‘ಜೈ ಶ್ರೀರಾಮ್’ ಘೋಷಣೆಗೆ ಆಕ್ಷೇಪ
ಮಾಜಿ ಸಂಸದ ದಿವಂಗತ ಜಿ.ಮಲ್ಲಿಕಾರ್ಜುನಪ್ಪ ಮತ್ತು ಹಾಲಮ್ಮ ಹೆಸರಿನಲ್ಲಿ ‘ಶರಣ ಸಿರಿ’ ಪ್ರಶಸ್ತಿಯ ದತ್ತಿನಿಧಿ ಸ್ಥಾಪಿಸಿದ ಬಿಜೆಪಿ ನಾಯಕಿ ಗಾಯತ್ರಿ ಸಿದ್ದೇಶ್ವರ ಅವರು ಭಾಷಣದ ಅಂತ್ಯದಲ್ಲಿ ‘ಜೈ ಶ್ರೀರಾಮ್’ ಎಂದು ಕೂಗಿದ್ದಕ್ಕೆ ಆಕ್ಷೇಪ ವ್ಯಕ್ತವಾಯಿತು. ‘ಬಸವಣ್ಣನವರನ್ನು ಮರೆಯುವುದು ಸರಿಯಲ್ಲ. ಶರಣ ಧರ್ಮಕ್ಕೆ ವಿರುದ್ಧವಾಗಿ ಯಾರೊಬ್ಬರೂ ನಡೆಯಬಾರದು’ ಎಂದು ‘ಶರಣ ಸಿರಿ’ ಪ್ರಶಸ್ತಿ ಸ್ವೀಕರಿಸಿದ ಎಚ್.ಎಸ್.ಮಲ್ಲಿಕಾರ್ಜುನಪ್ಪ ಆಕ್ಷೇಪ ದಾಖಲಿಸಿದರು. ‘ಗಾಯತ್ರಿ ಸಿದ್ಧೇಶ್ವರ ಇನ್ನೂ ರಾಜಕೀಯ ಗುಂಗಿನಲ್ಲೇ ಇದ್ದಾರೆ’ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸೂಕ್ಷ್ಮವಾಗಿ ಹೇಳಿದರು.