ಬಸವಾಪಟ್ಟಣ: ಬೇಸಿಗೆ ಕಾಲಿಡುತ್ತಿದ್ದಂತೆ ಎಲ್ಲರ ಮೆಚ್ಚಿನ ತರಕಾರಿ ನುಗ್ಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

‘ನುಗ್ಗೆ ತುಂಬಾ ಪೌಷ್ಟಿಕಾಂಶದಿಂದ ಕೂಡಿದ್ದು, ಇದರಲ್ಲಿ ವಿಟಮಿನ್ ಎ ಮತ್ತು ಸಿ, ಕಬ್ಬಿಣಾಂಶ, ಕ್ಯಾಲ್ಶಿಯಂ ಹೇರಳವಾಗಿರುತ್ತದೆ. ಮೂಳೆಗಳ ಬಲವನ್ನು ಹೆಚ್ಚಿಸಿ ಚರ್ಮದ ಆರೋಗ್ಯವನ್ನು ರಕ್ಷಿಸುತ್ತದೆ. ಮಾರ್ಚ್ನಿಂದ ಜೂನ್ವರೆಗೆ ಹೇರಳವಾಗಿ ದೊರೆಯುವ ಈ ತರಕಾರಿ ಈಗ ಮಾರುಕಟ್ಟೆಗೆ ಬಂದಿದೆ’ ಎನ್ನುತ್ತಾರೆ ಸಹಾಯಕ ತೋಟಗಾರಿಕೆ ಅಧಿಕಾರಿ ಸೌರಭ್ ಯಮಾಜೆ.

‘ಹೊನ್ನಾಳಿ, ಚನ್ನಗಿರಿ, ಹರಿಹರ ತಾಲ್ಲೂಕಿನಲ್ಲಿ ಬೆಳೆಯುವ ನುಗ್ಗೆಕಾಯಿಯನ್ನು ರೈತರು ಸಗಟಾಗಿ ಮಾರುತ್ತಾರೆ. ಈಗ ನುಗ್ಗೆಕಾಯಿಯ ದರ ಕ್ವಿಂಟಲ್ಗೆ ₹ 3,500ರಿಂದ ₹ 4,000ದವರೆಗೆ ಇದೆ. ಆದರೆ, ಕಳೆದ ವರ್ಷ ಕ್ವಿಂಟಲ್ಗೆ ₹ 10,000ದವರೆಗೆ ಏರಿಕೆಯಾಗಿತ್ತು. ಈಗ ಚಿಲ್ಲರೆ ದರ ಕಿ.ಲೋ.ಗೆ ₹ 40ರಿಂದ ₹ 50ರವರೆಗೆ ಇದೆ. ಯುಗಾದಿಯ ವೇಳೆಗೆ ದರ ಹೆಚ್ಚಾಗುವ ಸಾಧ್ಯತೆ ಇದೆ’ ಎನ್ನುತ್ತಾರೆ ಇಲ್ಲಿನ ಸಗಟು ತರಕಾರಿಯ ವ್ಯಾಪಾರಿ ಮಹಮದ್ಗೌಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.