ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಜಿಲ್ಲೆಯಲ್ಲಿ ಎಂಟು ಮಂದಿಗೆ ಕೊರೊನಾ ದೃಢ

Last Updated 9 ಜೂನ್ 2020, 12:58 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಮತ್ತೆ 8 ಮಂದಿಗೆ ಕೊರೊನಾ ವೈರಸ್‌ ಸೋಂಕು ಇರುವುದು ಮಂಗಳವಾರ ದೃಢಪಟ್ಟಿದೆ.

ಎಸ್‌ಪಿಎಸ್‌ ನಗರ ಕಂಟೈನ್‌ಮೆಂಟ್‌ ವಲಯದ ಸಂಪರ್ಕದಿಂದ 34 ವರ್ಷದ ಮಹಿಳೆಗೆ (ಪಿ.5816) ಸೋಂಕು ಬಂದಿದೆ. ಜಾಲಿನಗರದ 23 ವರ್ಷದ ಯುವಕನ (ಪಿ.3862) ಸಂಪರ್ಕದಿಂದ 40 ಮತ್ತು 62 ವರ್ಷದ ಪುರುಷರಲ್ಲಿ (ಪಿ.5817, ಪಿ.5818) ವೈರಸ್‌ ಕಾಣಿಸಿಕೊಂಡಿದೆ. ಬೇತೂರು ರಸ್ತೆಯ 65 ವರ್ಷದ ಮಹಿಳೆಯ (ಪಿ.3857) ಸಂಪರ್ಕದಿಂದ 58 ವರ್ಷದ ಪುರುಷ (ಪಿ.5819) ಹಾಗೂ 48 ವರ್ಷದ ಮಹಿಳೆಗೆ (ಪಿ.5820) ಸೋಂಕು ತಗುಲಿದೆ.

ಎಸ್‌ಎಸ್‌ ಲೇಔಟ್‌ನ 35 ವರ್ಷದ ವ್ಯಕ್ತಿಯಿಂದ (ಪಿ.3635) 66, 36 ಮತ್ತು 38 ವರ್ಷದ ಮಹಿಳೆಯರಲ್ಲಿ (ಪಿ.5821, ಪಿ.5822, ಪಿ.5823) ಸೋಂಕು ಕಾಣಿಸಿಕೊಂಡಿದೆ.

ಜಿಲ್ಲೆಯಲ್ಲಿ ಇಲ್ಲಿವರೆಗೆ ಒಟ್ಟು ಸೋಂಕಿತರ ಸಂಖ್ಯೆ 211 ಆಗಿದ್ದು, 157 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 6 ಮಂದಿ ಮೃತಪಟ್ಟಿದ್ದಾರೆ. 48 ಸಕ್ರಿಯ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT