ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ

Last Updated 7 ಜನವರಿ 2019, 19:21 IST
ಅಕ್ಷರ ಗಾತ್ರ

ದಾವಣಗೆರೆ: ಹರಪನಹಳ್ಳಿ ತಾಲ್ಲೂಕಿನಲ್ಲಿ ತಂದೆಯೇ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸುತ್ತಿದ್ದ ಪ್ರಕರಣ ಚಿಗಟೇರಿ ಪೊಲೀಸ್‌ ಠಾಣೆಯಲ್ಲಿ ಸೋಮವಾರ ದಾಖಲಾಗಿದೆ.

‘15 ವರ್ಷದ ಬಾಲಕಿ ಮೇಲೆ ಆರು ತಿಂಗಳಿಂದ ತಂದೆ ಅತ್ಯಾಚಾರ ನಡೆಸುತ್ತಿದ್ದ. ಒಂದು ದಿನ ಬಾಲಕಿಯ ತಮ್ಮ ಈ ದೃಶ್ಯವನ್ನು ನೋಡಿದ್ದಾನೆ. ಯಾರಿಗೂ ವಿಚಾರ ತಿಳಿಸದಂತೆ ಆತನಿಗೂ ಬೆದರಿಕೆ ಹಾಕಿದ್ದಾನೆ. ಡಿಸೆಂಬರ್‌ 26ರಂದು ಮನೆಯಲ್ಲಿ ಸಮಾರಂಭ ಇತ್ತು. ಅಂದು ಮಗಳೊಂದಿಗೆ ತೋಟಕ್ಕೆ ಹೋಗಿದ್ದ ತಂದೆ ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ತಾಯಿ ಹಾಗೂ ಮಗ ಹುಡುಕಲು ತೋಟಕ್ಕೆ ಬಂದಾಗ ಬಾಲಕಿ ಅಳುತ್ತ ಕುಳಿತಿದ್ದಳು. ವಿಚಾರಿಸಿದಾಗ ಆಕೆಯ ಮೇಲೆ ಅತ್ಯಾಚಾರ ನಡೆಸಿರುವ ವಿಚಾರ ಗೊತ್ತಾಗಿದೆ. ಗಂಡನ ವಿರುದ್ಧ ಬಾಲಕಿಯ ತಾಯಿ ದೂರು ನೀಡಿದ್ದು, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಎಂದು ಪೊಲೀಸ್‌ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT