಿನ ಕಾರಂಜಿ, ಪಿಬಿ ರಸ್ತೆಯ ಸಂಗೊಳ್ಳಿ ರಾಯಣ್ಣ ವೃತ್ತದ ಅಭಿವೃದ್ಧಿಯ ಕಾಮಗಾರಿ ಹೀಗೆ ₹ 61 ಲಕ್ಷ ವೆಚ್ಚದ ಕಾಮಗಾರಿಗಳ ಉದ್ಘಾಟನೆ, ₹ 27 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

ಧೂಡಾ ಆಯುಕ್ತ ಕುಮಾರಸ್ವಾಮಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು