ಯೋಧ ಹನುಮಂತಪ್ಪನ ಕಂಚಿನ ಪುತ್ಥಳಿ ಸ್ಥಾಪನೆ

7
ಸಿಂಗ್ರಿಹಳ್ಳಿಯಲ್ಲಿ ಜ.26ರಂದು ಅನಾವರಣ

ಯೋಧ ಹನುಮಂತಪ್ಪನ ಕಂಚಿನ ಪುತ್ಥಳಿ ಸ್ಥಾಪನೆ

Published:
Updated:
Deccan Herald

ಉಚ್ಚಂಗಿದುರ್ಗ: ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಕೆ.ಹನುಮಂತಪ್ಪ ಅವರ ನೆನಪಿಗಾಗಿ ಬುಧವಾರ ವೀರಯೋಧರಿಗೆ ನಮನ ಕಾರ್ಯಕ್ರಮ ನಡೆಯಿತು.

ಉಪನ್ಯಾಸಕ ಪ್ರೊ.ತಿಮ್ಮಪ್ಪ ಮಾತನಾಡಿ, ಜಗತ್ತಿನಲ್ಲಿ ದ್ವೇಷ, ಅಸೂಯೆ, ಸುಳ್ಳು, ಅಹಂಕಾರಗಳು ತಾಂಡವಾಡುತ್ತಿದ್ದು, ಗಲಭೆ, ಯುದ್ಧಗಳಂತಹ ಕೃತ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಬಂದೂಕು ಹಿಡಿಯುವ ಕೈಯಲ್ಲಿ ಹೂವು ನೀಡುವ ಸಂಸ್ಕೃತಿ ನಿರ್ಮಾಣವಾದಾಗ ಶಾಂತಿ ಲಭಿಸಲು ಸಾಧ್ಯ ಎಂದರು.

‘ಬಡತನ ಮತ್ತು ಕೌಟುಂಬಿಕ ಕಾರಣಗಳಿಗೆ ಯುವಕರು ಸೈನ್ಯ ಸೇರುತ್ತಿದ್ದು, ದೇಶದ ಮೂರೇ ಒಂದು ಭಾಗ ಅನುದಾನವನ್ನು ಸೈನಿಕರಿಗಾಗಿ ಖರ್ಚು ಮಾಡಲಾಗುತ್ತಿದೆ. ಇದು ಅನಿವಾರ್ಯ ಎಂದು ಹೇಳಿದರು.

ಅಪರ ಸರ್ಕಾರಿ ಅಭಿಯೋಜಕ ಕಣವಿಹಳ್ಳಿ ಮಂಜುನಾಥ್ ಮಾತನಾಡಿ, ಸೈನಿಕರು ಮತ್ತು ರೈತ ಎಲ್ಲಿವರೆಗೂ ಸುರಕ್ಷಿತ ಮತ್ತು ಸುಖವಾಗಿರುತ್ತಾರೋ ಅಲ್ಲಿವರೆಗೆ ದೇಶ ಸಮೃದ್ದವಾಗಿರುತ್ತದೆ. ಸೈನಿಕರು ಹಗಲು-ರಾತ್ರಿ ಎನ್ನದೇ ಗಡಿಯನ್ನು ಕಾಯುತ್ತಿರುವುದರಿಂದ ನಾವೆಲ್ಲಾ ಸುರಕ್ಷಿತವಾಗಿದ್ದೇವೆ. ಸೈನಿಕರನ್ನು ಪ್ರತಿಯೊಬ್ಬರೂ ಗೌರವಿಸಬೇಕು’ ಎಂದರು.

ಬೆಳಗಾವಿಯ ಸೈನಿಕ ದಳದ ಸುಬೇದಾರ್ ಹನುಮಂತರೆಡ್ಡಿ ಮಾತನಾಡಿ, ಯೋಧರಿಗೆ ನಮನ ಕಾರ್ಯಕ್ರಮದಡಿ ಸರ್ಕಾರ ಮೃತ ಯೋಧರನ್ನು ಸ್ಮರಿಸುವ ಕೆಲಸ ಮಾಡುತ್ತಿದೆ. ಸಿಂಗ್ರಿಹಳ್ಳಿ ಗ್ರಾಮದಲ್ಲಿ ಜನವರಿ 26ರಂದು ಮೃತ ಯೋಧ ಹನುಮಂತಪ್ಪ ಅವರ ಕಂಚಿನ ಪುತ್ಥಳಿ ಅನಾವರಣಗೊಳಿಸಲಾಗುವುದು ಎಂದು ತಿಳಿಸಿದರು.

ಯೋಧರಾದ ರಾಜಾ ಪೂಜಾರ್, ಬಸಪ್ಪ ಬೇತೂರ್, ರವಿನಾಯ್ಕ, ಟಿ.ಎಲ್.ರವಿ, ಸತೀಶ್, ದುರುಗಪ್ಪ, ಸುರೇಶ್, ಕೊಟ್ರಗೌಡ, ಗಿರಿಜಮ್ಮ ಅವರನ್ನು ಸನ್ಮಾನಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಟಿ. ಶಾಂತಮ್ಮ ಶಿವಪ್ಪ ಅಧ್ಯಕ್ಷತೆ ವಹಿಸಿದ್ದರು. ನಿಯೋಜಿತ ಸೇವಾ ಪ್ರತಿನಿಧಿ ಮಂಜುನಾಥರೆಡ್ಡಿ, ತಾಲ್ಲೂಕು ಪಂಚಾಯಿತಿ ಸದಸ್ಯ ನಾಗರಾಜ್, ಅನುಮೋಲ್ ಶಾಲೆಯ ಪ್ರಾಚಾರ್ಯ ಯು. ಕೊಟ್ರೇಶ್, ಕುಮಾರ್, ಗಂಗಾಮತ ಸಮಾಜದ ಅಧ್ತಕ್ಷ ಕೋಳಿ ಮಂಜುನಾಥ್, ಎನ್. ರವಿ, ಹೇಮಣ್ಣ ಮೊರಗೇರಿ, ಯೋಧನ ತಾಯಿ ಗಿರಿಜಮ್ಮ, ಎಸ್.ಎಂ. ಕೊಟ್ರಯ್ಯ ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !